ನರೇಂದ್ರ ಮೋದಿಯವರ ಮೇಲಿನ ಅಭಿಮಾನವನ್ನು ತೋರಿಸಲು ಮೇ 23ರಂದು ಜನಿಸಿದ ಮಗುವಿಗೆ `ನರೇಂದ್ರ ಮೋದಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ..

0
223

ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೆ ಆಯ್ಕೆಯಾದ ನಂತರ ದೇಶ-ವಿದೇಶಗಳಲ್ಲಿ ವರ್ಚಸು ಗಳಿಸಿದ್ದಾರೆ, ಇವರ ಅಭಿಮಾನವಂತು ಯಾವುದೇ ಜಾತಿ ಧರ್ಮವೆನ್ನದೆ ಹಬ್ಬಿದ್ದು, ಎಲ್ಲಿ ಹೋದರು ಮೋದಿಯವರ ಸಾಧನೆ ಬಿಟ್ಟರೆ ಬೇರೆಯಾವುದೇ ಮಾತುಗಳೇ ಇಲ್ಲ, ಅದರಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿರುವ ಮೋದಿ ನೇತೃತ್ವದ ಬಿಜೆಪಿಯು ಪ್ರಜೆಗಳ ಮನದಲಿ ಅಚ್ಚಳಿಯದಂತೆ ಬೇರು ಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂದರೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿದ್ದಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಮಗುವಿಗೆ ‘ನರೇಂದ್ರ ಮೋದಿ’ ಎಂದು ಹೆಸರಿಟ್ಟಿದ್ದಾರೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು ಮೊದಲಿನಿಂದ ಮುಸ್ಲಿಂಮರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಅದರಲ್ಲಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ದಂಪತಿ ತಮ್ಮ ಮಗುವಿಗೆ `ನರೇಂದ್ರ ಮೋದಿ’ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನವನ್ನು ಮೆರೆದಿದ್ದು, ಮೋದಿಯವರ ಅಭಿಮಾನಕ್ಕೆ ಯಾವುದೇ ಧರ್ಮದ ಹಂಗು ಇಲ್ಲ ಎನ್ನುವುದು ಎಂದು ಕಾಣುತ್ತಿದೆ. ಅದರಂತೆ ಇಡೀ ದೇಶದ ಜನತೆ ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ, ದೇಶದ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ಕಂಡು ಮನಸೋತು, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ದೇಶ-ವಿದೇಶದಲ್ಲಿವೂ ಮೋದಿ ಹವಾ ಬಹಳ ಜೋರಾಗಿಯೇ ಇದೆ. ಬಿಜೆಪಿ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಮುಸ್ಲಿಂ ದಂಪತಿ ಮೇ 23ರಂದು ಹುಟ್ಟಿದ ತಮ್ಮ ಗಂಡು ಮಗುವಿಗೆ `ನರೇಂದ್ರ ಮೋದಿ’ ಎಂದು ನಾಮಕರಣ ಮಾಡಿ, ಮೋದಿ ಮೇಲಿನ ಅಭಿಮಾನ, ಪ್ರೀತಿಯನ್ನು ತೋರಿಸಿದ್ದಾರೆ.

ಮುಸ್ಲಿಂ ಮಗುವಿಗೆ ಮೋದಿ ಹೆಸರು?

ಇಲ್ಲಿಯ ಮುಸ್ಲಿಮ್ ಕುಟುಂಬವೊಂದರ ಮಗುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನಿಡಲಾಗಿರುವ ಕುತೂಹಲಕಾರಿ ಸುದ್ದಿ ವರದಿಯಾಗಿದೆ. ಮೋದಿ ಅವರ ಮೇಲಿನ ಅಭಿಮಾನದಿಂದ ಗೋಂಡಾ ಜಿಲ್ಲೆಯ ಪರ್ಸಾಪುರ್ ಮಹರೋರ್ ಗ್ರಾಮದ ಮೈನಜ್ ಬೇಗಮ್ ಎಂಬ ಮಹಿಳೆ ತನ್ನ ಕೂಸಿಗೆ “ನರೇಂದ್ರ ದಾಮೋದರ್​ದಾಸ್ ಮೋದಿ” ಎಂದು ಹೆಸರಿಟ್ಟಿದ್ದಾರೆ. ತನ್ನ ಕುಟುಂಬದವರ ವಿರೋಧದ ನಡುವೆಯೂ ಈ ಮಹಿಳೆ ತನ್ನ ನಿರ್ಧಾರದಲ್ಲಿ ಅಚಲರಾಗಿದ್ದಾರೆ. ಪರಿಣಾಮವಾಗಿ, ಆಕೆಯ ಕುಟುಂಬವು ನರೇಂದ್ರ ಮೋದಿ ಹೆಸರನ್ನೇ ತಮ್ಮ ವಂಶದ ಕುಡಿಗೆ ನಾಮಕರಣ ಮಾಡಿ ಪಂಚಾಯಿತಿಯಲ್ಲಿ ನೊಂದಣಿ ಕೂಡ ಮಾಡಿಸಿದೆ.

Also read: ಮತ್ತೆ ನರೇಂದ್ರ ಮೋದಿ ಇತಿಹಾಸ ಬರೆದು ಪ್ರಚಂಡ ಗೆಲುವು ಸಾಧಿಸಿದಕ್ಕೆ ಗ್ರಾಹಕರಿಗೆ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡಿದ ಕ್ಷೌರಿಕ..

ಎಎನ್‍ಐ ಜೊತೆ ಮಗುವಿನ ತಾಯಿ ಮಿನಾಜ್ ಬೇಗಂ ಮಾತನಾಡಿ, ಪ್ರಧಾನಿ ಮೋದಿ ಅವರ ಆದರ್ಶಗಳನ್ನು ನನ್ನ ಮಗನೂ ಪಾಲಿಸಬೇಕು. ಅವರಂತೆ ನನ್ನ ಮಗನೂ ದೊಡ್ಡ ವ್ಯಕ್ತಿಯಾಗಬೇಕು. ನಮ್ಮ ಮಗು ಮೇ 23ರಂದು ಜನಿಸಿದೆ, ಕೂಡಲೇ ನಾನು ದುಬೈನಲ್ಲಿರುವ ನನ್ನ ಪತಿಗೆ ಕರೆ ಮಾಡಿದ್ದೆ. ಆಗ ಅವರು ಮೋದಿ ಚುನಾವಣೆಯಲ್ಲಿ ಗೆದ್ದಿದ್ದಾರಾ ಎಂದು ಕೇಳಿದರು. ನಮ್ಮ ಮನೆಯವರು ಮೋದಿ ಅಭಮಾನಿ. ಹೀಗಾಗಿ ನಾನು ಮೋದಿ ಅವರ ಹೆಸರನ್ನೇ ಮಗನಿಗೆ ಇಟ್ಟಿದ್ದೇನೆ. ನನ್ನ ಮಗ ಸಹ ನರೇಂದ್ರ ಮೋದಿ ಅವರ ತರಹ ಒಳ್ಳೆಯ ಕೆಲಸಗಳನ್ನು ಮಾಡಿ, ಯಶಸ್ಸು ಗಳಿಸಿ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.

Also read: ಪ್ರಚಂಡ ಬಹುಮತ ಗಳಿಸಿದ್ದ ನರೇಂದ್ರ ಮೋದಿ ಸರ್ಕಾರ ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್; ವಿಶೇಷ ಅತಿಥಿಯಾಗಿ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಆಗಮನ..

ದುಬೈನಲ್ಲಿರುವ ಅವರ ಹಲವು ಕುಟುಂಬದ ಹಿತೈಷಿಗಳು ಆಕೆಗೆ ನಿರ್ಧಾರ ಕೈಬಿಡುವಂತೆ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾದವೆನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಕಾನೂನು ರದ್ದು ಮಾಡುತ್ತಿದ್ದಾರೆ. ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಶೌಚಾಲಯ ನಿರ್ಮಾಣಕ್ಕೆ ಹಣಸಹಾಯ ಇತ್ಯಾದಿ ಹಲವು ಕಲ್ಯಾಣ ಕಾರ್ಯಗಳನ್ನ ಮೋದಿ ಸರಕಾರ ಮಾಡುತ್ತಿದೆ ಎಂದು ಈ ಮೈನಾಜ್ ಬೇಗಮ್ ಹೇಳಿದ್ದಾರೆ.