ಮಶ್ರೂಮ್ ಪಲಾವ್ ತಯಾರಿಸುವ ವಿಧಾನ..

0
791

ರೈಸ್ ಊಟದ ಒಂದು ಅಂಗವಾಗಿದು ಇದರಿಂದ ಹಲವಾರು ತರಹದ ಖಾದ್ಯಗಳನ್ನು ತಯಾರಿಸಬಹುದು ಅದರಲ್ಲಿ ಬಿರಿಯಾನಿ. ಪಲಾವ್. ಸಿಹಿ ತಿನಿಸು. ದೋಸೆ ಇಡ್ಲಿ ಹೀಗೆ ಸಾವಿರಾರು ತರಹದ ಅಡುಗೆಯನ್ನು ತಯಾರಿಸಬಹುದು ಅದರಲ್ಲಿ ಪಲಾವ್ ಕೂಡ ಒಂದು. ಇದು ದಿನನಿತ್ಯದ ಅಡುಗೆಯಾಗಿದ್ದು ಬ್ಯಾಚುಲರ್ಸ್ ಅಡುಗೆ ಎಂದು ಹೆಸರು ಪಡೆದಿದೆ. ಅಂತಹ ಪಲಾವ್ ತಯಾರಿಕೆಯಲ್ಲಿ ನೂರಾರು ತಹರದ ಪಲಾವ್ ತಯಾರಿಸಬಹುದು ಅದರಲ್ಲಿ ಮಶ್ರೂಮ್ ಪಲಾವ್ ಬಟಾಣಿ ಪಲಾವ್, ಪನ್ನೀರ್ ಪಲಾವ್, ಟೊಮೆಟೊ ಬಾತ್, ಮೆಂತ್ಯೆ ಬಾತ್ ಎಲ್ಲಕ್ಕಿಂತ ಮಶ್ರೂಮ್ ಪಲಾವ್ ಹೆಚ್ಚು ರುಚಿಯಾಗಿರುತ್ತೆ. ಇದು ರುಚಿಯಲ್ಲಿ ಅಷ್ಟೇ ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಶ್ರೂಮನ್ನು ಪಲಾವ್‌ನಲ್ಲಿ ಉತ್ತಮ ಆಹಾರವಾಗಿದೆ. ಹಾಗಾದ್ರೆ ಈ ಮಶ್ರೂಮ್ ಪಲಾವ್ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

Also read: ಮಶ್ರೂಮ್ ಮಸಾಲಾ ತಿನ್ನಲು ಬಲುಸೊಗಸು,ಹೇಗೆ ಮಾಡೋದು ಅಂತೀರಾ ಇಲ್ಲಿದೆ ನೋಡಿ..!

ಬೇಕಾಗುವ ಪದಾರ್ಥಗಳು:

 • ಒಂದು ಕಪ್ ಅಕ್ಕಿ
 • ಒಂದು ಕಪ್ ಅಣಬೆ
 • ನಾಲ್ಕು ಈರುಳ್ಳಿ
 • ಎರಡು ಲವಂಗ
 • 1/2 ಇಂಚಿನ ಚೆಕ್ಕೆ
 • ಎರಡು ಏಲಕ್ಕಿ
 • ಒಂದು ಪಲಾವ್ ಎಲೆ
 • ಒಂದು ಚಮಚ ಗರಂ ಮಸಾಲ
 • ಒಂದು ಚಮಚ ಜೀರಿಗೆ ಪುಡಿ
 • ಬೇಕಾಗುವಷ್ಟು ಎಣ್ಣೆ
 • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ

 1. ಅಕ್ಕಿಯನ್ನು ತೊಳೆದು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು.
 2. ನಂತರ ಸಾಂಬಾರು ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಗೂ ಒಂದೆಡೆ ಇಟ್ಟುಕೊಳ್ಳಬೇಕು.
 3. ಆದಾದನಂತರ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಎಣ್ಣೆ ಸರಿ ಬಿಸಿ ಆದ ನಂತರ ಅದರಲ್ಲಿ ಈರುಳ್ಳಿ, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ, ಹಾಗೂ ಸಣ್ಣದಾಗಿ ತುಂಡು ಮಾಡಿರುವ ಮಶ್ರೂಮ್ ಅನ್ನು ಹಾಕಿ.
 4. ತದನಂತರ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.
 5. ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
 6. ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ.
 7. ನಂತರ ಪಾತ್ರೆಗೆ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.