ಅಯೋಧ್ಯೆ ವಿವಾದದಲ್ಲಿ ರಾಮನ ಪರ ತೀರ್ಪಿಗಾಗಿ 27 ವರ್ಷ ಉಪವಾಸ ಸತ್ಯಾಗ್ರಹ ಮಾಡಿದ ಮಹಿಳೆ ಕತೆ ಹೇಗಿದೆ ನೋಡಿ.!

0
179

ದೇಶದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾದ ಅಯೋದ್ಯ ತೀರ್ಪು ರಾಮನ ಪರ ಬರಲು ಹಲವರ ಹತ್ತಾರು ವರ್ಷಗಳಿಂದ ಹಲವರು ಮಾಡಿದ ತಪಸ್ಸು, ಹರಕೆ, ಹೋರಾಟದ ಪಳವಿದ್ದು ಈಗ ಜಯ ಸಿಕಿದ್ದು ಒಂದು ರೀತಿಯ ನೆಮ್ಮದಿ ತಂದಿದೆ. ಆದರೆ ಈ ತಿರ್ಪಿಗಾಗಿ 27 ವರ್ಷದಿಂದ ಉಪವಾಸ ಮಾಡಿ ರಾಮನಿಗೆ ಜಯ ಸಿಗಲಿ ಎಂದು ಊಟವನ್ನೇ ಬಿಟ್ಟ ಅಧುನಿಕ ಶಬರಿಯ ಕತೆ ಇಲ್ಲಿದ್ದು. ಜಮೀನು ವಿವಾದ ಇತ್ಯರ್ಥವಾಗುವ ತನಕ ಅಂದರೆ 27 ವರ್ಷ ಕಾಲ ಬರೀ ಹಣ್ಣು ಮತ್ತು ಹಾಲು ಕುಡಿದು ಬದುಕಿದ ಮಹಿಳೆಯ ತ್ಯಾಗ ಇಲ್ಲಿದೆ ನೋಡಿ.

27 ವರ್ಷ ಉಪವಾಸ?

ಹೌದು ಮಧ್ಯಪ್ರದೇಶದ ಜಬಲ್‍ಪುರದ ಊರ್ಮಿಳಾ ಚರ್ತುವೇದಿ(81) ರಾಮ ಜನ್ಮಭೂಮಿ ವಿವಾದ ಬಗೆಹರಿಯಲೆಂದು ಉಪವಾಸ ಮಾಡಿದ್ದಾರೆ. ಊರ್ಮಿಳಾ ಅವರು ಸಂಸ್ಕೃತ ಭಾಷಾ ಶಿಕ್ಷಕಿಯಾಗಿದ್ದು, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ 1992ರಿಂದ ಅನ್ನ ಆಹಾರ ತ್ಯಜಿಸಿ ಉಪವಾಸ ಮಾಡಿಕೊಂಡು ಬಂದಿದ್ದಾರೆ. ಜಮೀನು ವಿವಾದ ಇತ್ಯರ್ಥವಾಗುವ ತನಕ ಅಂದರೆ 27 ವರ್ಷ ಕಾಲ ಬರೀ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ ಕಾದು ಭಕ್ತಿ ಮೆರೆದಿದ್ದಾರೆ. ಈಗ ಅವರ ತಪಸ್ಸಿಗೆ ಜಯ ಸಿಕ್ಕಿದ್ದು 27 ವರ್ಷದ ಬೇಡಿಕೆಗೆ ಬೆಲೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಹಿಳೆಯ ಮಗ ಅಮಿತ್ ಚರ್ತುವೇದಿ ಮಾತನಾಡಿ, ಶನಿವಾರ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಅಯೋಧ್ಯೆ ತೀರ್ಪು ಹೊರಡಿಸಿರುವುದನ್ನು ಕೇಳಿ ಅಮ್ಮ ಖುಷಿಪಟ್ಟಿದ್ದಾರೆ. 27 ವರ್ಷದಿಂದ ಊಟ ಬಿಟ್ಟಿದ್ದ ಅವರು ಈಗ ಊಟ ಮಾಡಲು ತೀರ್ಮಾನಿಸಿದ್ದಾರೆ ಅಮ್ಮ ಶ್ರೀರಾಮನ ದೊಡ್ಡ ಭಕ್ತೆ, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಎರಡು ದಶಕಗಳಿಂದ ಅವರು ಕಾಯುತ್ತಿದ್ದರು. ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿಯಾಗಿ ಅಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ಅವರು ಬಹಳ ಖಿನ್ನತೆಗೊಳಗಾಗಿದ್ದರು.

ತಮ್ಮ 54ನೇ ವಯಸ್ಸಿನಲ್ಲಿ ಅವರು ಉಪವಾಸ ಮಾಡಲು ಆರಂಭಿಸಿದರು. ಅನ್ನ ಸೇವಿಸುವುದನ್ನು ಬಿಟ್ಟು ಕೇವಲ ಹಣ್ಣು ಮತ್ತು ಹಾಲನ್ನು ಮಾತ್ರ ಸೇವನೆ ಮಾಡಿಕೊಂಡು ಬಂದಿದ್ದಾರೆ. ಮಧ್ಯಾಹ್ನ, ರಾತ್ರಿ ಊಟ ಮಾಡಲು ಒಪ್ಪುತ್ತಲೇ ಇರಲಿಲ್ಲ ಸಂಬಂಧಿಕರು ಹಲವು ಬಾರಿ ಊಟ ಮಾಡುವಂತೆ ಮನವಿ ಮಾಡಿದರೂ ಅಮ್ಮ ಮಾತ್ರ ತಮ್ಮ ನಿರ್ಧಾರವನ್ನು ಕೈಬಿಡಲಿಲ್ಲ ಇದೀಗ 81 ವರ್ಷದ ಊರ್ಮಿಳಾ ಅವರು ಅಯೋಧ್ಯೆ ವಿವಾದ ಬಗೆಹರಿದಿದ್ದಕ್ಕೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪುತ್ರ ಅಮಿತ್ ವಿವರಿಸಿದ್ದಾರೆ.
ಅಯೋಧ್ಯೆ ಜಮೀನು ವಿವಾದ ತೀರ್ಮಾನವಾಗಿ ಅಮ್ಮನ ಆಸೆ ನೆರವೇರಿದೆ. ಶೀಘ್ರದಲ್ಲೇ ನಮ್ಮ ಕುಟುಂಬ ಅಮ್ಮನ ಉಪವಾಸ ಕೈಬಿಡುವ `ಉದ್ಯಾಪನ್’ ಕಾರ್ಯಕ್ರಮವನ್ನು ಆಯೋಜಿಸಲಿದೆ. ಹಾಗೆಯೇ ನನ್ನ ಅಮ್ಮ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅಮಿತ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಾನು ಸುಪ್ರೀಂಕೋರ್ಟ್ ನ ಸಿಜೆಐ ರಂಜನ್ ಗೋಗೊಯಿ ಅವರಿಗೆ ಪತ್ರ ಬರೆದು ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ. ಅಂತೆ.