ಎಂಥ ಕಷ್ಟವೇ ಬರಲಿ, ಯಾವ ಕೆಲಸ ಮಾಡಿದರು ಪರವಾಗಿಲ್ಲ, ಓದುವುದನ್ನು ನಿಲ್ಲಿಸುವುದಿಲ್ಲ ಅಂತ ಈ ಹುಡುಗನ ಮಾತು ಕೇಳಿ ನಿಮಗೂ ಇಂಥ ಆಲೋಚನೆ ಬರಬಹುದು..!!

0
936

ಸ್ನೇಹಿತರೆ ನಾನು ನಿಮಗೆ ನನ್ನ ಜೀವನದ ಒಂದು ಕಥೆಯನ್ನು ಹೇಳುತ್ತೇನೆ. ಇದನ್ನು ಕೇಳಿ ನೀವು ಇದು ಯಾವುದೇ ಚಿತ್ರ ಅಂದು ಕೊಳ್ಳಬೇಡಿ.. ಇದು ನನ್ನ ಜೀವನದ ಕಥೆ ಬರೆಯುವಾಗ ಕಣ್ಣಂಚಿನ ನೀರು ಪೇಪರ್‌ಗಳು ಒದ್ದೆಯಾಗಿದ್ದು ನಿಜ. ನಾನು ಢಾಕಾ ಮೂಲದವನು. ನಾನು ೨೦೧೪ರಲ್ಲಿ ಮೊದಲ ಬಾರಿಗೆ ಸೈಕಲ್ ರಿಕ್ಷಾ ಓಡಿಸಲು ಆರಂಭಿಸಿದೆ. ಓದಲು ಈ ಕೆಲಸದ ಮೊರೆ ಹೋಗ ಬೇಕಾಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ನಾನು ೮ನೇ ಕ್ಲಾಸ್‌ನಲ್ಲಿದ್ದಾಗಲೇ ಆಟೋ ಹತ್ತಿದೆ. ಈಗ ನಾನು ಟೆಕ್ಸಟೈಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ್ ಓದುತ್ತಿದ್ದೇನೆ.

ಸಾಂದರ್ಭಿಕ ಚಿತ್ರ

ಈ ಬಾರಿ ಕಾಲೇಜಿಗೆ ೧೦ ದಿನ ಚಕ್ಕರ್ ಹೊಡೆದು ಈ ಪಟ್ಟಣಕ್ಕೆ ಬಂದಿದ್ದೇನೆ. ಈದ್ ಹಬ್ಬದ ನಿಮಿತ್ಯ ಈ ನಗರಕ್ಕೆ ಹಲವು ಪ್ರವಾಸಿಗರು ಬರುತ್ತಾರೆ. ನಾನು ೧೦ ದಿನಗಳಲ್ಲಿ ಸುಮಾರು ೧೦ ಸಾವಿರ ರೂಪಾಯಿ ಹಣ ಸಂಪಾದಿಸಿ ಮತ್ತೆ ಮನೆಗೆ ತೆರಳುತ್ತೇನೆ. ನನಗೆ ೬೦೦೦ ನನ್ನ ಓದಿನ ಪ್ರತಿ ಸೆಮಿಸ್ಟರ್‌ಗೆ ಹಾಗೂ ೪೦೦೦ ರೂ. ನನ್ನ ದೈನಂದಿನ ಉಪಯೋಗಕ್ಕಾಗಿ ಬೇಕಾಗುತ್ತದೆ. ನನ್ನ ಕಾಲೇಜು ನನ್ನ ಕೆಲಸಕ್ಕೆ ಅನುಕೂಲವಾಗುವಂತೆ ಮಾಡಿಕೊಟ್ಟಿದೆ.

ಇನ್ನು ಈ ನಗರಕ್ಕೆ ಬಂದು ರಿಕ್ಷಾ ಓಡಿಸುವ ವಿದ್ಯಾರ್ಥಿ ನಾನೊಬ್ಬನೇ ಕಾಣುತ್ತೆ. ನನ್ನ ಕೆಲಸವನ್ನು ನೋಡಿ ಮೊದಲು ನನ್ನ ಸ್ನೇಹಿತರು ನಗುತ್ತಿದ್ದರು, ಆದ್ರೆ ಅವರಿಗೆ ನನ್ನ ಸ್ಥಿತಿಯ ಅರಿವಾಗುತ್ತಿದ್ದಂತೆ ಬೆನ್ನು ತಟ್ಟಿದ್ರು. ಅಲ್ಲದೆ ನನ್ನ ಕನಸಿಗೆ ಪುಷ್ಠಿ ನೀಡಲು ಅವರು ಸಹ ಸಹಕರಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ನನ್ನ ತಾಯಿ ನೆನಪು ನನಗೂ ಕಾಡುತ್ತಿದೆ. ಅವಳು ಸಹ ನನ್ನ ಬರುವಿಕೆಗಾಗಿ ಕಾಯುತ್ತಿದ್ದಾಳೆ. ಅಲ್ಲದೆ ಈ ಸಮಯದಲ್ಲಿ ತಾಯಿ ಕಾಲ್ ಮಾಡಿ ಮನೆಗೆ ಬಾ ನಿನಗೆ ಇಷ್ಟವಾದ ತಿಂಡಿಯನ್ನು ಮಾಡಿಕೊಡುವೇ ಎಂದಿದ್ದಾಳೆ. ಹೀಗಾಗಿ ನಾನು ನನ್ನ ಮೊಬೈಲ್ ಸ್ವಿಚ್ಛ ಆಫ್ ಮಾಡಿರುತ್ತೇನೆ. ನಾನು ಇದೇ ಮೊದಲ ಬಾರಿಗೆ ಹಬ್ಬವನ್ನು ಊರಿನಿಂದ ಆಚೆಗೆ ಮಾಡುತ್ತಿದ್ದೇನೆ. ಅಲ್ಲದೆ ನಾನು ನನ್ನ ತಾಯಿಯ ಪಾದ ಮುಟ್ಟಿ ಆರ್ಶಿವಾದ ಪಡೆಯಲಿಲ್ಲ ಎಂಬ ನೋವು ನನ್ನಲ್ಲಿದೆ. ನಾನು ದೊಡ್ಡ ವಿದ್ಯಾವಂತನಾಗಿ ಮುಂದಿನ ದಿನಗಳನ್ನು ಉತ್ತಮವಾಗಿ ಕಳೆಯ ಬೇಕೆಂಬುವುದೇ ನನ್ನ ಆಶಯ.

ಇಂತಿ ತಿಮ್ಮ ಸ್ನೇಹಿತ
ಅಖೇರುಜಮನ್