ಮುಸ್ಲಿಮರನ್ನು ಕೊಳಕರು ಮತ್ತು ಜುಗುಪ್ಸೆ ಹುಟ್ಟಿಸುವವರು ಅಮೆರಿಕದಿಂದ ತೊಲಗಿ : ಡೊನಾಲ್ಡ್ ಟ್ರಂಪ್

0
4053

ಕ್ಯಾಲಿಫೋರ್ನಿಯ : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಶುದ್ಧೀಕರಿಸುವ ಕೆಲಸವನ್ನು ಮೊದಲಾಗಿ ಮುಸ್ಲಿಮರಿಂದ ಆರಂಭಿಸಲಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಮಸೀದಿಗಳಿಗೆ ಪತ್ರಗಳು ಬಂದಿವೆ.

%e0%b2%ae%e0%b2%b8%e0%b3%80%e0%b2%a6%e0%b2%bf%e0%b2%97%e0%b2%b3%e0%b2%bf%e0%b2%97%e0%b3%86-%e0%b2%aa%e0%b2%a4%e0%b3%8d%e0%b2%b0%e0%b2%97%e0%b2%b3%e0%b3%81-%e0%b2%ac%e0%b2%82%e0%b2%a6%e0%b2%bf%e0%b2%b5

 ಮುಸ್ಲಿಮರನ್ನು ಕೊಳಕರು ಮತ್ತು ಜುಗುಪ್ಸೆ ಹುಟ್ಟಿಸುವವರು ಎಂದು ಜರೆಯಲಾಗಿರುವ ಬೆದರಿಕೆ ಪತ್ರಗಳು ಕ್ಯಾಲಿಫೋರ್ನಿಯದ ಮೂರು ಮಸೀದಿಗಳಿಗೆ ಬಂದಿವೆ ಮತ್ತು ಅಮೆರಿಕದ ನೂತನಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕವನ್ನು ಶುದ್ಧೀಕರಿಸುವ ಕೆಲಸವನ್ನು  ಮೊದಲಾಗಿ ಮುಸ್ಲಿಮರಿಂದ ಆರಂಭಿಸಲಿದ್ದಾರೆ ಎಂದು ಈ ಪತ್ರಗಳಲ್ಲಿ  ಟ್ರಂಪ್‌ ಅವರನ್ನು  ಹೊಗಳಲಾಗಿದೆ ಎಂದು ಮುಸ್ಲಿಂ ಅಮೆರಿಕನ್‌ ಸಂಘಟನೆಯೊಂದು ಹೇಳಿದೆ.

ಸೈತಾನನ ಮಕ್ಕಳು’ ಎಂದು ಸಂಬೋಧಿಸಲಾಗಿರುವ ಮುಸ್ಲಿಂ ವಿರೋಧಿ ಪತ್ರಗಳು ಉತ್ತರ ಕ್ಯಾಲಿಫೋರ್ನಿಯದ ಸ್ಯಾನ್‌ ಓಸೆಯಲ್ಲಿನ ಮಸೀದಿ ಮಾತ್ರವಲ್ಲದೆ ಲಾಸ್‌ ಏಂಜಲಿಸ್‌ನ ಲಾಂಗ್‌ ಬೀಚ್‌ ಮತ್ತು ಕ್ಲಾರಾಮಾಂಟ್‌ ಮಸೀದಿಗಳಿಗೂ ಬಂದಿವೆ ಎಂದು ಅಮೆರಿಕನ್‌ ಇಸ್ಲಾಮಿಕ್‌ ರಿಲೇಶನ್ಸ್‌ ಕೌನ್ಸಿಲ್‌ (ಸಿಎಐಆರ್‌) ಹೇಳಿದೆ.

ಮುಸ್ಲಿಮರನ್ನು ಕೊಳಕರು ಮತ್ತು ಜುಗುಪ್ಸೆ ಹುಟ್ಟಿಸುವವರು ಎಂದು ಜರೆಯಲಾಗಿರುವ ಈ ಬೆದರಿಕೆ ಪತ್ರಗಳಲ್ಲಿ, ಇನ್ನು ನೀವು ಗಂಟು ಮೂಟೆ ಕಟ್ಟಿಕೊಂಡು ಅಮೆರಿಕದಿಂದ ಹೊರನಡೆಯಿರಿ’ ಎಂದು ತಾಕೀತು ಮಾಡಲಾಗಿರುವುದಾಗಿ ಕೌನ್ಸಿಲ್‌ ಹೇಳಿದೆ.

“ಅಮೆರಿಕವು ಮತ್ತೆ ಉಜ್ವಲವಾಗಿ ಹೊಳೆದು ಕಾಣುವಂತೆ ಮಾಡಲು ಟ್ರಂಪ್‌ ಅಮೆರಿಕವನ್ನು ಶುದ್ಧೀಕರಿಸಲಿದ್ದಾರೆ ಮತ್ತು ಆ ಕೆಲಸವನ್ನು ಅವರು ಮೊದಲಾಗಿ ಮುಸ್ಲಿಮರಿಂದ ಆರಂಭಿಸಲಿದ್ದಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಬೆದರಿಕೆ ಪತ್ರ ಬಂದಿರುವುದನ್ನು ಅನುಸರಿಸಿ ಅಮೆರಿಕನ್‌ ಮುಸ್ಲಿಂ ಸಂಘದ ಕ್ಯಾಲಿಫೋರ್ನಿಯ ಘಟಕವು ಮಸೀದಿಗಳಿಗೆ ಪೊಲೀಸ್‌ ರಕ್ಷಣೆಯನ್ನು ಕೋರಿದೆ.