ದಸರಾ ಪ್ರಯಕ್ತ ಮೈಸೂರು ಸೇರಿದಂತೆ ಹಲವೆಡೆ ಟ್ರಿಪ್ ಹೋಗಲು KSRTC ಯಿಂದ ಭರ್ಜರಿ ಪ್ಯಾಕೇಜ್.!

0
343

ಐತಿಹಾಸಿಕ ಮೈಸೂರು ದಸರಾ ನೋಡಲು ದೇಶ ವಿದೇಶದಿಂದ ಜನರು ಬರುವುದು ಹೆಚ್ಚಾಗುತ್ತಿದೆ. ನೀವೂ ಈ ಭಾರಿ ಮೈಸೂರು ದಸರಾ ನೋಡಲು ಕಡಿಮೆ ಬಸ್ ಚಾರ್ಜ್-ನಲ್ಲಿ ಹೋಗಬಹುದು. ಇದಕ್ಕಾಗಿ ಕೆಎಸ್​ಆರ್​ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು. ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಗೆ 350/375 ರೂ. ಗಳಲ್ಲಿ ಪ್ರವಾಸ ಕೈಗೊಳ್ಳಬಹುದು ಮಕ್ಕಳಿಗೂ ಇನ್ನೂ ಕಡಿಮೆ ದರದಲ್ಲಿ ಫುಲ್ ಒಂದು ದಿನದ ಪ್ರವಾಸ ಮಾಡಬಹುದು ಅದರಂತೆ ಹಲವು ಪ್ರವಾಸಿ ತಾಣಗಳನ್ನು ಕೂಡ ನೋಡಬಹುದು. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಕಡಿಮೆ ಬಸ್ ದರದಲ್ಲಿ ಮೈಸೂರು ದಸರಾ?

ಹೌದು ದಸರಾ ನೋಡುಗರಿಗೆ KSRTC ಈ ಭಾರಿ ವಿಶೇಷ ಪ್ಯಾಕೇಜ್ ನೀಡಿದ್ದು, ಅತೀ ಕಡಿಮೆ ದರದಲ್ಲಿದೆ. ಸೆಪ್ಟಂಬರ್ 29 ರಿಂದ ಅಕ್ಟೋಬರ್ 8 ರವರೆಗೆ , 2019 ರ ಮೈಸೂರು ದಸರಾ ನಡೆಯಲಿದೆ . ಇಂತಹ ದಸರಾಗೆ ಹೋಗುವ ಪ್ಲಾನ್ ಇರುವರಿಗೆ ಖರ್ಚು ಕಡಿಮೆಯಾಗಿ ಉಳಿತಾಯವೂ ಹೆಚ್ಚಾಗಲಿದೆ. ಏಕೆಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೇಗದೂತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ ಸಾರಿಗೆ ಸೇವೆ ಜೊತಗೆ, ಈ ಕೆಳಗಿನ ವಿಶೇಷ ಟೂರ್ ಪ್ಯಾಕೇಜ್ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಪಿಸಿದೆ.

ಬಸ್ ‘ ಗಳ ವಿಶೇಷ ಪ್ಯಾಕೇಜ್?

1. ಗಿರಿ ದರ್ಶಿನಿ : ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ ಈ ಒಂದು ದಿನದ ವಿಶೇಷ ಪ್ಯಾಕೇಜ್ ಗಾಗಿ
ಕೆಎಸ್‌ಆರ್ ಟಿಸಿಯಿಂದ ವಯಸ್ಕರಿಗೆ ರೂ.350 ಮತ್ತು ಮಕ್ಕಳಿಗೆ 175 ದರವನ್ನು ನಿಗದಿ ಪಡಿಸಿದೆ.
2. ಜಲ ದರ್ಶಿನಿ, ದೇವ ದರ್ಶಿನಿ: ಗೋಲ್ಡನ್ ಟೆಂಬಲ್(ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಸೀಟ್, ಹಾರಂಗಿ ಜಲಾಶಯ ಮತ್ತು ಕೆ ಆರ್ ಎಸ್ ಈ ಮೊದಲಾದ ಸ್ಥಳಗನ್ನು ಒಂದು ದಿನದಲ್ಲಿ ಸುತ್ತಿ ಬರಬಹುದು. ಈ ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಗೆ ವಯಸ್ಕರಿಗೆ ರೂ.375, ಮಕ್ಕಳಿಗೆ ರೂ.190 ಪ್ರಯಾಣ ದರವನ್ನು ವಿಧಿಸಿದೆ. ದೇವ ದರ್ಶಿನಿ – ನಂಜನಗೂಡು, ಬ್ಲಫ್, ಮುಡುಕು ತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ ನೋಡಿಕೊಂಡು ಬರಬಹುದು. ಈ ಒಂದು ದಿನದ ವಿಶೇಷ ಮೈಸೂರು ದಸರಾ 2019 ಕೊಡುಗೆಯ ಪ್ಯಾಕೇಜ್ ಗೆ ವಯಸ್ಕರಿಗೆ ರೂ.275, ಮಕ್ಕಳಿಗೆ ರೂ.140 ಪ್ರಯಾಣ ದರವನ್ನು ನಿಗದಿ ಮಾಡಿದೆ.

ಐರಾವತ ಕ್ಲಬ್ ಕ್ಲಾಸ್ ಬಸ್ ವಿಶೇಷ ಪ್ಯಾಕೇಜ್?

1. ಮಡಿಕೇರಿ ಪ್ಯಾಕೇಜ್: ನಿಸರ್ಗ ಧಾಮ, ಗೋಲ್ಡನ್ ಟೆಂಬಲ್, ಹಾರಂಗಿ ಜಲಾಶಯ, ರಾಜಾ ಸೀಟ್, ಅಬ್ಬೀ ಫಾಲ್ಸ್ ಪ್ರವಾಸಿ ತಾಣಗಳನ್ನು ಮೈಸೂರು ದಸರಾ ಜೊತೆಗೆ ಜೊತೆಗೆ ನೋಡಿಕೊಂಡು ಬರಬಹುದು. ಈ ಐರಾವತ ಕ್ಲಬ್ ಕ್ಲಾಸ್ ವಾಹನಗಳ ಒಂದು ದಿನ ವಿಶೇಷ ಪ್ಯಾಕೇಜ್ ಗಾಗಿ ವಯಸ್ಕರಿಗೆ ರೂ.1200, ಮಕ್ಕಳಿಗೆ ರೂ.900 ದರವನ್ನು ಕೆಎಸ್‌ಆರ್ ಟಿಸಿ ನಿಗದಿ ಪಡಿಸಿದೆ.
2. ಬಂಡೀಪುರ ಪ್ಯಾಕೇಜ್: ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ನಂಜನಗೂಡು ನೋಡಿಕೊಂಡು ಬರಬಹುದು. ಈ ಒಂದು ದಿನದ ಪ್ಯಾಕೇಜ್ ಗಾಗಿ ವಯಸ್ಕರಿಗೆ ರೂ.1000, ಮಕ್ಕಳಿಗೆ 750 ರೂಪಾಯಿಗಳನ್ನು ನಿಗದಿ ಮಾಡಿದೆ.
3. ಶಿಂಷಾ ಪ್ಯಾಕೇಜ್: ಶಿವನಸಮುದ್ರ, ಶ್ರೀರಂಗಪಟ್ಟಣ, ರಂಗನತಿಟ್ಟು, ಬಲಮುರಿ ಫಾಲ್ಸ್, ಕೆ ಆರ್ ಎಸ್ ನೋಡಬಹುದು ಈ ಒಂದು ದಿನ ಪ್ಯಾಕೇಜ್ ಗಾಗಿ KSRTC ವಯಸ್ಕರಿಗೆ ರೂ.800, ಮಕ್ಕಳಿಗೆ ರೂ.600 ಪ್ರಯಾಣ ದರವನ್ನು ನಿಗದಿ ಮಾಡಿದೆ.
4. ಊಟಿ ಪ್ಯಾಕೇಜ್ – ಊಟಿ, ಬಟಾನಿಕಲ್ ಗಾರ್ಡನ್, ಇಟಾಲಿಯನ್ ಮತ್ತು ರೋಸ್ ಗಾರ್ಡನ್, ಬೋಟ್ ಹೌಸ್ ನೋಡಿಕೊಂಡು ಮೈಸೂರಿನ ದಸರಾ ನೋಡಲು ಮರಳಬಹುದು. ಈ ಊಟಿ ಪ್ಯಾಕೇಜ್ ಒಂದು ದಿನಕ್ಕೆ ವಯಸ್ಕರಿಗೆ ರೂ.1600 ಹಾಗೂ ಮಕ್ಕಳಿಗೆ ರೂ.1200 ಪ್ರಯಾಣದರವನ್ನು ನಿಗಮ ನಿಗದಿ ಪಡಿಸಿದೆ.

ಈ ರೀತಿಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ದಸರಾ 2019ಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡಿದ್ದು, ಈ ವ್ಯವಸ್ಥೆ ಬೆಳಿಗ್ಗೆ ಮೈಸೂರಿನಿಂದ ಹೊರಡು ನಿಗಧಿ ಪಡಿಸಿದ ಪ್ಯಾಕೇಜ್ ಅನುಸಾರ ಪ್ರವಾಸಿ ಸ್ಥಳಗನ್ನು ಸಂದರ್ಶಿಸಿ, ನಂತ್ರ ಸಾಯಂಕಾಲ ಮತ್ತೆ ನಿಮ್ಮನ್ನು ಮೈಸೂರು ದಸರಾ ಕಣ್ ತುಂಬಿಕೊಳ್ಳಲು ಮೈಸೂರಿಗೆ ಮರಳಿಸಲಿದೆ. ಅದಕ್ಕಾಗಿ ಪ್ಯಾಕೇಜ್ ನಿಮಗೆ ಅಕ್ಟೋಬರ್ 29, 2019ರಿಂದ ನವೆಂಬರ್ 13ರರ ವರೆಗೆ ಲಭ್ಯವಿರುತ್ತದೆ.