ಹಿಂದೂಗಳ ಭಾವನೆಗಳನ್ನು ಗೌರವಿಸಿ ರಾಮ ಮಂದಿರ ನಿರ್ಮಾಣಕ್ಕೆ ಜಾಗದ ಜತೆಗೆ ಚಿನ್ನದ ಇಟ್ಟಿಗೆ ನೀಡುತ್ತೇನೆ ಮೊಘಲ್ ವಂಶಸ್ಥನ ಘೋಷಣೆ!!

0
86

ಭಾರತ ದೇಶದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ ಅಯೋಧ್ಯೆಯಲ್ಲಿ ರಾಮ ಮಂದಿರ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸುಪ್ರಿಂ ಕೋರ್ಟ್ ಹೇಗೆ ನಿರ್ಣಯ ನೀಡಿದರು ರಾಮ ಮಂದಿರಕ್ಕೆ ಲಾಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆ ನೀಡುವುದಾಗಿ ಮೊಘಲ್‌ ಸಾಮ್ರಾಜ್ಯದ ಕೊನೆಯ ದೊರೆಯ ಆರನೇ ಪೀಳಿಗೆಯ ವಂಶಸ್ಥ. ಮೊಘಲ್‌ ವಂಶಸ್ಥ ಹಬೀಬುದ್ದೀನ್‌ ಟ್ಯೂಸಿ ಅರ್ಜಿ ಸಲ್ಲಿಸಿದ್ದು, ಒಬ್ಬ ನೈಜ ಮುಸ್ಲಿಮನಾಗಿ ಹಿಂದುಗಳ ಭಾವನೆಗಳನ್ನು ಗೌರವಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದಾರೆ.

ರಾಮ ಮಂದಿರಕ್ಕೆ ಚಿನ್ನದ ಇಟ್ಟಿಗೆ?

ಮೊಘಲ್ ಸಾಮ್ರಾಜ್ಯದ ಆರನೇ ಪೀಳಿಗೆಯ ಹಬೀಬುದ್ದೀನ್ ಟ್ಯೂಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಈ ಕೊಡುಗೆ ನೀಡುವುದಾಗಿ ಪ್ರಕಟಿಸಿದ್ದಾರೆ ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್ ಷಾ ಜಾಫರ್ ಆಗಿದ್ದು ಆತನ ಆರನೇ ಪೀಳಿಗೆಯ ವಂಶಸ್ಥ ಹಬೀಬುದ್ದೀನ್ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಈ ಆಫರ್ ಪ್ರಕಟಿಸಿದ್ದರು. ಆದರೆ ಈಗ ರಾಮ ಜನ್ಮಭೂಮಿ ಭೂವಿವಾದವನ್ನು ಆಲಿಸುತ್ತಿರುವ ಸುಪ್ರೀಂಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿ ತನ್ನ ವಾದವನ್ನು ಆಲಿಸಬೇಕೆಂದು ಕೇಳಿಕೊಂಡಿದ್ದಾರೆ. ಫೆಬ್ರವರಿ 8ರಂದು ಈ ಅರ್ಜಿ ಸಲ್ಲಿಸಿದ್ದು ಇನ್ನೂ ಸುಪ್ರೀಂ ವಿಚಾರಣೆಗೆ ತೆಗೆದುಕೊಂಡಿಲ್ಲ.

ಅರ್ಜಿಯಲ್ಲಿ ಏನಿದೆ?

ವಿವಾದಿತ ಸ್ಥಳಕ್ಕೆ ಸಂಬಂಧಿಸಿದ ಯಾರ ಬಳಿಯೂ ದಾಖಲೆಗಳಿಲ್ಲದ ಕಾರಣ ಯಾರಿಗೂ ಹಕ್ಕಿಲ್ಲ. ಆದರೆ ಮೊಘಲ್ ವಂಶಸ್ಥನಾಗಿರುವುದರಿಂದ ಆ ಜಾಗದ ಮೇಲೆ ನಮಗೆ ಹಕ್ಕಿದೆ. ಹೀಗಾಗಿ ಈ ಜಾಗವನ್ನು ನಮಗೆ ನೀಡುವಂತೆ ಕೇಳಿಕೊಂಡಿದ್ದಾರೆ. ಸೇನೆಯ ನಮಾಜ್‍ಗಾಗಿ ಬಾಬರಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿ ಮೊದಲು ಏನಿತ್ತು ಎನ್ನುವ ವಿಚಾರಕ್ಕೆ ನಾನು ಈಗ ಹೋಗುವುದಿಲ್ಲ. ಒಬ್ಬ ನೈಜ ಮುಸ್ಲಿಮನಾಗಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಜಾಗ ಬಿಟ್ಟುಕೊಡುತ್ತೇನೆ. ಒಂದು ವೇಳೆ ನಮಗೆ ಈ ಭೂಮಿಯನ್ನು ನೀಡಿದರೆ ರಾಮ ಮಂದಿರ ಕಟ್ಟಲು ಜಾಗ ನೀಡುತ್ತೇನೆ ಎಂದು ಟ್ಯೂಸಿ ಹೇಳಿದ್ದಾರೆ.

ಅಯೋಧ್ಯೆಗೆ ಜಾಫರಿಗೆ ಹೇಗೆ ಸಂಬಂಧ?

ಮೊಘಲರ ಕೊನೆಯ ದೊರೆ ಬಹಾದೂರ್ ಷಾ ಜಾಫರಿಗೆ 49 ಮಕ್ಕಳು. ಈ ಪೈಕಿ ಮಿರ್ಜಾ ಕ್ವಾಯಿಷ್ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಪತ್ನಿ ಜೊತೆ ನೇಪಾಳದ ರಾಜಧಾನಿ ಆಗಿರುವ ಕಠ್ಮಂಡುವಿಗೆ ಪರಾರಿಯಾಗಿದ್ದರು. ಈ ದಂಪತಿಯ ಪುತ್ರ ಮಿರ್ಜಾ ಅಬ್ದುಲ್ಲಾ ಹೈದರಾಬಾದಿನಲ್ಲಿ ವಾಸಿಸುತ್ತಿದ್ದರು. ಇವರ ಪುತ್ರ ಮಿರ್ಜಾ ಪ್ಯಾರೆ. ಮಿರ್ಜಾ ಪ್ಯಾರೆಯ ಮೂವರು ಮಕ್ಕಳಲ್ಲಿ ಒಬ್ಬರಾದ ರಾಣಿ ಲೈಲಾ ಉಮಾಹನಿಯನ್ನು ವಿವಾಹವಾಗಿದ್ದು ಹೈದರಾಬಾದ್‍ನ ರಾಜಕುಮಾರ ಮೊಯಿನುದ್ದೀನ್ ಟ್ಯೂಸಿ. ಈ ದಂಪತಿಯ ಪುತ್ರ ಯಾಕೂಬ್ ಆರೀಫ್ ಉದ್ದೀನ್ ಟ್ಯೂಸಿ. ಯಾಕೂಬ್ ಆರೀಫ್ ಟ್ಯೂಸಿಯ ಪುತ್ರನೇ ಹಬಿಬುದ್ದೀನ್ ಟ್ಯೂಸಿ.

ಅದರಂತೆ ಇನ್ನೂ ಅವರು ತಮ್ಮ ಬಳಿಯಲ್ಲೇ ಕೆಲವು ಅಧಿಕಾರಗಳನ್ನು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಶಹಜಹಾನ್‍ನ ಉರೂಸ್ ಸಮಾರಂಭದ ವೇಳೆ ಖ್ಯಾತ ತಾಜ್‍ಮಹಲ್‍ನ ಒಳಗಿನ ಸೆಲ್ಲರ್ ಬಾಗಿಲನ್ನು ಟ್ಯೂಸಿ ಅವರೇ ತೆಗೆಯುತ್ತಾರೆ. 50 ವರ್ಷದ ಟ್ಯೂಸಿ ಪಾಸ್‍ಪೋರ್ಟ್ ಪಡೆಯುವ ಸಂದರ್ಭದಲ್ಲಿ ಮೊಘಲರ ಕಾಲದ ಟೋಪಿ ತೆಗೆದಿರುವ ಫೋಟೋ ಹಾಕಬೇಕೆಂದು ಅಧಿಕಾರಿಗಳು ಹೇಳಿದ್ದರು. ಈ ವೇಳೆ ನಾನು ಮೊಘಲ್ ವಂಶಸ್ಥ, ಈ ಟೋಪಿ ನಮ್ಮ ಹೆಮ್ಮೆ ಎಂದು ತಿಳಿಸಿದ್ದೆ. ಕೊನೆಗೆ ಅಧಿಕಾರಿಗಳು ಪಾಸ್ ಪೋರ್ಟ್ ನಲ್ಲಿ ಟೋಪಿ ಇರುವ ಫೋಟೋ ಹಾಕಲು ಅನುಮತಿ ನೀಡಿದರು ಎಂದು ಟ್ಯೂಸಿ ತಿಳಿಸಿದ್ದಾರೆ.

Also read: 100ವರ್ಷಗಳ ಇತಿಹಾಸವಿರುವ ಶ್ರೀರಾಮ ಮಂದಿರ ವಿದ್ಯಾಕೇಂದ್ರವಾಗಿ, 3500 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪವಾಡವನ್ನು ಪ್ರತಿಯೊಬ್ಬರು ತಿಳಿಯಲೇಬೇಕು..