ಮಾಜಿ ಭೂಗತ ದೊರೆ ಮುತ್ತಪ್ಪ ರೈಗೆ ಎರಡನೇ ವಿವಾಹ ಬಂಧನ!

0
2023

ಬೆಂಗಳೂರು:  ಮಾಜಿ ಭೂಗತ ದೊರೆ ಹಾಗೂ ಜೈ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರು ನಿನ್ನೆ ಬಿಡದಿಯ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅನುರಾಧಾ ಎನ್ನುವವರನ್ನು ಎರಡನೇ ವಿವಾಹವಾಗಿದ್ದಾರೆ.

ಮುತ್ತಪ್ಪ ರೈ ಅವರ ಮೊದಲ ಪತ್ನಿ ರೇಖಾ ಅವರು 2013ರಲ್ಲಿ ನಿಧನರಾಗಿದ್ದರು. ಈ ದಂಪತಿಗೆ ರಿಕ್ಕಿ ರೈ ಹಾಗೂ ರಾಕಿ ರೈ ಎಂಬ ಇಬ್ಬರು ಮಕ್ಕಳಿದ್ದಾರೆ. ಇದೀಗ, ಮುತ್ತಪ್ಪ ರೈ ಅವರು ಅನುರಾಧಾ ಎನ್ನುವವರನ್ನು ಎರಡನೇ ವಿವಾಹವಾಗಿದ್ದಾರೆ.

ಮುತ್ತಪ್ಪ ರೈ ಬಿಡದಿಯ ನಿವಾಸದಲ್ಲಿ ಸೋಮವಾರ ಅನುರಾಧರನ್ನು ಸರಳವಾಗಿ ಮದುವೆ ಮಾಡಿಕೊಳ್ಳುವ ಮೂಲಕ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ರೈ ಕುಟುಂಬ ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು.

%e0%b2%ae%e0%b3%81%e0%b2%a4%e0%b3%8d%e0%b2%a4%e0%b2%aa%e0%b3%8d%e0%b2%aa-%e0%b2%b0%e0%b3%88

2013 ಏಪ್ರಿಲ್ 28ರಂದು ಅನಾರೋಗ್ಯದ ನಿಮಿತ್ತ ಸಿಂಗಾಪುರದಲ್ಲಿ ಮೊದಲ ಪತ್ನಿ ರೇಖಾ ರೈ ನಿಧನರಾಗಿದ್ದರು. ಇವರಿಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

ಅನುರಾಧ ರೈ ಯಾರು?: ಮೂಲತಃ ಸಕಲೇಶಪುರದವರಾದ ಅನುರಾಧ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಹಿಳಾ ಉದ್ಯಮಿಯಾಗಿರುವ ಅನುರಾಧ ಮತ್ತು ಮುತ್ತಪ್ಪ ರೈ ಮಧ್ಯೆ ಹಲವು ವರ್ಷಗಳ ಪರಿಚಯವಿತ್ತು. ಆದರೆ ರೈ ಮೊದಲ ಪತ್ನಿ ರೇಖಾ ನಿಧನದ ಬಳಿಕ ಇವರಿಬ್ಬರ ಆತ್ಮೀಯತೆ ಹೆಚ್ಚಾಗಿದ್ದು, ಈಗ ಇಬ್ಬರೂ ಸತಿ-ಪತಿಗಳಾಗಿದ್ದಾರೆ.

%e0%b2%ae%e0%b3%81%e0%b2%a4%e0%b3%8d%e0%b2%a4%e0%b2%aa%e0%b3%8d%e0%b2%aa-%e0%b2%b0%e0%b3%88-0

ಅನುರಾಧ ಅವರಿಗೂ ಈ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿ ತೀರಿಕೊಂಡಿದ್ದಾರೆ. ಇತ್ತ ಮುತ್ತಪ್ಪ ರೈ ಕೂಡ ಪತ್ನಿ ಕಳೆದುಕೊಂಡರೂ ಮಕ್ಕಳ ಮೇಲಿದ್ದ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಹೀಗಾಗಿ ಇಬ್ಬರೂ ಒಂಟಿಯಾಗಿದ್ದ ಹಿನ್ನಲೆಯಲ್ಲಿ ದಂಪತಿಗಳಾಗಿ ಬದುಕಲು ನಿರ್ಧರಿಸಿದ್ದಾರೆ.