ಮುಖ್ಯಮಂತ್ರಿ ಬಜೆಟ್ ಮಂಡಿಸಿದ್ರೆ ಬರೀ 5 ಕೋಟಿಗೆ ಬಿಜೆಪಿಗೆ ಕುರುಕ್ಷೇತ್ರ ಸಿನೆಮಾದ ಹಕ್ಕು ಕೊಡ್ತೀನಿ: ಮುನಿರತ್ನ!!! ಮುಖ್ಯಮಂತ್ರಿ ಬಜೆಟ್ ಮಂಡಿಸ್ತಾರ??

0
363

ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ನಡೆಯುತ್ತಾನೆ ಇವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಬಾರಿ ಬಜೆಟ್ ಮಂಡಿಸುವುದು ಅನುಮಾನ ಎಂದು ಹಲವು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದು. ಎಚ್​.ಡಿ. ಕುಮಾರಸ್ವಾಮಿ ಈ ಬಾರಿಯ ಬಜೆಟ್ ಮಂಡನೆ ಮಾಡುವುದಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಖಚಿತ. 25 ಕೈ ಶಾಸಕರು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಅನುಯಾಯಿ ಶಾಸಕರೇ ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದಾರೆ. ಬಿಜೆಪಿಯ ಶಾಸಕರು ರೆಸಾರ್ಟ್​ಗೆ ಹೋಗುತ್ತಿಲ್ಲ. ಪಕ್ಷೇತರರು ಸೇರಿ ಬಿಜೆಪಿ ಬಳಿ 106 ಶಾಸಕರಿದ್ದಾರೆ. 8 ಜನ ರಾಜೀನಾಮೆ ಕೊಟ್ಟರೆ ಹೊಸ ಸರ್ಕಾರ ರಚನೆಯಾಗುವುದು ಸತ್ಯ ಅದರಂತೆಯೇ ಈ ಬಾರಿ ಯಡಿಯೂರಪ್ಪ ಬಜೆಟ್​ ಮಂಡಿಸೋದು ಖಚಿತ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಮುನಿರತ್ನ ಬಿಜೆಪಿ ಶಾಸಕರಿಗೆ ಸವಾಲು ಹಾಕಿದ್ದಾರೆ. ಅದರಲ್ಲಿ ನಾನು ಗೆದ್ದರೆ ಬರಿ 1 ರಷ್ಟು ಹಣ ನೀಡಿ ಇಲ್ಲ ನೀವು ಗೆದ್ದರೆ ನಾನು 10 ರಷ್ಟು ಹಣ ನಿಮಗೆ ನಿಡುತ್ತೇನೆ ಎಂದು ಹೇಳಿದ್ದಾರೆ.

ಏನಿದು ಮುನಿರತ್ನ ಸವಾಲು?

ದಿನದಿಂದ ದಿನಕ್ಕೆ ಬಿಜೆಪಿಯವರ ಶಾಸಕರು ಹೇಳಿಕೆ ನೀಡುವುದು ಹೆಚ್ಚಾಗುತ್ತೆದೆ ಮೈತ್ರಿ ಸರ್ಕಾರ ಬಿಳ್ಳುವುದು ಅನುಮಾನವೇ ಇಲ್ಲ ಎನ್ನುವುದು ತಿಳಿಸುತ್ತಿರುವ ಹೂ ನಾಯಕರು ಈ ಬಾರಿ ನಮ್ಮದೇ ಬಜೆಟ್ ಎನ್ನುವ ರೀತಿಯಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ನಮ್ಮದು ಏನು ಕಡಿಮೆ ಇಲ್ಲ ಅನ್ನೋ ಹವಾದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಒಂದು ಸವಾಲು ಹಾಕಿದ್ದಾರೆ. ಹೌದು ಬಿಜೆಪಿಯವರ ಮಾತಿನಂತೆ ಈ ಬಾರಿ ಕುಮಾರಸ್ವಾಮಿಯವರು ಬಜೆಟ್ ಮಂಡಿಸದೆ ಇದ್ದರೆ 50 ಕೋಟಿ ವೆಚ್ಚದಲ್ಲಿ ಮಾಡಿರುವನನ್ನ ಹೊಸ ಸಿನಿಮಾ ಕುರುಕ್ಷೇತ್ರದ ಎಲ್ಲ ಹಣವನ್ನು ನಿಮಗೆ ನೀಡುತ್ತೇನೆ, ಒಂದು ವೇಳೆ ಕುಮಾರಸ್ವಾಮಿಯವರೆ ಬಜೆಟ್ ಮಂಡಿಸಿದರೆ ನನಗೆ ಬರಿ ಐದು ಕೋಟಿ ಕೊಡಿ ಸಾಕು ಎಂದು ಓಪನ್ ಚಾಲೆಜ್ ಮಾಡಿ “ಕುಮಾರಸ್ವಾಮಿ ಬಜೆಟ್ ಮಂಡಿಸಲ್ಲ ಎಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ ಬಿಜೆಪಿಯವರ ಮಾತು ನಡೆಯುವುದಿಲ್ಲ. ಎಂದು ಹೇಳಿದ್ದಾರೆ.

ಸರ್ಕಾರ ಕೆಡವಲು ಬಿಜೆಪಿ ಹೋಮ?

ಮುನಿರತ್ನ ಅವರು ಈ ವೇಳೆ ಮಾತನಾಡಿ ಬಿಜೆಪಿಯವರು ಸರ್ಕಾರವನ್ನು ಕೆಡವಲು ಹೋಮ, ಪೂಜೆ, ಮಾಡುತ್ತಾ ಬಿಜೆಪಿಯವರು ಕರ್ನಾಟಕದ ರಾಜ್ಯದ ಜನತೆಗೆ ಗೊಂದಲದ ಹೇಳಿಕೆ ನೀಡುತ್ತಿದ್ದಿರಾ ಕೆಲಸ ಮಾಡುತ್ತಿರುವ ಸರ್ಕಾರವನ್ನು ನೆಮ್ಮದಿಯಾಗಿ ಬಿಡಿ. ಜನರು ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಐದು ವರ್ಷ ನೀವು ಪ್ರಾಮಾಣಿಕವಾಗಿ ವಿರೋಧ ಪಕ್ಷದಲ್ಲಿ ಕೆಲಸ ಮಾಡಿ. ರಾಜಕೀಯದಲ್ಲಿ ದೇವರ ಹೆಸರನ್ನು ಬಳಸಿಕೊಳ್ಳಬೇಡಿ. ಸಮ್ಮಿಶ್ರ ಸರ್ಕಾರ ಖಂಡಿತವಾಗಿ ಐದು ವರ್ಷ ಪೂರೈಸುತ್ತದೆ. ಬಿಜೆಪಿಯವರು ದಯವಿಟ್ಟು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು.

ನೀವು ಮುಖ್ಯವಾಗಿ ಸರ್ಕಾರದ ಅಭಿವೃದ್ಧಿಯ ಬಗ್ಗೆ ಸಲಹೆ ಕೊಡಿ. ಹೋಮ, ಯಜ್ಞ, ಯಾಗ ಎಲ್ಲ ಸರ್ಕಾರದ ವಿರುದ್ಧ ಯಾಕೆ ಮಾಡುತ್ತೀರಿ. ಅದರ ಬದಲಾಗಿ ಲೋಕ ಕಲ್ಯಾಣಕ್ಕೆ ಯಾಗ, ಹೋಮ ಮಾಡಿಸಿ. ಅದನ್ನು ಬಿಟ್ಟು ಸರ್ಕಾರ ಬೀಳಿಸಲು ಪ್ರಯತ್ನ ಪಡುತ್ತಿದ್ದೀರಿ ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೀರಿ. ಆಮೇಲೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ನಂತರ ಕಾಲಕಸದಂತೆ ಕಾಣುತ್ತೀರಿ. ಇವೆಲ್ಲವನ್ನು ದಯವಿಟ್ಟು ನಿಲ್ಲಿಸಿ ಎಂದು ಮುನಿರತ್ನ ಅವರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿ ನಮ್ಮ ಸರ್ಕಾರ ಯಾವ ಭಯವಿಲ್ಲದೆ ಅಧಿಕಾರ ಮಾಡುತ್ತೆ ಎಂದು ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.