ವೈದ್ಯರೇ ಬದುಕುವುದಿಲ್ಲವೆಂದು ಮನೆಗೆ ಕಳುಹಿಸಿದ ಕೋಮಾಗೆ ಜಾರಿದ್ದ ಮಗನನ್ನು ತನ್ನ ಶಕ್ತಿಯಿಂದ ಬದುಕಿಸಿದ ತಾಯಿ..

0
577

ತಾಯಿ ಎಂದರೆ ಬೆಲೆ ಕಟ್ಟಲಾಗದ ವಸ್ತುವದು ತಾಯಿ ಪ್ರೀತಿ ಇದ್ದಾಗ ತಿಳಿಯದಿದ್ದರೂ ಕಳೆದು ಕೊಂಡ ನಂತರ ಅದರ ಬೆಲೆ ಏನು ಅಂತ ತಿಳಿಯುತ್ತೆ, ಅದಕ್ಕೆ ಹಲವು ಜನರ ಅನುಭವದ ಮಾತಾಗಿದೆ. ಅದರಂತೆ ತಾಯಿ ಶಕ್ತಿಗೆ ಸತ್ತ ಮಕ್ಕಳನ್ನು ಬದುಕಿಸುವ ಶಕ್ತಿ ಇದೆ. ಎನ್ನುವುದಕ್ಕೆ ಒಂದು ಸತ್ಯ ಘಟನೆ ನಡೆದೇ ಹೋಗಿದೆ. ವೈದ್ಯರೇ ಸತ್ತನೆಂದು ಹೇಳಿದ ಹುಡುಗನನ್ನು ತಾಯಿ ತನ್ನ ಕೂಗಿನಿಂದ ಕರೆದು ಮತ್ತೆ ಜೀವ ಬರಿಸಿದ್ದಾಳೆ, ಅಂತ್ಯಸಂಸ್ಕಾರಕ್ಕೆ ಬಂದ ಬಂಧುಗಳು ತಾಯಿಯ ಶಕ್ತಿ ನೋಡಿ ಆಶ್ಚರ್ಯದಿಂದ ನಡುಗಿದ್ದಾರೆ.

Also read: ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ; ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ, ನಿಮ್ಮ ಮೊಬೈಲ್ -ನಲ್ಲಿ ಈ ವೈರಸ್ ಇದಿಯಾ ಚೆಕ್ ಮಾಡಿ..

ಏನಿದು ಘಟನೆ?

ತೆಲಂಗಾಣದ ಸೂರ್ಯಪೇಟೆಯ ಆಸ್ಪತ್ರೆಯೊಂದರಲ್ಲಿ 18 ವರ್ಷದ ಕಿರಣ್ ಎನ್ನುವ ಹುಡುಗನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿತ್ತು, ಆಗ ಕಿರಣ್-ಗೆ ಡೆಂಗ್ಯೂ ಮತ್ತು ಕಾಮಾಲೆ ಇರುವುದು ಪತ್ತೆಯಾಯಿತು. ನಂತರ ಅಲ್ಲಿನ ಸರ್ಕಾರಿ ವೈದ್ಯರು ಕಿರಣ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ವೈದ್ಯರು ಹೇಳಿದಂತೆ ಮಗನನ್ನು ಕಿರಣ್ ತಾಯಿ ಹೈದರಾಬಾದಿಗೆ ಕರೆದುಕೊಂಡು ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿಯೂ ಅವರ ಮಗನ ಆರೋಗ್ಯದ ಸ್ಥಿತಿ ಸುಧಾರಿಸದೇ ಕೋಮಾಗೆ ಜಾರಿದ್ದ. ನಂತರ ಇದಕ್ಕೆ ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರು ಸ್ಪಂಧಿಸದೆ ಕೋಮಾ ಸ್ಥಿತಿಗೆ ಸ್ಥಿತಿ ನೋಡಿದ ವ್ಯದ್ಯರು ಇವನ ಮೆದುಳು ಕೆಲಸ ಮಾಡುತ್ತಿಲ್ಲ, ಅದಕ್ಕಾಗಿ ಇವನನ್ನು ಬದುಕಿಸಲು ಸಾದ್ಯವಿಲ್ಲ, ಎಂದು ವೆಂಟಿಲೇಟರ್‌ನಿಂದ ಹೊರತೆಗೆದು, ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕಳುಹಿಸಿದರು. ಈ ವೇಳೆ ಇವನು ಇನ್ನೂ ಎರಡು ಘಂಟೆ ಮಾತ್ರ ಬದುಕುತ್ತಾನೆ ಎಂದು ವೈದ್ಯರೇ ಹೇಳಿದ್ದರು, ಈ ವಿಷಯ ತಿಳಿದ ಸಂಬಂಧಿಕರು ಅಂತ್ಯ ಸಂಸ್ಕಾರಕ್ಕೆ ಜಮಾಯಿಸಿದರು. ಹಾಗೆಯೇ ಎಲ್ಲ ತಯಾರಿಯನ್ನು ಕೂಡ ಮಾಡಿಕೊಂಡರು.

ಆದರೆ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ ಗ್ರಾಮಸ್ಥರು ಮತ್ತು ಕುಟುಂಬದವರಿಗೆ ಒಂದು ಆಶ್ಚರ್ಯ ಕಾದಿತ್ತು, ಅದು ಏನೆಂದರೆ ಅಲ್ಲಿ ಸೇರಿದ ಜನರು ಕಿರಣ ಬದುಕುವುದು ಸಾದ್ಯವಿಲ್ಲ ಎಂದು ಹೇಳಿದರು ತಾಯಿಗೆ ಮಾತ್ರ ನಂಬಿಕೆ ಇತ್ತು, ಆಸ್ಪತ್ರೆಯ ವೈದ್ಯರೇ, ಊರಿನ ಜನರು ಯಾರೇ ಏನೇ ಹೇಳಿದರು ನನ್ನ ಮಗನನ್ನು ಉಳಿಸಿಕೊಳ್ಳುತ್ತೇನೆ ಎನ್ನುವ ಭರವಸೆ ಆ ತಾಯಿಗೆ ಇತ್ತು, ಈ ಪ್ರಯತ್ನದಲ್ಲಿ ಕಿರಣ ತಾಯಿ. ಸಿದಮ್ಮ ತನ್ನ ಮಗನನ್ನು ಸಾಯಲು ಬಿಡದೆ ಅವನ ಹಾಸಿಗೆ ಪಕ್ಕದಲ್ಲೇ ಕುಳಿತುಕೊಂಡು ನಿಮಿಷಕ್ಕೆ ಒಂದು ಬಾರಿ ಮಗನನ್ನು ಕರೆಯುತ್ತಲೇ ಇದ್ದಳಂತೆ. ಈ ವೇಳೆ ಕಿರಣ್ ನಿಧಾವಾಗಿ ಉಸಿರಾಡುವುದು ಕಂಡು ಬಂದಿದೆ. ಈ ಸಮಯದಲ್ಲಿ ಅಂತ್ಯ ಕ್ರಿಯೆಯನ್ನು ಮುಂದೂಡಿದ ಗ್ರಾಮಸ್ಥರು ಅವನನ್ನು ನೋಡುತ್ತಾ ಕುಳಿತಿದ್ದಾರೆ.

Also read: ಬರೋಬರಿ 30 ವರ್ಷದ ಹಿಂದೆ ತಾನು ವಿದ್ಯಾರ್ಥಿ ಇದ್ದಾಗೆ ಪಡೆದ ಬರಿ 200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ..

ಈ ವೇಳೆ ಕಿರಣ್ ಕಣ್ಣಿನಿಂದ ನೀರು ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯ ರಾಜಾಬಾಬು ರೆಡ್ಡಿ ತಕ್ಷಣ ಕಿರಣ್‍ನ ಸ್ಥಿತಿಯನ್ನು ಅರಿತು ಹೈದರಾಬಾದಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಅ ವೈದ್ಯ ಕಿರಣ್‍ಗೆ ನಾಲ್ಕು ಇಂಜೆಕ್ಷನ್ಸ್ ಕೊಡಲು ಹೇಳಿದ್ದಾರೆ. ನಂತರ ಕಿರಣ್ ಉಸಿರಾಡಲು ಶುರು ಮಾಡಿದ್ದಾನೆ. ನಂತರ ಕಿರಣ್ ನಿಧಾನವಾಗಿ ಚೇತರಿಸಿಕೊಂಡಿದ್ದು, ಈಗ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ತಾಯಿಯೊಂದಿಗೆ ಮಾತನಾಡುತ್ತಾನೆ ಎಂದು ವೈದ್ಯ ರಾಜಾಬಾಬು ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ತಾಯಿ ದೇವರಲ್ಲಿ ಪ್ರಾರ್ಥಿಸಿ ತನ್ನ ಮಗನನ್ನು ಉಳಿಸಿಕೊಂಡಿದ್ದಾಳೆ. ಇದಕ್ಕೆ ಅನ್ನುವುದು ತಾಯಿಗಿಂತ ದೇವರು ಇಲ್ಲ ಅಂತ.