ಮುಸ್ಲಿಂ ಮಹಿಳೆಯರಿಂದ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣ; ಕಾಂಗ್ರೆಸ್ ಗೆ ಸಪೋರ್ಟ್ ಮಾಡೋ ಮುಸ್ಲಿಂ ಮಹಿಳೆಯರು ಮೋದಿ ಬೆಂಬಲ ನಿಂತ ಕಾರಣ??

0
137

ಇಡಿ ದೇಶವೇ ಯಾಕೇ ಇತರೆ ದೊಡ್ಡ ದೊಡ್ಡ ದೇಶಗಳಲ್ಲಿ ಮೋದಿ ಎಂದರೆ ಅದೇನೋ ಪ್ರೀತಿ ಅಭಿಮಾನ ಇದೆ. ಇದೆಲ್ಲವಕ್ಕೂ ಬೆಲೆ ಕಟ್ಟಲು ಸಾಧ್ಯವಾಗದಷ್ಟು ಎತ್ತರಕ್ಕೆ ಬೆಳೆದಿರುವ ಮೋದಿ ಅಲೆಗೆ ಮುಸ್ಲಿಂ ಮಹಿಳೆಯರು ಕೂಡ ಬಲಿಯಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದವರು ಆಗಿದ್ದರು ಮೋದಿ ಮುಸ್ಲಿಂ ಮಹಿಳೆಯರ ದೇವರಾಗಿದ್ದಾರೆ. ಏಕೆಂದರೆ ಅವರ ವಿಚಾರ ಶಕ್ತಿ ಮಹಿಳೆಯರ ಜಿವನವಕ್ಕೆ ಆಧಾರವಾಗಿದ್ದು, ಇದರ ನೆನಪಿಗಾಗಿ ಮೋದಿ ಮುಸ್ಲಿಂ ಮಹಿಳೆಯರೇ ದೇವಸ್ಥಾನ ಕಟ್ಟಿಸುತ್ತಿದ್ದಾರೆ.

ಮುಸ್ಲಿಂ ಮಹಿಳೆಯರಿಂದ ಮೋದಿಗೆ ದೇವಸ್ಥಾನ?

ಹೌದು ಉತ್ತರಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ದೇವಾಲಾಯ ನಿರ್ಮಾಣ ಮಾಡಲು ಮುಂದಾಗಿದೆ. ರುಬಿ ಘಜ್ನಿ ಎಂಬ ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಗುಂಪೊಂದು ಪ್ರಧಾನಿ ಮೋದಿಯವರಿಗಾಗಿ ದೇವಾಲಾಯ ನಿರ್ಮಾಣ ಮಾಡುತ್ತಿದೆ. ಏಕೆಂದರೆ ದೇಶದ ಮಹಿಳೆಯರಿಗೆ ಹಲವು ರೀತಿಯ ಕಾನೂನು ಜಾರಿಗೆ ತಂದು ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಕೆಲವು ಅನಿಷ್ಟ ಪದ್ದತಿಗಳಿಗೆ ಮುಕ್ತಿ ಹಾಡಿರುವ ಮೋದಿ ಅವರಿಗೆ ಏನಾದರು ಒಂದು ಸಣ್ಣ ಉಡುಗರೆ ನೀಡಲು ಈ ದೇವಸ್ಥಾನ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿದ ಮಹಿಳಾ ಸಂಘದ ಸದ್ಯಸ್ಯೆ ಮುಸ್ಲಿಂ ಮಹಿಳೆಯರಿಗಾಗಿ ಪ್ರಧಾನಿ ಮೋದಿಯವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಉಚಿತ ಮನೆ ಹಾಗೂ ಎಲ್’ಪಿಜಿ ಸಂಪರ್ಕವನ್ನು ನೀಡಿದ್ದಾರೆ. ಇದಕ್ಕಿಂತಲೂ ಹೆಚ್ಚು ಇನ್ನೇನು ಬೇಕು? ಎಂದು ಮಹಿಳೆಯರು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಪ್ರಧಾನಿ ಮೋದಿಯವರಿಗೆ ಇಡೀ ವಿಶ್ವವೇ ಗೌರವ ನೀಡುತ್ತಿದೆ. ಇದೀಗ ಮಾತೃಭೂಮಿಯಲ್ಲಿಯೇ ಅವರಿಗೆ ಗೌರವ ನೀಡಲು ನಿರ್ಧರಿಸಲಾಗಿದೆ. ದೇವಾಲಯ ನಿರ್ಮಾಣ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಲಾಗಿದೆ. ನಮ್ಮ ಸ್ವಂತ ಹಣದಿಂದಲೇ ದೇವಾಲಯ ನಿರ್ಮಾಣ ಮಾಡುತ್ತೇವೆ. ಈ ಮೂಲಕ ಮುಸ್ಲಿಂ ಮಹಿಳೆಯರ ಬೆಂಬಲ ಪ್ರಧಾನಿ ಮೋದಿಯವರಿಗೆ ಸಂಪೂರ್ಣವಾಗಿದೆ ಎಂಬ ಸಂದೇಶವನ್ನು ಸಾರುತ್ತಿದ್ದೇವೆ. ಮೋದಿಯವರಿಗೆ ಮುಸ್ಲಿಂ ವಿರೋಧಿ ಎಂಬ ಬಿರುದು ನೀಡಲು ಯಾವುದೇ ಕಾರಣಗಳಿಲ್ಲ ಎಂದು ತಿಳಿಸಿದ್ದಾರೆ. ಇದೆಲ್ಲವನ್ನು ನೋಡಿದರೆ ದೇಶದಲ್ಲಿ ಮುಸ್ಲಿಂ ಕಾಂಗ್ರೆಸಿಗೆ ಸೀಮಿತ ಎನ್ನುವುದು ಇನ್ಮುಂದೆ ಮರೆಯಾಗಲಿದೆ.

ಪ್ರಧಾನಿ ಮೋದಿಗಾಗಿ ಒನ್’ ವಿಮಾನಗಳು?

ಮುಂದಿನ ವರ್ಷದ ಜೂನ್ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಎರಡು ಹೊಸ ವಿಶೇಷ ವಿಮಾನಗಳು ಭಾರತಕ್ಕೆ ಬರಲಿವೆ. ಅವುಗಳನ್ನು ಏರ್ ಇಂಡಿಯಾ ಬದಲಿಗೆ ಭಾರತೀಯ ವಾಯುಸೇನೆ ಸುಪರ್ದಿಗೆ ನೀಡಬಹುದು ಎಂದು ಸೌತ್ ಬ್ಲಾಕ್ ನ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಬೋಯಿಂಗ್ 777- 300ER ವಿಮಾನವನ್ನು ಬೋಯಿಂಗ್ ಡಲ್ಲಾಸ್ ಕೇಂದ್ರದಲ್ಲಿ ಸಿದ್ಧಗೊಳಿಸಲಾಗುತ್ತಿದೆ. 2020ರ ಜೂನ್ ನಲ್ಲಿ ನವದೆಹಲಿಯನ್ನು ತಲುಪುವ ನಿರೀಕ್ಷೆಯಿದೆ. ವಿಮಾನದಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಕೂಡ ಇರಲಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸುವ ಬೋಯಿಂಗ್ 747- 200B ರೀತಿಯಲ್ಲೇ ಸಿದ್ಧಗೊಳ್ಳುತ್ತದೆ.

Also read: ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್; ಮಹಾಬಲಿಪುರಂ ನಗರವನ್ನೇ ಚೀನಾದ ಅಧ್ಯಕ್ಷ ಆಯ್ಕೆ ಮಾಡಿಕೊಂಡಿದ್ದು ಯಾಕೆ?