ಮಟನ್‌ ಖೀಮಾ-ಪರೋಟ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ..!

0
784

ನೀವು ನಿಮ್ಮ ಮನೆಯಲ್ಲಿಯೇ ತಯಾರಿಸಬಹುದಾದ ಮಟನ್ ಖೀಮಾ. ತಿನ್ನಲು ತುಂಬ ರುಚಿಕರವಾಗಿರುವ ಮಟನ್ ಖೀಮಾ ಮಾಡುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ.

Image result for ಮಟನ್‌ ಖೀಮಾ-ಪರೋಟ

ಮಟನ್ ಖೀಮಾ ಬೇಕಾಗುವ ಸಾಮಾಗ್ರಿಗಳು:

ಮಟನ್ ಖೀಮಾ – 1 ಕೆ. ಜಿ, ಮೊಸರು -1 ಕಪ್, ಜೀರಿಗೆ ಪುಡಿ – 2 ಚಮಚ
ಖಾರದ ಪುಡಿ – 2 ಚಮಚ, ಗರಂ ಮಸಾಲ – 2 ಚಮಚ, ಅರಿಶಿಣಪುಡಿ – 1ಚಮಚ, ಈರುಳ್ಳಿ – 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಹಸಿ ಮೆಣಸಿನಕಾಯಿ – 4, ಉಪ್ಪು – ರುಚಿಗೆ, ನೀರು -1 ಕಪ್, ಎಣ್ಣೆ – 2 ಚಮಚ
ಪರೋಟಕ್ಕೆ
ಮೈದಾ ಹಿಟ್ಟು – 3 ಕಪ್
ಉಪ್ಪು – ರುಚಿಗೆ
ಎಣ್ಣೆ – 4 ಚಮಚ

Related image

ತಯಾರಿಸುವ ವಿಧಾನ
ತೊಳೆದ ಖೀಮಾಕ್ಕೆ ಮೊಸರು, ಅರಿಶಿಣಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸುಮಾರು ಒಂದು ಗಂಟೆ ಹಾಗೆಯೇ ನೆನೆಯಲು ಬಿಡಿ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಪುನಃ 2-3 ನಿಮಿಷ ಫ್ರೈ ಮಾಡಿ. ನೆನೆಯಲು ಬಿಟ್ಟು ಇರುವ ಖೀಮಾ ಇದಕ್ಕೆ ಹಾಕಿ. ಕೊತ್ತಂಬರಿ ಪುಡಿ, ಗರಂ ಮಸಾಲ, ಜೀರಿಗೆ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಅರ್ಧ ಗಂಟೆ ಬೇಯಿಸಿ. ಮಧ್ಯೆ ಮಧ್ಯೆ ಸೌಟಿನಿಂದ ತಿರುವುತ್ತಿರಿ. ಖೀಮಾ ಡ್ರೈ ರೀತಿ ಆದ ಮೇಲೆ ಗ್ಯಾಸ್ ಆಫ್‌ ಮಾಡಿ. ನಂತರ ಸವಿಯಲು ಸಿದ್ಧವಾಗಿರುತ್ತೆ.