ಕಾಲೇಜ್ ಎಂಬ ಖತರ್ನಾಕ್ ಲೈಫ್ 2ನೇ ಸಂಚಿಕೆ

0
907

ಮೊದಲನೇ ಸಂಚಿಕೆ:

ಹಿಂದಿನ ಸಂಚಿಕೆಯಲ್ಲಿ sslc ಮುಗಿಸಿ ಕಾಲೇಜಿಗೆ ಸೇರಿಕೊಂಡಿದ್ದು ಆಯ್ತು.. ಈಗೇನಿದ್ದರೂ ಚನ್ನಾಗಿ ಓದಿ ಇಂಜಿನಿಯರಿಂಗ್ ಸೇರುವ ಕನಸಿನೊಂದಿಗೆ ಕಾಲೇಜ್ ನ ಮೊದಲ ದಿನ…..

ಕಾಲೇಜ್ ಗೆ ಕಾಲಿಡುತ್ತಲೇ ಸಿನಿಮಾಗಳಲ್ಲಿ ನೋಡಿದ ಹಾಗೆ ಇಲ್ಲೂ ರಾಗಿಂಗ್ ಇರುತ್ತದೆ ಎಂಬ ಕಲ್ಪನೆಯಲ್ಲೇ ಒಳ ಹೋದೆ.. ಆದರೆ ಅಲ್ಲಿ ಎಲ್ಲಾ ಮಾಮೂಲು.. ಮೊದಲ ದಿನ ಕ್ಲಾಸ್ ನಲ್ಲಿ ಕೆಲವು ಸ್ನೇಹಿತರು ಆದರು.. ಅಂದಹಾಗೆ ನನಗೊಂದು ಹೆಸರಿದೆ.. ಆದರೆ ಇಲ್ಲಿ ರವಿ ಎಂದುಕೊಳ್ಳಿ.. ನನ್ನ ಸ್ನೇಹಿತರೆಲ್ಲಾ ಬೇರೆ ಬೇರೆ ಕಾಲೇಜಿಗೆ ಸೇರಿಕೊಂಡಿದ್ದರು.. ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ ಆದ್ದರಿಂದ ಒಂದು ಸಾಮಾನ್ಯ ಖಾಸಗಿ ಕಾಲೇಜ್ ಗೆ ಸೇರಿಸಿದ್ದರು.. ಹೇಳಿಕೊಳ್ಳುವ ಹಾಗಿಲ್ಲದಿದ್ದರು ತಕ್ಕ ಮಟ್ಟಿಗೆ ಇತ್ತು.. ಕಾಲೇಜಿಗೆ ಸೇರಿಕೊಂಡ ಮೇಲೆ ನನಗೆ ನಾನೆ ದೊಡ್ಡವನಾಗಿ ಕಾಣತೊಡಗಿದೆ.. ಸ್ಕೂಲ್ ನಲ್ಲಿ ಇಷ್ಟ ಪಟ್ಟಿದ್ದ ಹುಡುಗಿಯನ್ನು ನೆನಸಿಕೊಂಡರೆ ನಗು ಬರುತ್ತಿತ್ತು.. ಎಂತಃ ಹುಡುಗು ಬುದ್ದಿ ಎನಿಸುತಿತ್ತು.. ಹಾಗೇ ದಿನ ಕಳೆಯುತ್ತಾ ಹೋದಂತೆ ಚೆನ್ನಾಗಿ ಓದುತ್ತಿದ್ದ ನಾನು ನಮ್ಮ ಲೆಚ್ಚರರ್ ಗೆ ಕ್ಲೋಸ್ ಆಗಿದ್ದೆ.. ಲೆಚ್ಚರರ್ ಗೆ ಕ್ಲೋಸ್ ಆದ ಸ್ಟೂಡೆಂಟನ್ನು ಏನಂತ ಕರಿತಾರೆ ನಿಮ್ಗೆ ಗೊತ್ತಿರಬೇಕಲ್ವಾ?? ಅದೇ ಬಕೆಟ್ ಬಕೇಟ್ ಅಂತ ಸ್ನೇಹಿತರು ಕೂಗ್ತಾಯಿದ್ರು.. ಇದರಿಂದ ಸ್ವಲ್ಪ ನನ್ನ ಸ್ವಾಭಿಮಾನಕ್ಕೆ ಅವಮಾನ ಅಗ್ತಾಯಿತ್ತು.. ಆನಂತರ ಕ್ಲಾಸ್ ನಲ್ಲಿ ಎಲ್ಲರಂತೆ ನನಗು ಗರ್ಲ್ ಫ್ರೆಂಡ್ ಬೇಕು ಅನಿಸೋಕೆ ಶುರು ಆಯ್ತು.. ಬುದ್ದಿ, ಬೇಡ ಅಂದರೂ ವಯಸ್ಸು ಕೇಳಬೇಕಲ್ಲಾ..

ಮಿಡ್ ಟರ್ಮ್ ನಲ್ಲಿ ಟಾಪ್ 3 ನಲ್ಲಿದ್ದ ನನಗೆ ಅದೇ ಅಡ್ವಾನ್ಟೇಜ್ ಆಗಿ ಒಂದು ಹುಡುಗಿ ಪರಿಚಯನೂ ಆದ್ಲು.. ಈ ಹುಡುಗೀರು ಚೆನ್ನಾಗಿ ಓದೋ ಹುಡ್ಗುರು ಅಂದ್ರೆ ಇಷ್ಟ ಪಡ್ತಾರೆ ಅನ್ನೊದು ಕನ್ಫರ್ಮ್ ಆಯ್ತು.. ಹೀಗೆ ಕಾಲೇಜ್ ನಲ್ಲಿ ನಮ್ಮದು ಡೀಸೆನ್ಟ್ ಮಾತುಕತೆ ಅಷ್ಟೆ.. ಒಮ್ಮೆ ಕಾಲೇಜ್ ಮುಗಿಸಿ ಬಸ್ ಹತ್ತಿ ಮನೆಗೆ ಬಂದೆ ಅಲ್ಲಿ ನಮ್ ಅಪ್ಪ ಫ್ಯಾಕ್ಟರಿ ಇಂದ ಎರಡು ಶಿಫ್ಟ್ ಓ ಟಿ ಮಾಡಿ ಮನೆಗೆ ಬಂದಿದ್ದರು.. ನೋಡಿ ಕರುಳು ಚುರುಕ್ ಎನಿಸಿತು.. ಏನೇ ಹೇಳಿ ಅಪ್ಪಂದಿರ ಕಂಡರೇ ಸಾಮಾನ್ಯವಾಗಿ ಗಂಡು ಮಕ್ಕಳಿಗೆ ಆಗೊದಿಲ್ಲ ಆದರೆ ಅವರು ಕಷ್ಟ ಪಡುವುದನ್ನ ಯಾವ ಮಗನು ಸಹಿಸೋದಿಲ್ಲ.. ಆ ಕ್ಷಣ ಅಪ್ಪನನ್ನು ನೋಡಿ ಬೇಜಾರಾಗಿ ಬುಕ್ ಹಿಡಿದು ಕೂತೆ.. ಅರ್ಧ ಘಂಟೆ ಅಷ್ಟೇ ನನ್ನ ಆ ಕಾಳಜಿ.. ಮತ್ತೆ ಮೊಬೈಲ್ ಹಿಡಿದು ವಾಟ್ಸ್ ಅಪ್ ಓಪನ್ ಮಾಡಿದೆ ಅಲ್ಲಿ ನಮ್ ಹುಡುಗಿ ಮೆಸೇಜ್.. ನಾನ್ ಹೊರಗ್ ಆಗಿದಿನಿ ಹೊಟ್ಟೆ ನೋವಿದೆ.. ಸ್ವಲ್ಪ ನನ್ನ ಅಸೈನ್ಮೆಂಟ್ ಬರೆದು ಕೊಡ್ತೀಯಾ ಅಂತ.. ಅಯ್ಯೊ ಎನಿಸಿ ಮೊದಲು ಅದನ್ನು ಬರೆಯಲು ಶುರು ಮಾಡಿ ಅರ್ಧ ಘಂಟೆಯಲ್ಲೇ ಮುಗಿಸಿದೆ.. ಅಪ್ಪನ ಮೇಲೆ ಬಂದ ಕಾಳಜಿ ಅರ್ಧ ಘಂಟೆ ಗೆ ಮಾಯವಾದದ್ದು ಹುಡುಗಿಯ ವಿಷಯದಲ್ಲಿ ಆಗಲ್ಲಿಲ್ಲ ಅದು ಮುಜುಗರ ಎನಿಸಿತು.. ಹೋಗಲಿ ಬಿಡು ಲವ್ ಎಂದ ಮೇಲೆ ಇದೆಲ್ಲಾ ಕಾಮನ್ ಎಂದು ಕೊಂಡೆ..

ಮಾರನೆ ದಿನ ಕಾಲೇಜ್ ನಲ್ಲಿ ನನ್ನ ಅಸೈನ್ಮೆಂಟ್ ಇಲ್ಲದ ಕಾರಣ ಕ್ಲಾಸ್ ನಿಂದ ಹೊರಗೆ ಹೋಗ ಬೇಕಾಯಿತು.. ಮನಸಲ್ಲಿ ಬೇಕಿತ್ತ ಮಗನೆ ನಿನಗೆ ಇದು ಅನ್ನಿಸಿದ್ರು.. ಪಾಪ ನಮ್ ಹುಡುಗಿ ಅಂದುಕೊಂಡೆ.. ಬರ್ತಾ ಬರ್ತಾ ನಾನ್ ಓದೋದು ಕಡ್ಮೆ ಆಯ್ತು.. main exam ನಲ್ಲಿ ಎಲ್ಲಾ 35 40 45 ಇಸ್ಟರಲ್ಲೇ ಇತ್ತು ನನ್ನ ಮಾರ್ಕ್ಸ್.. ಒಂದು ಕ್ಷಣವೂ ನಾನ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.. ಪ್ರೀತಿಯಲ್ಲಿ ಬಿದ್ದವನಲ್ಲವೇ ನಾನು..

 

ನನ್ನ ಕತೆಯನ್ನು ಹೊತ್ತು ಮತ್ತೆ ಬರುವೆ…. ನಾಳೆ ಕಾಯುತ್ತಿರಿ……

ಮುಂದುವರೆಯುವುದು ನಾಳಿನ ಸಂಚಿಕೆಯಲ್ಲಿ……