ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಯಾಗಬಲ್ಲ ಘಟನೆ; ಸ್ನೇಹಿತ ಮೃತ ಬ್ರಾಹ್ಮಣನ ಅಂತ್ಯ ಸಂಸ್ಕಾರಕ್ಕಾಗಿ ಧೋತಿ-ಜನಿವಾರ ಧರಿಸಿದ ಮುಸ್ಲಿಂ ಸಹೋದರರು.!

0
309

ಸ್ನೇಹ ಸಂಬಂಧಕ್ಕೆ ಎಂತಹ ಜಾತಿಯ ರೋಗವನ್ನು ಕೊಲ್ಲುವ ಶಕ್ತಿ ಇರುತ್ತದೆ ಎನ್ನುವುದಕ್ಕೆ ಒಂದು ಸಾಕ್ಷಿ ಘಟನೆ ನಡೆದಿದ್ದು ಇದು ಇಡಿ ದೇಶದಲ್ಲಿ ವೈರಲ್ ಆಗಿ ಜಾತಿ ವಿಷಯವಾಗಿ ಹೊಡೆದಾಡುವರಿಗೆ ನಾಚಿಕೆ ತಂದಿದೆ. ಏಕೆಂದರೆ ಮೇಲ್ವರ್ಗದ ಜನರು ತಮ್ಮ ಸಂಪ್ರದಾಯದ ಬಗ್ಗೆ ಮೆರೆಯುತ್ತಿದ್ದಾರೆ ಕೆಳವರ್ಗದ ಜನರು ತಮ್ಮ ಕಾಯಕದ ಬಗ್ಗೆ ಮೆರೆಯುತ್ತಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದೆಲ್ಲವನ್ನು ಮಿತ್ರ ಧರ್ಮ ಎನ್ನುವುದು ಅಳಿಸಿ ಹಾಕಿ ಎಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಿದ ಘಟನೆ ಎಂದರೆ ಮುಸ್ಲಿಂ ಸಹೋದರರು ಬ್ರಾಹ್ಮಣನ ಅಂತ್ಯ ಸಂಸ್ಕಾರಕ್ಕಾಗಿ ಧೋತಿ-ಜನಿವಾರ ಧರಿಸಿದ ಅಂತ್ಯಕ್ರಿಯೆ ನಡೆಸಿದ್ದಾರೆ.

Also read: ಯೂಟ್ಯೂಬ್ ಚಾನೆಲ್ ತೆರೆದು ಬಂದ ಹಣದಿಂದ 1200 ಅನಾಥ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿರುವ ಮಾದರಿ ವ್ಯಕ್ತಿ..

ಬ್ರಾಹ್ಮಣನ ಸಂಸ್ಕಾರ ಮುಸ್ಲಿಂರು?

ಹೌದು ಗುಜರಾತ್ ನಲ್ಲಿ ಮೂವರು ಮುಸ್ಲಿಂ ಸಹೋದರರು ತೋರಿಸಿದ ಧರ್ಮ ಸಾಮರಸ್ಯ ಇಡೀ ದೇಶವನ್ನೇ ಆಶ್ಚರ್ಯಿಗೊಳಿಸಿದ್ದು. ಇಲ್ಲಿನ ಮುಸ್ಲಿಂ ಸಹೋದರರು ತಮ್ಮ ತಂದೆಯ ಬ್ರಾಹ್ಮಣ ಗೆಳೆಯನ ಅಂತಿಮ ಸಂಸ್ಕಾರವನ್ನು ಶಾಸ್ತ್ರೋಕ್ತವಗಿ ನೆರವೇರಿಸಿದ್ದಾರೆ. ತಂದೆಯ ಗೆಳೆಯನಿಗಾಗಿ, ಪ್ರೀತಿಯ ಅಂಕಲ್ ಗಾಗಿ ಏನನ್ನೂ ಯೋಚಿಸದ ಸಹೋದರರು ಜನಿವಾರ, ಧೋತಿ ಧರಿಸಿ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಭಾನುಶಂಕರ್ ಪಾಂಡ್ಯ ಹಾಗೂ ಅಬು, ನಾಸಿರ್ ಹಾಗೂ ಝುಬೇರ್ ಖುರೇಷಿ ಅವರ ತಂದೆ ನಾಲ್ಕು ದಶಕಗಳ ಆಪ್ತ ಸ್ನೇಹಿತರು. ಸೆ.15 ರಂದು ಶನಿವಾರ ಭಾನುಶಂಕರ್ ಪಾಂಡ್ಯ ನಿಧನರಾದಾಗ ಅವರ ಆಪ್ತ ಸ್ನೇಹಿತನ ಮೂವರು ಮಕ್ಕಳು ಎಲ್ಲಾ ಎಲ್ಲೆಗಳನ್ನೂ ಮೀರಿ ನಿಂತು ತಮ್ಮ ಪ್ರೀತಿಯ ಅಂಕಲ್ ಅಂತ್ಯಕ್ರಿಯೆ ನಡೆಸಿದ್ದಾರೆ.

Also read: 45 ವರ್ಷಗಳಿಂದ ಪ್ರತಿನಿತ್ಯ 1 KG ಗಾಜು ತಿನ್ನುತ್ತಾ ಆರೋಗ್ಯವಾಗಿರುವ ಈ ವ್ಯಕ್ತಿಯನ್ನು ನೋಡಿದ್ರೆ ನಿಮಗೆ ಆಶ್ಚರ್ಯವಾಗುತ್ತೆ!!

ಈ ಕುರಿತಾಗಿ ಕಪ್ರತಿಕ್ರಿಯಿಸಿರುವ ಜುಬೈರ್ ‘ಭಾನುಶಂಕರ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾಗ ನಾವು ಹತ್ತಿರದಲ್ಲಿದ್ದ ಹಿಂದೂಗಳ ಮನೆಯಿಂದ ಗಂಗಾಜಲ ತಂದು ನೀಡಿದೆವು. ವರ ಅಂತಿಮ ಸಂಸ್ಕಾರ ಬ್ರಾಹ್ಮಣ ಸಂಪ್ರದಾಯದಂತೆ ನಡೆಸಲು ಇಚ್ಛಿಸುತ್ತೇವೆ ಎಂದು ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದಾಗ, ಮೃತದೇಹವನ್ನು ಎತ್ತಲು ಜನಿವಾರ ಧರಿಸುವುದು ಕಡ್ಡಾಯ ಎಂದರು. ನಾವು ಅದಕ್ಕೆ ಒಪ್ಪಿಕೊಂಡೆವು’ ಎಂದಿದ್ದು ಭಾನುಶಂಕರ್ ಮೃತದೇಹಕ್ಕೆ ನಸೀರ್ ಪುತ್ರ ಅರ್ಮಾನ್ ಸಗ್ನಿಸ್ಪರ್ಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ನಸೀರ್ ‘ನಾವು 12ನೇ ದಿನ ಸರ್ಮಾನ್ ಕೇಶಮುಂಡನವನ್ನೂ ಮಾಡುತ್ತೇವೆ. ಹಿಂದೂ ಧರ್ಮದಲ್ಲಿ ಹೀಗೆ ಮಾಡುತ್ತಾರೆ’ ಎಂದಿದ್ದಾರೆ.

Also read: ದೇಶದಲ್ಲಿ ಮೊದಲ ಬಾರಿಗೆ ‘ಹೂಸು ಬಿಡುವ ಸ್ಪರ್ಧೆ’; ಗೆದ್ದವರಿಗಿದೆ ಭಾರಿ ಬಹುಮಾನ, ನೀವೂ ಭಾಗವಹಿಸಬಹುದು ಹೇಗೆ ಅಂತ ಈ ಮಾಹಿತಿ ನೋಡಿ.!

ತಮ್ಮ ತಂದೆಯ ಸ್ನೇಹಿತನ ಅಂತ್ಯಕ್ರಿಯೆಗೆ ದಿನಗೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಈ ಮೂವರು ಸಹೋದರರ ತಂದೆ ಭಿಖು ಖುರೇಷಿ ಹಾಗೂ ಭಾನುಶಂಕರ್ ಇಬ್ಬರೂ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ದಶಕಗಳ ಹಿಂದೆ ಇವರಿಬ್ಬರ ಪರಿಚಯವಾಗಿತ್ತು. ಮೂರು ವರ್ಷಗಳ ಹಿಂದೆ ಭಿಖು ಖುರೇಷಿ ಮೃತಪಟ್ಟಿದ್ದರು. ಭಾನುಶಂಕರ್ ಗೆ ಕುಟುಂಬ ಇರಲಿಲ್ಲ. ಕಾಲು ಮುರಿದುಕೊಂಡಾಗ ಅವರನ್ನು ನಮ್ಮ ಜೊತೆಯಲ್ಲೇ ಇರುವುದಕ್ಕೆ ತಂದೆ ಹೇಳಿದ್ದರು. ಅಂದಿನಿಂದ ಭಾನುಶಂಕರ್ ನಮ್ಮ ಕುಟುಂಬದ ಒಂದು ಭಾಗವಾದರು. ಪ್ರತಿ ಈದ್ ಹಬ್ಬದ ಸಂದರ್ಭದಲ್ಲೂ ನಮ್ಮ ಮಕ್ಕಳಿಗೆ ಉಡುಗೊರೆ ತಂದುಕೊಡುವುದನ್ನು ಅವರೆಂದಿಗೂ ಮರೆಯುತ್ತಿರಲಿಲ್ಲ ಎಂದು ನೆಚ್ಚಿನ ಅಂಕಲ್ ನ್ನು ನಾಸಿರ್ ಸ್ಮರಿಸಿದ್ದಾರೆ. ತಂದೆ ಗತಿಸಿದ ನಂತರವೂ ಅವರ ಆಪ್ತ ಸ್ನೇಹಿತನ ಅಂತ್ಯಸಂಸ್ಕಾರ ನೆರವೇರಿಸಿದ ಈ ಸಹೋದರ ಮಾನವರು ಒಂದೇ ಎನ್ನುವ ಸಂದೇಶ ಸಾರಿದ್ದಾರೆ.