ಬಾಯಿ ಹುಣ್ಣಿನಿಂದ ಕಿರಿಕಿರಿ ಅನುಭವಿಸ್ತಿದೀರಾ? ಹಾಗಿದ್ರೆ ಈ ಕೆಳಗಿನ ಮನೆ ಔಷಧಿ ಮಾಡ್ಕೊಳ್ಳಿ!!!

0
2513

 ಬಾಯಿ ಹುಣ್ಣು ಒಂದಲ್ಲ ಒಂದು ಬಾರಿ ಕಾಣಿಸಿ ಕೊಳ್ಳುವ ಸಾಮಾನ್ಯ ಖಾಯಿಲೆಯಾಗಿದೆ. ಕೆಲವು ಹುಣ್ಣುಗಳು ನಾಲ್ಕೈದು ದಿನವಿದ್ದು ತನ್ನಿಂದತಾನಾಗೆ ಕಡಿಮೆಯಾಗುತ್ತದೆ ಮತ್ತೆ ಕೆಲವು ತಿಂಗಳಾದರೂ ವಾಸಿಯಾಗುವುದಿಲ್ಲ. ವಿಟಮಿನ್ ಕೊರತೆ, ಮಲಬದ್ಧತೆ , ಸ್ಟ್ರೆಸ್,ಹಾರ್ಮೋನಲ್ ಬದಲಾವಣೆ, ರಕ್ತಹೀನತೆ ಹಾಗು ಬ್ಯಾಕ್ಟೀರಿಯಲ್ ಅಥವಾ ವೈರಸ್ ಗಳಿಂದಲೂ ಅಲ್ಸರ್ ಸಾಧ್ಯತೆ ಹೆಚ್ಚು.

೧) ಅಕ್ಕಿ ತೊಳೆದ ನೀರಿನಲ್ಲಿ ಹೇರಳ ಬಿ ವಿಟಮಿನ್ ಗಳಿದ್ದು ಅಲ್ಸರ್ ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ.

source: positivemed.com

೨) ಸೀಬೆ ಎಲೆಗಳನ್ನು ಜಗಿಯುವುದರಿಂದ ಅಥವಾ ಅದರ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ಕಡಿಮೆಯಾಗುತ್ತದೆ.

source: i.ytimg.com

೩) ಊಟದ ನಂತರ ಸೊಂಪಿನ ಕಾಳಿನ ಸೇವನೆ ಉತ್ತಮ.

source: thefitgurus.com

೪) ಬಾಳೆದಿಂಡಿನ ತಿರುಳಿನ ಜ್ಯೂಸು ಅನ್ನು ಕುಡಿಯುವುದರಿಂದ ದೇಹವು ತಂಪಾಗಿ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

source: searchhomeremedy.com

೫) ಅಲೋವೆರಾ ಜೆಲ್ ಅನ್ನು ಹುಣ್ಣಿರುವ ಜಾಗಕ್ಕೆ ಹಚ್ಚಿಕೊಂಡಲ್ಲಿ ಉರಿ ಕಡಿಮೆಯಾಗುತ್ತದೆ.

source: kohajone.com

೬) ಅರಿಶಿನ ಜೊತೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ಕಡಿಮೆಯಾಗುತ್ತದೆ.

source: healthyhabitshub.com

೭) ವೀಳ್ಯ ದೆಲೆಗೆ ಉಪ್ಪನ್ನು ಬೆರೆಸಿ ಸೇವಿಸಿ

೮) ಅಡಿಗೆ ಸೋಡಾದ ಜೊತೆ ಜೇನುತುಪ್ಪವನ್ನು ಬೆರೆಸಿ ಹುಣ್ಣಿಗೆ ಹಚ್ಚಿದ್ದಲ್ಲಿ ತತ್ತಕ್ಷಣ ಪರಿಹಾರ ದೊರೆಯುತ್ತದೆ.

source: healinglifeisnatural.com

೯) ಒಣಕೊಬ್ಬರಿಯನ್ನುಅಥವಾ ಗಸಗಸೆಯನ್ನು ಜಗಿಯುವುದರಿಂದಲೂ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

೧೦) ಹೆಚ್ಚು ಹಣ್ಣು ಮತ್ತು ತರಕಾರಿಗಳ ಸೇವನೆಯು ಉತ್ತಮ ನಾರು ಹಾಗು ವಿಟಮಿನ್ ಗಳನ್ನೂ ನೀಡುವುದರಿಂದ  ಬಾಯಿಹುಣ್ಣು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

source: cdn.akc.org