ಕಾರಿನಲ್ಲಿ ಹಾಲುಣಿಸುತ್ತಿದ್ದ ತಾಯಿಯನ್ನು ಲೆಕ್ಕಿಸದೇ ಅಮಾನವೀಯವಾಗಿ ಟೊಯಿಂಗ್ ಮಾಡಿದ ಪೊಲೀಸರು..

0
480

ದೇಶದ ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ , ಈ ಸಮಸ್ಯೆ ಜನರಿಗೆ ಮಾತ್ರವಲ್ಲ ಪೊಲೀಸರಿಗೂ ತಲೆನೋವಾಗಿ ಕಾಡುತ್ತಿದೆ. ಅದರಲ್ಲಿ ವಿಶೇಷವಾಗಿ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳಂತೂ ಇನ್ನು ಹೆಚ್ಚು. ಹೀಗೆ ವಾಹನ ನಿಲುಗಡೆ ನಿಷೇಧಿಸಿರುವ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಟೋಯಿಂಗ್‌ ವಾಹನಕ್ಕೆ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದರು. ಇದರಲ್ಲಿ ತಪ್ಪೇನಿದೆ ಅಲ್ವಾ , ಸಾಮನ್ಯವಾಗಿ ಕಾರು ಕಾಲಿಯಾಗಿ ಇದ್ದರೆ ಪರವಾಗಿಲ್ಲ , ಆದ್ರೆ ಇಲ್ಲಿ ನಡೆದಿರೋ ವಿಷಯಾನೇ ಬೇರೆ , ಅಷ್ಟಕ್ಕೂ ಏನು ನಡೀತು , ಎಲ್ಲಿ ನಡೀತು ಅಂತ ನೀವೇ ನೋಡಿ.

 

ವಾಹನ ನಿಲುಗಡೆ ನಿಷೇಧಿಸಿರುವ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಟೋಯಿಂಗ್‌ ವಾಹನಕ್ಕೆ ಕಟ್ಟಿ ಎಳೆದು ಹೋಗುತ್ತಿದ್ದರು. ಆದರೆ ಅದೇ ಕಾರಿನ ಹಿಂಬದಿ ಸೀಟಿನಲ್ಲಿ ಮಹಿಳೆ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದರು. ಆಕೆ ಎಷ್ಟೇ ಜೋರಾಗಿ ಕೂಗಿದರೂ ಸಹ ಟೋಯಿಂಗ್‌ ಟ್ರಕ್‌ನಲ್ಲಿದ್ದ ಪೇದೆ ಮಾತ್ರ ವಾಹನವನ್ನು ನಿಲ್ಲಿಸದೇ ಸಾಗಿದ್ದರು. ಮುಂಬೈನ ಮಲಾಡ್‌ ವೆಸ್ಟ್‌ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ ಎನ್ನಲಾಗುವ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು , ಜನ ಆ ಪೇದೆ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

ಟೋಯಿಂಗ್‌ ಮಾಡುತ್ತಿದ್ದನ್ನು ವಿಡಿಯೊ ಮಾಡುತ್ತಿರುವ ವ್ಯಕ್ತಿ ಪೊಲೀಸ್‌ ಪೇದೆಗೆ ವಾಹನ ನಿಲ್ಲಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮಹಿಳೆ ಮತ್ತು ಮಗು ಇರುವುದನ್ನು ಹೇಳಿದರೂ ಕೇಳದ ‍ಪೇದೆ ಮೊಬೈಲ್‌ ಕರೆಯಲ್ಲಿ ನಿರತರಾಗುತ್ತಾರೆ. ಮಗುಗೆ ಏನಾದ್ರು ಆದ್ರೆ ಯಾರು ಹೊಣೆ ಎಂದೆಲ್ಲ ಕೇಳಿದರು ಏನು ಪ್ರತಿಕ್ರಯಿಸದೇ ಹಾಗೆ ಸಾಗಿದರು.

ಆ ವ್ಯಕ್ತಿ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಕಾರಿನಲ್ಲಿದ್ದ ಮಹಿಳೆ ವಾಹನ ನಿಲ್ಲಿಸುವಂತೆ ಮತ್ತೆ ಮತ್ತೆ ಕೂಗಿ ಅಸಹಾಯಕತೆ ವ್ಯಕ್ತಪಡಿಸುತ್ತಾಳೆ. ವಾಹನ ನಿಲುಗಡೆ ಜಾಗದಲ್ಲಿ ಸಾಕಷ್ಟು ಕಾರುಗಳು ನಿಂತಿದ್ದರೂ ಟೋಯಿಂಗ್‌ ವಾಹನ ಇದೇ ಕಾರನ್ನು ಎಳೆದುಕೊಂಡು ಹೋಗುತ್ತಿರುವುದು ಎಲ್ಲರು ಅಚ್ಚರಿಪಡುವಂತೆ ಮಾಡಿದೆ. ಅ ಮಹಿಳೆ ಎಷ್ಟೇ ಮನವಿ ಮಾಡಿದರೂ ಕೇಳಲಿಲ್ಲ ಕೊನೆಗೆ ನನಗೆ ಆರೋಗ್ಯ ಸರಿಯಿಲ್ಲ ಎಂದು ಚೀಟಿಯನ್ನೂ ತೋರಿಸುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.

 

ಪೇದೆ ಈ ರೀತಿ ಮಾನವಿಯತೆಯನ್ನೇ ಮರೆತು ಮೊಬೈಲ್ ನಲ್ಲಿ ಮಗ್ನನಾಗಿರುವುದು ಎಷ್ಟು ಸರಿ ಎನ್ನೋದೆ , ವೀಡಿಯೊ ನೋಡಿದ ಜನರ ಪ್ರಶ್ನೆ…!