ರಾಜ್ಯದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿದೆ, ಈ ಹತ್ಯೆಯ ಹಿಂದೆ ರಾಜಕೀಯ ಷಡ್ಯಂತ್ರ ಇರಬಹುದೇ?

0
406

ಕರ್ನಾಟಕ ಶಾಂತಿ ಮತ್ತು ಸೌಹಾರ್ದ್ಯತೆಗೆ ಹೆಸರುವಾಸಿಯಾದ ರಾಜ್ಯ, ಇಲ್ಲಿ ಯಾರೇ ಬಂದರು ಅವರನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಆದರೆ, ಇಂತಹ ನೆಮ್ಮದಿಯ ಬೀಡಿನಲ್ಲಿ ಕೆಲ ದಿನಗಳಿಂದ ಸತತವಾಗಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ, ಈಗ ಬೆಂಗಳೂರಿನಲ್ಲಿ ಮತ್ತೊಬ್ಬ ಕಾರ್ಯಕರ್ತನ ಹತ್ಯೆ ನಡೆದಿದೆ.

ಹೌದು, ರಾಜಧಾನಿ ಬೆಂಗಳೂರಿನ ಜೆ.ಸಿ. ನಗರದ ನಿವಾಸಿ 28 ವರ್ಷದ ಸಂತೋಷ್ ಹತ್ಯೆಯಾದ ಯುವಕ. ಸಂತೋಷ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಬಿಜೆಪಿ ಕಾರ್ಯಕರ್ತರಾಗಿದ್ದರು. ಬುಧವಾರ ರಾತ್ರಿ ನಾಲ್ವರು ದುಷ್ಕರ್ಮಿಗಳು ಸಂತೋಷರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದ, ಅಲ್ಲಿಯೇ ಟೀ ಕುಡಿಯುತ್ತಿದ್ದ ಅದೇ ಏರಿಯಾದ ವಸೀಂ, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬುವವರು ಜೊತೆ ಮಾತಿನ ಚಕಮಕಿಯಾಗಿದೆ. ಈ ಮದ್ಯೆ ವಸೀಂ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದಾನೆ, ಸಂತೋಷ್ ತೀವ್ರ ರಕ್ತ ಸ್ರಾವವಾಗಿ ಕೊನೆಯುಸಿರೆಳಿದಿದ್ದಾನೆ.

ಪೋಲೀಸರ ಮಾಹಿತಿ ಪ್ರಕಾರ ಈ ಹಿಂದೆ ಆರೋಪಿ ವಸೀಂ, ಉಮರ್, ಮತ್ತು ಫಿಲಿಪ್ಸ್ ಎಂಬುವವರಿಗೆ ಸಂತೋಷ್ ಕರೆದು ನಮ್ಮ ಏರಿಯಾದಲ್ಲಿ ಗಾಂಜಾ ಸೇದಬೇಡಿ ಅಂತ ಜೋರು ಮಾಡಿದ್ದರು ಎಂದು ಹೇಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿತ್ತು, ಇದೆ ದ್ವೇಷದಿಂದ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹತ್ಯೆಯ ಪ್ರಮುಖ ಆರೋಪಿಗಳಾದ ವಸೀಂ, ಫಿಲಿಪ್ಸ್ ಎಂಬ ಇಬ್ಬರು ಆರೋಪಿಗಳನ್ನು ಜೆ.ಸಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ಮಾಡಿ, ವಸೀಂ ಸ್ಥಳೀಯ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರ ಮಗ, ಅವನಿಗೆ ಬಿಜೆಪಿಗು ಆಗುತ್ತಿರಲಿಲ್ಲ, ಅದಕ್ಕೆ ಬಿಜೆಪಿ ಕಾರ್ಯಕರ್ತ ಸಂತೋಷ್ನನ್ನು ಹತ್ಯೆಮಾಡಲಾಗಿದೆ, ಇದು ರಾಜಕೀಯ ಪ್ರೇರಿತ ಹತ್ಯೆ ಎಂದು ಆರೋಪ ಮಾಡಿ ಘೋಷಣೆ ಕೂಗಿದ್ದಾರೆ.