ಎಂಥ ಕಾಲ ಬಂತಪ್ಪಾ, ತನ್ನ ಅನುಮತಿ ಇಲ್ಲದೆ ಜನ್ಮ ನೀಡಿರುವ ಅಪ್ಪ-ಅಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗ..

0
284

ಜನರು ಬೆಳೆದಂತೆ ಜೀವನ ಶೈಲಿ ಮಾತ್ರ ಬದಲಾಗಿ ಬೆಳೆಯುತ್ತಿಲ್ಲ, ಅದರ ಜೊತೆಗೆ ಮಾನವಿತೆ ಮತ್ತು ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಅನ್ಯಾಯ, ಕೊಲೆ ದರೋಡೆಗಳು ನಡೆದು ಪೊಲೀಸ್ ಮೆಟ್ಟಿಲ್ಲೆರುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಇವೆಲ್ಲ ಸಾಮಾನ್ಯವಾಗಿವೆ. ಕೋರ್ಟ್ ಪೊಲೀಸ್ ಸ್ಟೇಷನ್ ಇರುವುದೇ ಇದಕ್ಕೆ ಎನ್ನುವಂತ ಪರಿಸ್ಥಿತಿ ಬಂದಿದೆ. ಆದರು ಇದ್ಯಾವುದು ಸಮಾಜಕ್ಕೆ ಆಶ್ಚರ್ಯವಾಗಿ ಕಾಣುತ್ತಿಲ್ಲ, ಆದರೆ ಮುಂಬೈನಲ್ಲಿ ಒಂದು ಪ್ರಕರಣ ನಡೆದಿದ್ದು ಮಗನೆ ತಂದೆ-ತಾಯಿಗಳ ವಿರುದ್ಧ ದೂರು ನೀಡಿದ್ದಾನೆ, ಅಷ್ಟಕ್ಕೂ ಇವನು ನೀಡಿರುವುದು ಅಸ್ತಿ, ಮದುವೆ ವಿಚಾರವಾಗಿ ಅಲ್ಲ! ಈ ವಿಷಯ ಕೇಳಿದರೆ ಪಾಲಕರು ಮಕ್ಕಳನ್ನು ಹೆರೆಯಲು ಯೋಚನೆ ಮಾಡುವುದರಲ್ಲಿ ಅನುಮಾನವಿಲ್ಲ.

ಹೌದು ಮುಂಬೈ ಪೊಲೀಸ್ ಸ್ಟೇಷನ್-ನಲ್ಲಿ ಒಬ್ಬ ವ್ಯಕ್ತಿ ಕಂಪ್ಲೇಂಟ್ ಕೊಡಲು ಬಂದಾಗ ಪೊಲೀಸ್ ದೂರು ಕೇಳಿ ಆತಂಕಕ್ಕೆ ಒಳಗಾಗಿದ್ದಾರೆ. ಸಮಾಜ ಯಾವ ಮಟ್ಟಕ್ಕೆ ಬಂತು ಎನ್ನುವ ವಿಚಾರಕ್ಕೆ ಬಂದಿದ್ದಾರೆ. ಆ ವ್ಯಕ್ತಿ ನೀಡಲು ಬಂದ ಅಂತಹ ದುರಾದರು ಏನು? ಅನಿಸಬಹುದು ಅದೇ ಏನೆಂದರೆ, ತನ್ನ ಅನುಮತಿ ಪಡೆಯದೆ ತನಗೆ ಜನ್ಮ ನೀಡಿರುವ ಅಪ್ಪ-ಅಮ್ಮನ ವಿರುದ್ಧ ಪೊಲೀಸರಿಗೆ ಆ ಯುವಕ ದೂರು ಸಲ್ಲಿಸಿದ್ದಾನೆ. ರಫೇಲ್ ಸ್ಯಾಮ್ಯುಯಲ್ ಎಂಬಾತ ಈ ದೂರು ನೀಡಿದ್ದು, ಈ ಮೂಲಕ ಆತ ಮುಂಬೈನಲ್ಲೆಲ್ಲ ಸುದ್ದಿಯಾಗಿದ್ದಾನೆ. ತನ್ನ ಅನುಮತಿ ಪಡೆಯದೆ ಜನ್ಮ ನೀಡಿರುವ ಅಪ್ಪ-ಅಮ್ಮನ ವಿರುದ್ಧ ದೂರು ನೀಡಿ ಕೋರ್ಟ್​ ಮೆಟ್ಟಿಲೇರಲು ಸಿದ್ಧನಾಗಿರುವ ರಫೇಲ್ ವರ್ತನೆಗೆ ಪೊಲೀಸರಿಗೆ ನಗಬೇಕೋ, ಅಳಬೇಕೋ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ತನ್ನನು ಹೆತ್ತಿದೆ ತಪ್ಪೆಂದ ಮಗ?

27 ವರ್ಷದ ಮುಂಬೈನ ಯುವಕನೊಬ್ಬ ತನ್ನ ಅಪ್ಪ-ಅಮ್ಮನ ವಿರುದ್ಧವೇ ದೂರು ನೀಡಿದ್ದಾನೆ. ಮಗನೇ ತಂದೆ-ತಾಯಿಯ ಮೇಲೆ ದೂರು ನೀಡಿರಬೇಕಾದರೆ ಅದೆಂಥಾ ಆರೋಪವನ್ನು ಮಾಡಿರಬಹುದು ಎಂಬ ಯೋಚನೆ ಬರುವುದು ಸಹಜ. ಆದರೆ ಈ ಬಗ್ಗೆ ಹೇಳಿಕೊಂಡಿದ್ದು, ನಾನು ನನ್ನ ಅಪ್ಪ-ಅಮ್ಮನನ್ನು ತುಂಬ ಪ್ರೀತಿಸುತ್ತೇನೆ. ಆದರೆ, ಅವರು ನನ್ನನ್ನು ಅವರಿಗೋಸ್ಕರ ಹುಟ್ಟಿಸಿದರು. ಅವರ ಸಂತೋಷಕ್ಕಾಗಿ ನಾನು ಜನ್ಮ ಪಡೆಯುವಂತಾಯಿತು. ಅವರ ಕರ್ತವ್ಯ ಎಂಬಂತೆ ಮಗುವನ್ನು ಹುಟ್ಟಿಸಿದ ಕಾರಣಕ್ಕೆ ನಾನು ಈಗ ಕೆಲಸ ಮಾಡುವಂತಾಗಿದೆ, ಕಷ್ಟ ಪಡುವಂತಾಗಿದೆ. ನನ್ನನ್ನು ಹುಟ್ಟಿಸದೇ ಇರುತ್ತಿದ್ದರೆ ಈ ಕಷ್ಟವೇ ಇರುತ್ತಿರಲಿಲ್ಲ’ ಎಷ್ಟೋ ಜನರು ತಮ್ಮ ಲೈಂಗಿಕ ಆಸೆಯನ್ನು ಪೂರೈಸಿಕೊಳ್ಳುವ ಭರದಲ್ಲಿ ಮಗುವಿನ ಜನ್ಮಕ್ಕೆ ಕಾರಣರಾಗುತ್ತಾರೆ. ಆಮೇಲೆ ಮಗುವನ್ನು ಸರಿಯಾಗಿ ಬೆಳೆಸಲು ಸಾಧ್ಯವಾಗದೆ ಕಷ್ಟ ಪಡುವಂತೆ ಮಾಡುತ್ತಾರೆ.

ನೀವು ಯಾರನ್ನು ಬೇಕಾದರೂ ಕೇಳಿ… ನನಗೆ ಬೇಕಾಗಿತ್ತು ಅದಕ್ಕೆ ಮಗುವನ್ನು ಮಾಡಿಕೊಂಡೆ ಎಂದೇ ಹೇಳುತ್ತಾರೆ. ಅವರಿಗೆ ಬೇಕಾಗಿತ್ತು ಎಂದು ಇನ್ನೊಂದು ಜೀವವನ್ನು ಸೃಷ್ಟಿ ಮಾಡುವುದು ಎಷ್ಟು ಸರಿ? ಎಂದು ಸ್ಯಾಮ್ಯುಯಲ್ ಪ್ರಶ್ನಿಸಿ ಪೋಸ್ಟ್​ ಮಾಡಿದ್ದಾನೆ. ಆ ಪೋಸ್ಟ್​ಗೆ ಹಲವರು ತರಾಟೆ ತೆಗೆದುಕೊಂಡಿದ್ದರಿಂದ ಅದನ್ನು ಡಿಲೀಟ್​ ಮಾಡಲಾಗಿದೆ. ರಫೇಲ್ ಅವರ ತಂದೆ-ತಾಯಿ ಇಬ್ಬರೂ ವಕೀಲರಾಗಿದ್ದು, ಅವರಿಬ್ಬರ ವಿರುದ್ಧವೇ ಆತ ಕೋರ್ಟ್​ನಲ್ಲಿ ದಾವೆ ಹೂಡಲು ಸಿದ್ಧನಾಗಿದ್ದಾನೆ. ಆತನ ಅಮ್ಮ ಕವಿತಾ ಸ್ಯಾಮ್ಯುಯಲ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನ ಗಮನಕ್ಕೆ ತಾರದೆ ನಾವು ಆತನನ್ನು ಹುಟ್ಟಿಸಿದ್ದೇ ತಪ್ಪು ಎಂಬುದೇ ಆತನ ವಾದವಾದರೆ ನಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ನಮ್ಮ ಹಾಗೆ ಈ ದೇಶದಲ್ಲಿರುವ ಎಲ್ಲ ಪೋಷಕರೂ ಅಪರಾಧ ಮಾಡಿದ್ದಾರೆ ಎಂದು ಹೇಳಿದ್ದಾರೆ ಅದು ಹೇಗೆ ಒಪ್ಪಿಕೊಳ್ಳುವುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.