ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹಿಟ್ಟನ್ನು ಬೆಡ್‍ಶೀಟ್‍ನಲ್ಲಿ ಸುತ್ತಿ ಶಿಶುವಿನ ಶವವೆಂದು ಅಸ್ಪತ್ರೆಗೆ ಬಂದು ಸಿಕ್ಕಿ ಬಿದ್ದ ಕತರ್ನಾಕ್ ಮಹಿಳೆಯರು..

0
239

ಮಹಿಳೆಯರಿಗೆ ದೇಶದಲ್ಲಿ ಕನಿಕರದ ದೃಷ್ಟಿಯಿಂದ ನೋಡುವುದು ಸಾಮಾನ್ಯವಾಗಿದೆ. ಏಕೆಂದರೆ ಗಂಡು ಮಕ್ಕಳು ಹೇಗಾದರೂ ಜೀವನ ಮಾಡುತ್ತಾರೆ ಯಾವುದೇ ಕಷ್ಟ ಬಂದರು ಹೇಗೋ ಪರಿಹಾರ ಕಂಡುಕೊಳ್ಳುತ್ತಾರೆ ಆದರೆ ಪಾಪ ಮಹಿಳೆಯರು ಏನು ಮಾಡಬೇಕು ಎನುವ ಉದ್ದೇಶದಿಂದ ಯಾವುದೇ ವಿಚಾರವಾಗಿ ಮಹಿಳೆಯರ ಮೇಲೆ ಹೆಚ್ಚು ಅನುಕಂಪ ತೋರಿಸುವುದು ಮೊದಲಿನಿಂದ ಕಂಡು ಬರುತ್ತಿದೆ ಆದರೆ ಕೆಲವೊಂದು ಮಹಿಳೆಯರು ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ, ವಂಚನೆ, ಮೋಸ ಮಾಡಲು ನಿಂತಿದ್ದಾರೆ. ಇಂತಹದೆ ಒಂದು ಘಟನೆ ನಡೆದಿದ್ದು ಕೇವಲ ಹಣಕ್ಕಾಗಿ ಹಿಟ್ಟನ್ನು ಬೆಡ್‍ಶೀಟ್‍ನಲ್ಲಿ ಸುತ್ತಿ ಶಿಶುವಿನ ಶವವೆಂದ ಮಹಿಳೆಯರು ವಂಚನೆ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.

Also read: ಜಿಮ್-ಗಳಲ್ಲಿ ಬಾಡಿ ಬಿಲ್ಡಿಂಗ್ ಮಾಡಲು ಟ್ರೈನರ್-ಗಳ ಮಾತು ಕೇಳಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ, ಅದರಿಂದ ನಿಮ್ಮ ಪುರುಷತ್ವಕ್ಕೇ ಕುತ್ತು ಬಂದೀತು!!

ಹೌದು ಕಳ್ಳತನದಂತಹ ಪ್ರಕರಣಗಳಲ್ಲಿ ಮಹಿಳೆಯ ಪಾಲು ಹೆಚ್ಚಾಗುತ್ತಿದ್ದು ನಾನಾ ತರಹದ ಮಸಲತ್ತುಗಳನ್ನು ಬಳಸಿ ಸರ್ಕಾರ ನೀಡುವ ಕೆಲವೊಂದು ಯೋಜನೆಗಳನ್ನು ಪಡೆಯವಲ್ಲಿವೂ ಮೋಸ ಮಾಡುತ್ತಿದ್ದಾರೆ. ಇಂತಹದೆ ಕೆಲಸ ಮಾಡಲು ಹೋದ ಮಹಿಳೆ ಮಾಡಿದ್ದು ಎಂದು ಅಂತ ಇಲ್ಲಿದೆ ನೋಡಿ. ಮಧ್ಯಪ್ರದೇಶದಲ್ಲಿ ನವಜಾತ ಶಿಶು ಸಾವನ್ನಪ್ಪಿದೆ ಎಂದು ಮಹಿಳೆಯರು ಹಿಟ್ಟನ್ನು ಬೆಡ್‍ಶೀಟಿನಲ್ಲಿ ಸುತ್ತಿ ತಂದ ಮೂವರು ಮಹಿಳೆಯರು ಹಿಟ್ಟನ್ನು ನವಜಾತ ಶಿಶು ಮರಣ ಹೊಂದಿದೆ ಎಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅಂಬುಲೆನ್ಸ್‌ನಲ್ಲಿ ಬಂದ ಮೂವರು ಮಹಿಳೆಯರು, ಅವರಲ್ಲಿ ಓರ್ವ ಮಹಿಳೆಗೆ ಹೆರಿಗೆ ಆಗಿದೆ. ಆದರೆ ಶಿಶು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದಾರೆ. ನಂತರ ನೇರವಾಗಿ ಹೆರಿಗೆ ವಾರ್ಡಿಗೆ ಹೋಗಿ, ಸಿಎಂ ಹೆರಿಗೆ ನೆರವು ಯೋಜನೆಗೆ ಆಕೆಯ ಹೆಸರು ನೋಂದಣಿ ಮಾಡುವಂತೆ ಕೋರಿದ್ದಾರೆ.

ಈ ವೇಳೆ ಸಿಬ್ಬಂದಿ ಶಿಶುವನ್ನು ಪರೀಕ್ಷೆ ಮಾಡಬೇಕು ಎಂದು ಹೇಳಿದಾಗ, ನಮ್ಮ ಸಂಪ್ರದಾಯದಲ್ಲಿ ಮೃತಪಟ್ಟ ಮಗುವಿನ ಮುಖವನ್ನು ತೋರಿಸುವಂತಿಲ್ಲ ಎಂದು ಅವರ ಮುಂದೆ ಮೊಸಳೆ ಕಣ್ಣೀರು ಹಾಕಿದ್ದಾರೆ. ಮಹಿಳೆಯರ ವಿಚಿತ್ರ ವರ್ತನೆ ಕಂಡು ಅನುಮಾನಗೊಂಡ ವೈದರು ಮತ್ತು ಸಿಬ್ಬಂದಿ ಬಲವಂತವಾಗಿ ಮುಖಕ್ಕೆ ಮುಚ್ಚಿದ ಬಟ್ಟೆ ತೆಗೆದಾಗ ವಿಷಯ ಬಯಲಾಗಿದೆ. ಮಹಿಳೆಯರು ಹೊತ್ತು ತಂದಿದ್ದು ಶಿಶುವಲ್ಲ, ಹಿಟ್ಟು ಎಂಬ ವಿಚಾರ ತಿಳಿದಿದೆ. ವೈದ್ಯರನ್ನು ನಂಬಿಸಲು ಹಿಟ್ಟಿಗೆ ಕೆಂಪು ಪೇಂಟ್ ಮಾಡಿ, ನವಜಾತ ಶಿಶುವಿನ ರೀತಿ ಕಾಣುವಂತೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

Also read: ಆಟೋದಲ್ಲೇ ಮಗುವನ್ನು ಮರೆತು ಹೋದ ಮಹಾತಾಯಿ; ಮೊಬೈಲ್-ನಲ್ಲಿ ಮಗ್ನಳಾಗಿದ್ದಳಂತೆ..

ಆಗ ವೈದ್ಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಮಹಿಳೆಯರ ವಂಚನೆ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಮತ್ತೆ ಮಹಿಳೆಯರು ಕಣ್ಣೀರಿಡುತ್ತಾ, ಸರ್ಕಾರದಿಂದ ಬರುವ 16 ಸಾವಿರ
ಹಣಕ್ಕಾಗಿ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ. ಇಂತಹ ಘಟನೆಗಳು ಎಲ್ಲ ಕಡೆಯಲ್ಲೂ ನಡೆಯುತ್ತಾನೆ ಇವೆ ಅದರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮೋಸ, ವಂಚನೆ ಮಾಡುವಲ್ಲಿ ನಿಪುಣರಾಗುತ್ತಿದ್ದಾರೆ. ಬರಿ ಕಳ್ಳತನ ಮಾಡಿದರೆ ಸ್ವಲ್ಪ ಹಣ ಸಿಗುತ್ತದೆ ಆದರೆ ಸರ್ಕಾರ ನೀಡುವ ಹಣ ಒಂದಷ್ಟು ದಿನವಾದರೂ ಎಂಜಾಯ್ ಮಾಡಲು ಆಗುತ್ತೆ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದರಿಂದ ಸರಿಯಾಗಿ ಯಾರಿಗೆ ಸೇರಬೇಕು ಅಂತಹ ಸಂಸತ್ರರಿಗೆ ಸೇರಿತ್ತಿಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.