ಜಯಶ್ರೀದೇವಿಗೆ ಜೀವದಾನ ನೀಡಿದ ಮುಕುಂದ ಮುರಾರಿ

0
1086

ಶ್ರೀಮಂಜುನಾಥ ಚಿತ್ರದ ನಂತರ ತೆರೆಮರೆಗೆ ಸರಿದಿದ್ದ ನಿರ್ಮಾಪಕಿ ಜಯಶ್ರೀದೇವಿಗೆ ಮುಕುಂದ ಮುರಾರಿ ಚಿತ್ರ ಜೀವದಾನ ನೀಡಿದೆ.

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಕಾಂಬಿನೇಷನ್ ನ ಮೊದಲ ಚಿತ್ರ ಮುಕುಂದ ಮುರಾರಿ ಮೊದಲ ದಿನವೇ ೪.೫ ಕೋಟಿ ರೂ. ಬಾಚಿಕೊಂಡಿದೆ.

ಹಿಂದಿಯ ಓ ಮೈ ಗಾಡ್, ತೆಲುಗಿನ ಗೋವಿಂದ ಗೋವಿಂದ ಚಿತ್ರದ ರೀಮೇಕ್ ಇದಾಗಿದ್ದರೂ ಇಬ್ಬರೂ ಸ್ಟಾರ್ ಗಳ ಮ್ಯಾನರೀಸಂ ಹಾಗೂ ಕನ್ನಡದ ನೆಟಿವಿಟಿಗೆ ತಕ್ಕಂತೆ ಚಿತ್ರ ರೂಪಿಸುವಲ್ಲಿ ನಿರ್ದೇಶಕ ನಂದಕಿಶೋರ್ ಪಾಸಾಗಿದ್ದಾರೆ.
ಬಹುದೊಡ್ಡ ಬಜೆಟ್ ಚಿತ್ರಗಳಲ್ಲದೇ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದೊಂದಿಗೆ ಬಿಡುಗಡೆ ಆದ ಮುಕುಂದ ಮುರಾರಿ ಯಶಸ್ಸು ಖಚಿತ ಎಂದು ಮೊದಲ ರಿಪೋರ್ಟ್ ನೋಡಿದ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಮುಕುಂದ ಮುರಾರಿಗೆ ಹೋಲಿಸಿದರೆ ಸಂತು ಮೊದಲ ದಿನದ ಕಲೆಕ್ಷನ್ ೧.೫ ಕೋಟಿ ಎಂದು ಅಂದಾಜಿಸಲಾಗಿದೆ. ಇಬ್ಬರೂ ನಿರ್ಮಾಪಕರು ಮೊದಲ ದಿನದ ಕಲೆಕ್ಷನ್ ಎಷ್ಟು ಎಂಬ ರಹಸ್ಯ ಬಿಟ್ಟುಕೊಟ್ಟಿಲ್ಲ.

ಶ್ರೀಮಂಜುನಾಥ ಚಿತ್ರ ಜಯಶ್ರೀದೇವಿಗೆ ಹೆಸರು ತಂದುಕೊಟ್ಟರೂ ದುಡ್ಡು ತಂದುಕೊಡಲಿಲ್ಲ. ಈ ಚಿತ್ರದ ನಂತರ ಸತತ ವೈಫಲ್ಯ ಅನುಭವಿಸಿದ ಅವರು ಕಷ್ಟಗಳ ಸಂಕೊಲೆಗೆ ಸಿಲಿಕಿದ್ದರು. ಸಾಲ ಬೆಟ್ಟದಷ್ಟದಾಗಿತ್ತು. ಇದೀಗ ಮುಕುಂದ ಮುರಾರಿ ಪಾರು ಮಾಡುತ್ತಾನೊ ಕಾದು ನೋಡಬೇಕು.