40 ಯೋಧರು ಬಲಿಯಾದ ಪುಲ್ವಾಮಾದಲ್ಲಿ ಮುಸ್ಲಿಂ ಮತ್ತೆ ಹಿಂದೂಗಳು ಜೊತೆಗೂಡಿ ಶಿವ ದೇಗುಲವನ್ನು ಜೀರ್ಣೋದ್ದಾರ ಮಾಡ್ತಿದ್ದಾರೆ, ಮನುಷ್ಯತ್ವವೇ ಎಲ್ಲಕಿಂತ ಮಿಗಿಲು ಅಲ್ಲವೇ??

0
372

ಕೆಲವು ದಿನಗಳಿಂದ ಸುದ್ದಿಯಲ್ಲಿದ ಜಮ್ಮು ಕಾಶ್ಮೀರದ ಪುಲ್ವಾಮ ಪ್ರದೇಶ ಇಡಿ ಪ್ರಪಂಚಕ್ಕೆ ಪರಿಚಯವಾಗಿದೆ. ಈ ಪ್ರದೇಶದ ಸುತ್ತ ಮುತ್ತ ಸೈನಿಕರ ಕಾವಲಿಗೆ ಒಳಪಟ್ಟಿದೆ. ಹಾಗೆಯೇ ಇದು ಉಗ್ರರು ಆಕ್ರಮಿತ ಸ್ಥಳವಾಗಿದ್ದು ಕೆಲವು ದಿನಗಳ ಹಿಂದೆಯೇ ಅಜರ್ ಸಂಘಟನೆಯ ಉಗ್ರ ಆತ್ಮಹತ್ಯೆ ದಾಳಿ ನಡೆಸಿ 44 ಸೈನಿಕರನ್ನು ಹತ್ಯೆಗೈದ. ಈ ಘಟನೆಯಿಂದ ಹೆಚ್ಚು ಪರಿಚಯವಾದ ಈ ಪ್ರದೇಶ ಮತ್ತೊಂದು ಸುದ್ದಿಯಲ್ಲಿ ಜೀವ ಪಡೆದುಕೊಂಡು. ಸುಮಾರು 80 ವರ್ಷ ಹಳೆಯ ಶಿವ ದೇಗುಲವೊಂದನ್ನು ನವೀಕರಿಸಲು ಮುಸ್ಲಿಂ ಸಮುದಾಯದವರು ಹಿಂದೂಗಳ ಜೊತೆ ಕೈ ಜೋಡಿಸಿ ದೇಗುಲದ ಕೆಲಸದಲ್ಲಿ ತೊಡಗಿದ್ದಾರೆ.

Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

ಮೊದಲಿನಿಂದ ಮುಸ್ಲಿಂರು ಹಿಂದೂ ದೇಗುಲಗಳನ್ನು ದ್ವಂಶಗೊಳಿಸಿದ ಇತಿಹಾಸಗಳು ತುಂಬಾ ಇವೆ ಆದರೆ ಹಿಂದೂ ದೇಗುಲಗಳನ್ನು ನಿರ್ಮಿಸಿದ, ದೇಗುಲಗಳ ಉದ್ದಾರಕ್ಕೆ ಶ್ರಮಿಸಿದ ಕಲೆಗಳು ಒಂದು ಇಲ್ಲ ಇದು ಈಗ ಹೇಗೆ ಸಾದ್ಯ? ಅದು ಪುಲ್ವಾಮ ಸ್ಥಳದಲ್ಲಿ ಅಂತ ಪ್ರಶ್ನೆ ಮೂಡುವಲ್ಲಿ ಅನುಮಾನವೇ ಇಲ್ಲ. ಈ ಪ್ರದೇಶದಲ್ಲಿ ಉಗ್ರರ ದಾಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಆದ್ರೆ ಈ ನಡುವೆಯೂ ಮುಸ್ಲಿಂ ಬಾಂಧವರು ಹಿಂದೂಗಳ ಜೊತೆಗೂಡಿ ಪುರಾತನ ಶಿವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

ಮುಸ್ಲಿಂರಿಂದ ಹಿಂದೂ ದೇವಾಲಯ?

Also read: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 110 ಕೋಟಿ ರೂ. ಸಹಾಯ ಮಾಡಿದ ಅಂಧ ವಿಜ್ಞಾನಿ..

ಹೌದು ಪುಲ್ವಾಮಾದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಬರೇಲಿಯಲ್ಲಿ 80 ವರ್ಷಗಳ ಹಳೆಯ ಹಿಂದೂ ದೇವಸ್ಥಾನವಿದೆ. ಈ ದೇವಾಲಯ ಬೀಳುವ ಸ್ಥಿತಿಯಲ್ಲಿದ್ದು ಇದನ್ನು ಮರುನಿರ್ಮಾಣ ಮಾಡುವ ಕೆಲಸದಲ್ಲಿ ಕಾಶ್ಮೀರಿ ಪಂಡಿತ್ ಕುಟುಂಬಸ್ಥರ ಜೊತೆ ಸೇರಿ ಮುಸ್ಲಿಂ ಕುಟುಂಬವೊಂದು ದೇಗುಲದ ಮರು ನವೀಕರಣ ಕಾರ್ಯಕ್ಕೆ ಕೈಜೋಡಿಸಿದೆ. ಕೆಲವು ದಿನಗಳಿಂದ ದೇವಾಲಯದ ಕೆಲಸ ನಡೆಯುತ್ತಾನೆ ಇತ್ತು, ಆದರೆ ಪುಲ್ವಾಮಾ ದಾಳಿ ಬಳಿಕ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ದೇಗುಲದ ನವೀಕರಣ ಕೆಲಸವನ್ನು ನಿಲ್ಲಿಸಲಾಗಿತ್ತು. ಆದ್ರೆ ಮಹಾಶಿವರಾತ್ರಿ ಮುಗಿದ ಮೇಲೆ ಮತ್ತೆ ದೇವಸ್ಥಾನದ ಕೆಲಸವನ್ನು ನಡೆಸಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ ಬರೇಲಿ ಪ್ರದೇಶದಲ್ಲಿ ಉಗ್ರರ ಹಾವಳಿ ಹೆಚ್ಚಾದ ಕಾರಣಕ್ಕೆ ಅನೇಕ ಹಿಂದೂ ಕುಟುಂಬಗಳು ಇಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದವು. ಆದರೆ ಕೆಲ ಹಿಂದೂ ಕಾಶ್ಮೀರಿ ಪಂಡಿತರು ಇಲ್ಲಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿರುವ ಶಿವ ದೇವಾಲಯ ಪಾಳುಬಿದ್ದು ಹಾಳಾಗಿ ಹೋಗಿತ್ತು. ಆದರಿಂದ ಹಿಂದೂಗಳು ಈ ದೇವಾಲಯವನ್ನು ನವೀಕರಿಸಲು ನಿರ್ಧರಿಸಿದ್ದರು. ಆದ್ರೆ ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಅವರು ಮುಸ್ಲಿಂ ಭಾಂದವರ ಸಹಾಯ ಕೇಳಿದ್ದಾರೆ. ದೇಗುಲದ ಪಕ್ಕದಲ್ಲೇ ಮಸೀದಿ ಇರುವ ಕಾರಣಕ್ಕೆ ಮುಸ್ಲಿಂ ಭಾಂದವರು ಕೂಡ ದೇವಾಲಯದ ನವೀಕರಣ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದು ಇದೀಗ ಮತ್ತೆ ಆ ಕೆಲಸ ಆರಂಭವಾಗಿದೆ.

Also read: 300 ರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಲು ಏರ್ ಸರ್ಜಿಕಲ್ ಸ್ಟ್ರೈಕ್ ದಾಳಿಯ ಪ್ಲಾನ್ ಹೀಗಿತ್ತು ಗೊತ್ತಾ?

ದೇಗುಲದ ಸುತ್ತಲಿನ ಜಾಗವನ್ನು ಸಮತಟ್ಟುಗೊಳಿಸಿ, ಗೇಟುಗಳಿಗೆ ಪೇಂಟ್​ ಮಾಡಲಾಗುತ್ತಿದೆ. ಇನ್ನೊಂದು ವಾರದೊಳಗೆ ದೇವಸ್ಥಾನ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ. ಈ ಶಿವರಾತ್ರಿಯ ಒಳಗೆ ದೇವಸ್ಥಾನದ ಕೆಲಸವನ್ನೆಲ್ಲ ಪೂರ್ಣಗೊಳಿಸಿ, ಹಿಂದುಗಳಿಂದ ಶಿವನಿಗೆ ವಿಶೇಷವಾದ ಪೂಜೆ ಮಾಡಿಸಬೇಕು ಎಂದು ಮುಸ್ಲಿಮರು ಬಯಸಿದ್ದರು. ಆದರೆ, ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಕಾರಣ ಕೆಲಸಗಳು ಸ್ಥಗಿತಗೊಂಡು ವಿಳಂಬವಾಯಿತು.

ಈ ಊರಿನಲ್ಲಿ ವಾಸವಾಗಿದ್ದ ನೂರಾರು ಹಿಂದುಗಳು ಪಕ್ಕದ ಊರಿನಲ್ಲಿ ಬೀಡುಬಿಟ್ಟಿದ್ದು, ಅವರಿಗಾಗಿ ದೇವಸ್ಥಾನದಲ್ಲಿ ಮತ್ತೆ ಮಂತ್ರಘೋಷ ಕೇಳಲಿದೆ. ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಸದ್ಯದಲ್ಲೇ ಪಕ್ಕದ ಊರಿನ ಹಿಂದುಗಳನ್ನು ಕರೆಸಿ ವಿಶೇಷ ಪೂಜಾಕಾರ್ಯ ನೇರವೇರಿಸಲಾಗುವುದು. ಇದರಿಂದ ಸುಮಾರು ದಶಕಗಳ ನಂತರ ಮತ್ತೆ ಈ ಪ್ರದೇಶದಲ್ಲಿ ಮಂತ್ರಘೋಷ, ಗಂಟೆಯ ಶಬ್ದ ಕೇಳಲಿದೆ’ ಎಂದು ಈ ದೇಗುಲದ ನವೀಕರಣದ ಉಸ್ತುವಾರಿ ವಹಿಸಿಕೊಂಡಿರುವ ಭೂಷಣ್​ ಲಾಲ್​ ತಿಳಿಸಿದ್ದಾರೆ.