ಕಾಲೇಜ್ ಎಂಬ ಖತರ್ನಾಕ್ ಲೈಫ್ ಸಂಚಿಕೆ 3

0
583

ಎರಡನೇ ಸಂಚಿಕೆ

ಹಿಂದಿನ ಸಂಚಿಕೆಯಲ್ಲಿ….
ಪ್ರೀತಿಯಲ್ಲಿ ಬಿದ್ದಿದ್ದರಿಂದ ನನ್ನ ಓದಿನ ಆಸಕ್ತಿ ಕಡಿಮೆಯಾಗಿ ಮಾರ್ಕ್ಸ್ ಕಡಿಮೆ ಬಂದರೂ ನನ್ನ್ ಹುಡುಗಿ ನೋಡಿ ಖುಷಿ ಪಡುತ್ತಿದ್ದೆ..

ಹೀಗೆ ಮೊದಲ ವರ್ಷದ ರಜೆಯಲ್ಲಿ ಇದ್ದ ನಾನು ವಾಟ್ಸ್ ಅಪ್ ನಲ್ಲಿ ನನ್ನುಡುಗಿಯ ಜೊತೆ ಯವಾಗಲೂ ಬ್ಯುಸಿ ಯಾಗಿರುತ್ತಿದ್ದೆ.. ಅಮ್ಮ ಸ್ವಲ್ಪ ಸಹಾಯ ಮಾಡು ಅಂದರೂ ತಲೆ ಕೆಡಿಸಿಕೊಳ್ಳುತಿರಲ್ಲಿಲ್ಲ.. ಅಪ್ಪ ಫ್ಯಾಕ್ಟರಿ ಕೆಲಸ ಮುಗಿಸಿ ದಿನವೂ ಲೇಟ್ ಆಗಿ ಬರುತ್ತಿದ್ದರಿಂದ ನನ್ನನ್ನು ಕೇಳುವರಾರು ಇರಲಿಲ್ಲ ನನ್ನದೇ ರಾಜ್ಯಭಾರವಾಗಿತ್ತು..

ಹೀಗಿರುವಾಗ ಮುಂದಿನ ವರ್ಷ ಕಾಲೇಜ್ ಶುರುವಾಗುತ್ತಲೇ ನನ್ನ್ ಹುಡುಗಿ ನನ್ನನ್ನು ಅವಾಯ್ಡ್ ಮಾಡಲು ಶುರು ಮಾಡಿದಳು.. ಕೇಳಿದರೆ 2nd PUC ಅಲ್ವ ಚನಾಗಿ ಓದಬೇಕು ಅದಿಕ್ಕೆ ಎಂದು ನೆಪ ಹೇಳುತ್ತಿದ್ದಳು.. ನಾನು ಹೆಚ್ಚಿಗೆ ಫೋರ್ಸ್ ಮಾಡಲು ಹೋಗಲಿಲ್ಲ.. ಮೊದಲಿನಿಂದಲೂ ನಾ ಸ್ವಲ್ಪ ಸ್ವಾಭಿಮಾನಿಯೇ.. ಒಂದು ದಿನ ನಮ್ಮದೇ ಕ್ಲಾಸಿನ ಇನ್ನೊಬ್ಬ ಹುಡುಗನ ಜೊತೆ ನನ್ನ್ ಹುಡುಗಿ ಕ್ಲೋಸ್ ಆಗಿದ್ದಳು ಕೇಳಿದ್ದಕ್ಕೆ ಅವನು ಟಾಪರ್ ಅದಕ್ಕಾಗಿ ಡೌಟ್ ಕೇಳುತಿದ್ದೆ ಎಂದಳು..

ಚೆನ್ನಾಗಿ ಓದುತ್ತಿದ್ದ ನಾನು ಇವಳ ಪ್ರೀತಿಗೆ ಬಿದ್ದೆನಲ್ಲಾ ಎಂದೆನಿಸಿ ಮನೆ ಕಡೆ ಹೊರಟೆ..

ಮನೆಯಲ್ಲಿ ಯಾರೊ ಇಬ್ಬರು ಸಾಲ ವಾಪಸ್ ಕೇಳಲು ಬಂದಿದ್ದರು.. ನನ್ನ್ ಅಪ್ಪ ನನ್ನ ಕಾಲೇಜ್ ಫೀಸ್ ಕಟ್ಟಲು ಸಾಲ ಮಡಿದ್ದರೆಂದು ತಿಳಿಯಿತು.. ಒಂದು ಕ್ಷಣ ನಾನೇನಾಗುತ್ತಿದ್ದೇನೆ ಎಂದು ಅರಿವಿಗೆ ಬರದೇ ಮೂಕನಾದೆ..

ನಂತರ ನನಗೆ ನಾನೆ ಗಟ್ಟಿಗ ನಾಗಿ ಓದಲು ಕುಳಿತೆ.. ನನ್ನ ಅಪ್ಪ ಅಮ್ಮ ಕಷ್ಟ ಪಡುವುದಷ್ಟೇ ನನ್ನ ತಲೆಯಲ್ಲಿತ್ತು.. ಮಿಡ್ ಟರ್ಮ್ ನಲ್ಲಿ ಒಳ್ಳೆಯ ಅಂಕಗಳು ಬಂತು.. ಓದಲೂ ಕಾನ್ಫಿಡೆನ್ಸ್ ಕೂಡ ಹೆಚ್ಚಾಯಿತು.. ಆಗ ಪ್ರೀತಿ ಎಂಬ ಮೋಹ ಮತ್ತೆ ಆವರಿಸಿಕೊಳ್ಳಲು ಬಂತು..

ಮುಂದುವರೆಯುವುದು ನಾಳಿನ ಸಂಚಿಕೆಯಲ್ಲಿ..