ಮನೆ ಕೆಲಸ ಮಾಡಿ ಮಾಡಿ ಸುಸ್ತಾಯ್ತು ಎನ್ನುವ ಅಮ್ಮಂದಿರು ಈ ಟಿಪ್ಸ್ ಫಾಲೋ ಮಾಡಿ.

0
1757

ಮನೆಯಲ್ಲಿ ಅಮ್ಮಂದಿರು ಕೆಲಸ ಮಾಡಿ ಮಾಡಿ ಅರೆ ಜೀವ ವಾಗಿಬಿಡುತ್ತಾರೆ.. ನಾವುಗಳೊ ಬೆಳಗ್ಗೆ ಎದ್ದು ರೆಡಿಯಾಗಿ ಕಾಲೇಜಿಗೋ ಅಥವಾ ಕೆಲಸಕ್ಕೋ ಹೋಗಿ ಸಂಜೆ ಬಂದರೆ ಅದೇ ನಾವು ಮಾಡುವ ದೊಡ್ಡ ಸಾಧನೆ.. ಆದರೆ ಅಮ್ಮಂದಿರ ಕೆಲಸ ಬೆಳಗ್ಗೆ ಎದ್ದಾಗ ಶುರುವಾದರೆ ಮುಗಿಯುವುದು ರಾತ್ರಿ 11 ಆದರೂ ಆಶ್ಚರ್ಯವಿಲ್ಲ.. ಇನ್ನು ಸಮಾರಂಭಗಳು ಬಂದರೇ ಮುಗಿದೇ ಹೋಯಿತು ಮನೆಯಲ್ಲಿ ಅಮ್ಮಂದಿರು ಮನೆಕೆಲಸದವರಾಗಿ ಬಿಡುತ್ತಾರೆ..

ಇಂತಹ ಸಂಧರ್ಭದಲ್ಲಿ ಕೆಲಸ ಕಡಿಮೆ ಮಾಡಲು ನಮ್ಮದೊಂದಿಷ್ಟು ಸಲಹೆ.

ಕ್ಯಾಟರಿಂಗ್ ವ್ಯವಸ್ಥೆ ಮಾಡುವುದು

ಅಡುಗೆ ಮಾಡಲು ಸಹಾಯಕರಿಲ್ಲದಿದ್ದರೆ ಕ್ಯಾಟರಿಂಗ್ ಗೆ ಹೇಳುವುದು ಉತ್ತಮ. ಸಮಾರಂಭಗಳಲ್ಲಿ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಚೆಂದ ಆದರೆ.. ಎಲ್ಲರೂ ಎಂಜಾಯ್ ಮಾಡುವ ವೇಳೆ ಅಮ್ಮಂದಿರು ಮಾತ್ರ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ ಮುಂದೆ ನಿಂತು ಸಾಕಾಗುವುದೆಷ್ಟು ಸರಿ ನೀವೆ ಹೇಳಿ.. ಸಹಾಯಕರಿದ್ದರೆ ಮನೆಯಲ್ಲೆ ಅಡುಗೆ ತಯಾರಿಸಿ ತೊಂದರೆ ಇಲ್ಲ..

ಬಾಳೆ ಎಲೆ ಉಪಯೋಗಿಸಿ

ಸಮಾರಂಭಗಳಷ್ಟೇ ಅಲ್ಲ ಮನೆಗೆ ಹೆಚ್ಚು ಜನ ನೆಂಟರು ಬಂದಾಗಲೂ ಕೂಡ ಊಟಕ್ಕೆ ಬಾಳೆ ಎಲೆ ಗಳನ್ನು ಉಪಯೋಗಿಸಿ… ಸಾಮಾನ್ಯ ದಿನಗಳಲ್ಲೇ ಪಾತ್ರೆಗಳು ಲಾಟು ಲಾಟಾಗುತ್ತವೆ.. ಇನ್ನು ಸಮಾರ್ಂಭಗಳಲ್ಲಿ ಕೇಳಬೇಕ?? ಬಾಳೆಯೆಲೆ ಉಪಯೋಗಿಸಿದರೆ ಒಂದು ರೀತೊಯ ಸಂಪ್ರದಾಯ ಪಾಲಿಸಿದ ರೀತಿಯೂ ಆಗುತ್ತದೆ ಬಿಡಿ.

ಮನೆಯ ಸದಸ್ಯರು ಕೆಲಸ ಹಂಚಿಕೊಳ್ಳಿ

ಪ್ರತಿದಿನದ ಮಾತು ಬೇರೆ.. ಸಮಾರಂಭದ ಮಾತು ಬೇರೆ.. ಮನೆಯ ಇತರ ಸದಸ್ಯರುಗಳು ಸಾಧ್ಯವಾದಷ್ಟು ಮನೆಯ ಕೆಲಸಗಳನ್ನು ಹಂಚಿಕೊಳ್ಳಿ.. ಅಮ್ಮಂದರಿಗೆ ಸಹಾಯ ಮಾಡುವುದರಿಂದ ನಮ್ಮ ಸ್ಟೇಟಸ್ ಏನು ಕಡಿಮೆ ಆಗುವುದಿಲ್ಲ.. ನಮಗಾಗಿ ಜೀವ ತೇಯುವ ಅಮ್ಮನಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಕರ್ತವ್ಯವೂ ಹೌದು..

ಈ ವಿಷಯ ಓದಲು ಸಾಮಾನ್ಯವೆನಿಸಬಹುದು.. ಆದರೆ ಅನುಭವಿಸಿದ ಹೆಣ್ಣು ಮಕ್ಕಳಿಗೆ ಗೊತ್ತು ಇದರ ಕಷ್ಟ ಏನೆಂಬುದು.. ಶೇರ್ ಮಾಡಿ ಕೆಲವರಿಗೆ ನಿಮ್ಮಿಂದ ಉಪಯೋಗವಾಗಬಹುದು..