ಮುಖೇಶ್ ಅಂಬಾನಿ ಏಷ್ಯಾದ ನಂ.1 ಶ್ರೀಮಂತರಾಗಿ 3,71,000 ಕೋಟಿ ಒಡೆಯನಾಗಲು ಈ ಗುಣಗಳು ಮುಖ್ಯವಂತೆ…

0
1368

ಪ್ರಪಂಚದ್ಯಾದಂತ ಪೆಟ್ರೋಲ್ ರಾಜಕುಮಾರನೆಂದು ಪ್ರಸಿದ್ಧವಾದ ಧೀರುಭಾಯಿ ಅಂಬಾನಿ ಅವರ ಸುಪುತ್ರ. ರಿಲಾಯನ್ಸ್ ಇಂಡಸ್ಟ್ರೀಸಿನಲ್ಲಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಅತಿದೊಡ್ಡ ಷೇರುದಾರ. ಮುಕೇಶ್‌ ಅಂಬಾನಿ ಒಟ್ಟು 3,71,000 ಕೋಟಿ ರೂ. ಸಂಪತ್ತಿನೊಂದಿಗೆ ಮುಕೇಶ್‌ ಅಂಬಾನಿಯವರು ಬಾರ್‌ಕ್ಲೇಸ್‌ ಪಟ್ಟಿಯಲ್ಲಿ ಸತತ 7 ವರ್ಷಗಳಿಂದ ಭಾರತದ ನಂ.1 ಶ್ರೀಮಂತರೆನಿಸಿದ್ದಾರೆ. ಮುಖೇಶ್ ಅಂಬಾನಿ ಆದಾಯ ಗಂಟೆಗೆ 12.5 ಕೋಟಿ….! ಅಂದರೆ ಬಾರ್ಕ್ಲೇಸ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2018 ಬಿಡುಗಡೆ ಮಾಡಿದ ವರದಿಯ ಪ್ರಕಾರ ಒಂದು ದಿನದ ಆದಾಯ 300 ಕೋಟಿ ರೂಪಾಯಿಗಳು ಇದರಿಂದ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡ, ಅಂಬಾನಿಯ ಆದಾಯ ಕೇಳಿದರೆ ಒಂದು ನಿಮಿಷ ದರಗಾಗಿ ಹೋಗುತ್ತೆ.

Also read: ನಮಾಜ್‌ ಮಾಡಲು ಮಸೀದಿ ಬೇಕಾಗಿಲ್ಲ; ತೀರ್ಪಿನ ಮರು ಪರಿಶೀಲನೆಯ ಪ್ರಶ್ನೆಯೇ ಇಲ್ಲ -ಸುಪ್ರೀಂ..

ಮುಕೇಶ್‌ ಅಂಬಾನಿಯವರ ಹಿಂದಿರುವ ಆದಾಯದ ಗುಟ್ಟು:

1980 ರಲ್ಲಿ ಭಾರತ ಸರ್ಕಾರವು ಖಾಸಗಿ ವಲಯಕ್ಕೆ ಪಾಲಿಯೆಸ್ಟರ್ ನಾರು ನೂಲು ಹುರಿಯ ತಯಾರಿಕಾ ವಲಯವನ್ನು ತೆರೆಯಿತು. ಧೀರೂಭಾಯಿ ಅಂಬಾನಿಯವರು PFY ತಯಾರಿಕಾ ಘಟಕವನ್ನು ಸ್ಥಾಪಿಸಲು ಅರ್ಜಿ ಹಾಕಿದರು. ಟಾಟಾ, ಬಿರ್ಲಾ ಮತ್ತು ಇತರರಿಂದ ತೀವ್ರ ಪೈಪೋಟಿಯ ನಡುವೆಯೂ, ಧೀರೂಭಾಯಿ ಅವರಿಗೆ ಅರ್ಜಿ ನೀಡಲಾಯಿತು. ಮುಕೇಶ್ ಅವರು ರಿಲಾಯನ್ಸ್ ಅನ್ನು 1981 ನಲ್ಲಿ ಸೇರಿ, ಕೇವಲ ಪಾಲಿಯೆಸ್ಟರ್ ಬಟ್ಟೆಗಳ ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಉದ್ಯಮವನ್ನು ಪೆಟ್ರೋಕೆಮಿಕಲ್ಸ್, ಪೆಟ್ರೋಲಿಯಂ ಶುದ್ಧೀಕರಣ ಮತ್ತು ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನೆ ಹೆಸರುವಾಸಿಯಾಯಿತ್ತು.

Also read: 800 ವರ್ಷಗಳ ಪದ್ಧತಿಗೆ ತೆರೆ; ಶಬರಿಮಲೆ ದೇಗುಲಕ್ಕೆ ಮಹಿಳೆಯರೂ ಪ್ರವೇಶಿಸಬಹುದು..!!

ನಂತರ ಮುಖೇಶ್ ಅಂಬಾನಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉಪಕ್ರಮಗಳ ತಯಾರಿಕೆಯಲ್ಲಿ ತೊಡಗಿದ್ದ ರಿಲಯನ್ಸ್ ಇನ್ಫೋಕಾಂ ಲಿಮಿಟೆಡ್ (ಈಗ ರಿಲಾಯನ್ಸ್ ಕಮ್ಯುನಿಕೇಷನ್ ಲಿಮಿಟೆಡ್), ಸ್ಥಾಪಿಸಿದರು. 2010ನಲ್ಲಿ ಅಂಬಾನಿ ನಿರ್ದೇಶನದ ಅಡಿಯಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಜನಸಾಮಾನ್ಯ ತೈಲ ಶುದ್ಧೀಕರಣ ವಿಭಾಗವು ಜಾಮ್ನಗರದಲ್ಲಿ ಸ್ಥಾಪನೆಯಾಯಿತು. ಈ ವಿಭಾಗವು ದಿನಕ್ಕೆ 660,000 ಬ್ಯಾರೆಲ್ಸ್ ತೈಲ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಜಿಯೋದಿಂದ ಅಂಬಾನಿ ಆದಾಯದಲ್ಲಿ ಆದ ಕ್ರಾಂತಿ:

ಹತ್ತಾರು ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದು ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತ್ತಾನೆ ಬಿಸಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಬೇರೆ ಕಂಪನಿಗಳು ಮಣ್ಣುಮುಕ್ಕಿಸಿ ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ನೆಚ್ಚಿನ ಟೆಲಿಕಾಂ ಕಂಪೆನಿಯಾಗಿದೆ.

 ನಂ:1 ಶ್ರೀಮಂತರಾಗಿರಲು ಈ ಗುಣಗಳು ಮುಖ್ಯವಂತೆ:

ಇಷ್ಟೊಂದು ಹಣವಿದ್ದರು ಕೂಡ ಮುಖೇಶ್ ಅಂಬಾನಿ ಇಲ್ಲಿಯವರೆಗೂ ಮಧ್ಯಪಾನ ಕೈಯಲ್ಲಿ ಹಿಡಿದಿಲ್ಲವಂತೆ. ಕಾಲೇಜು ದಿನಗಳಿಂದಲೂ ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮಧ್ಯಪಾನ ಮಾಡಲೇ ಇಲ್ಲವಂತೆ. ಅದು ಅಷ್ಟೇ ಅಲ್ಲದೆ ಮಾಂಸ-ಮೊಟ್ಟೆ ತಿನ್ನುವುದರಿಂದ ದೂರವೇ ಉಳಿದಿದ್ದ ಅಂಬಾನಿ ಶುದ್ಧ ಸಸ್ಯಾಹಾರಿ, ಈ ಎಲ್ಲ ಗುಣಗಳೇ ಅವರ ಶ್ರೆಯಸಿಗೆ ಕಾರಣವಾಗಿದೆ.