ಪ್ರಪಂಚದ ಎರಡನೇ ಅತಿ ದೊಡ್ಡ ಶಿವ ಪ್ರತಿಮೆ ಹೊಂದಿರುವ ದೇವಸ್ಥಾನ ನಮ್ಮ” ಮುರುಡೇಶ್ವರ”

0
4273

Kannada News | Karnataka Temple History

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

%e0%b2%ae%e0%b3%81%e0%b2%b0%e0%b3%81%e0%b2%a1%e0%b3%87%e0%b2%b6%e0%b3%8d%e0%b2%b5%e0%b2%b01

ಕಂಡುಕಗಿರಿ  ಶಿಖರದಲ್ಲಿ  ನೆಲೆಸಿರುವ ಮುರುಡೇಶ್ವರ ದೇವಾಲಯ  ಮತ್ತು  ರಾಜಗೋಪುರ  ಮುರುಡೇಶ್ವರದ  ಪ್ರಮುಖ ಆಕರ್ಷಣೆಗಳಲ್ಲಿ  ಒಂದಾಗಿದ್ದು ಎಲ್ಲ ಪ್ರವಾಸಿಗರೂ ನೋಡಲೇ ಬೇಕಾದ ಸ್ಥಳವಿದಾಗಿದೆ.

%e0%b2%ae%e0%b3%81%e0%b2%b0%e0%b3%81%e0%b2%a1%e0%b3%87%e0%b2%b6%e0%b3%8d%e0%b2%b5%e0%b2%b02

ಮುರುಡೇಶ್ವರದ ವೈಶಿಷ್ಟ್ಯ

ಮುರುಡೇಶ್ವರ ಕರ್ನಾಟಕ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಒಂದು ಪುಣ್ಯ ಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೇ ೨ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ. ಈ ದೇವಾಲಯದಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿ ಸಾಗಿದಂತೆ ಎರಡು ಆನೆಗಳು ಪ್ರವಾಸಿಗರ ಗಮನ ಸೆಳೆಯುತ್ತವೆ.

%e0%b2%ae%e0%b3%81%e0%b2%b0%e0%b3%81%e0%b2%a1%e0%b3%87%e0%b2%b6%e0%b3%8d%e0%b2%b5%e0%b2%b0-3

ಪುರಾಣದ ಕತೆ

ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕಥೆ. ಇನ್ನಿತರ ನಾಲ್ಕು ಕ್ಷೇತ್ರ ಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕ ತೆಗಳ ಪ್ರಸಿದ್ಧ ತಾಣವಾಗಿತ್ತು.

5

ಅಂತೆಯೆ ಇಂದಿಗೂ ಅಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲು ಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು, ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು.

6

ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದೆ.ಈ ಸ್ಥಳವು  ಚರಿತ್ರೆಯಲ್ಲಿ   ಶ್ರೀಮಾನ್  ಗಣೇಶ  ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ  ರಾವಣನ ಬೇಡಿಕೆಯಂತೆ  ಹಿಡಿದುಕೊಂಡಿದ್ದ ಆತ್ಮಲಿಂಗವನ್ನು ಕೆಳಗಿಟ್ಟ ಅದೇ ಸ್ಥಳ ಎಂದು ಹೇಳಲಾಗಿದೆ.

8

ಮುರುಡೇಶ್ವರದಲ್ಲಿರುವ 123 ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಅತೀ ದೂರಕ್ಕೆ ಕಾಣುತ್ತಿದ್ದು, ಇದು ಜಗತ್ತಿನಲ್ಲೇ ಅತೀ ಎತ್ತರದ ಶಿವವಿಗ್ರಹವಾಗಿದೆ. 10 ದಶ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೂರ್ತಿಯನ್ನು ಶಿವಮೊಗ್ಗದ ಕಾಶಿನಾಥ ಮತ್ತು ಅವರ ಪುತ್ರ ಶ್ರೀಧರ್ ಅವರು ಇನ್ನಿತರ ಹಲವಾರು ಶಿಲ್ಪಿಗಳ ನೆರವಿನಿಂದ ಕಡೆದಿದ್ದಾರೆ. ದೇವಾಲಯದ ಎದುರಿಗೆ 20 ಅಂತಸ್ತಿನ ಬಹು ಎತ್ತರದ ಗೋಪುರವನ್ನು ನಿರ್ಮಿಸಲಾಗಿದೆ.

7

Also Read: ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳಲ್ಲಿ ಒಂದಾದ ಘ್ರಷ್ಣೇಶ್ವರ ಜ್ಯೋತಿರ್ಲಿಂಗದ ಮಹಿಮೆ.