ಇಂದು ಮೈಸೂರು ಅರಮನೆಯಲ್ಲಿ ಎಂಟು ದಸರಾ ಆನೆಗಳನ್ನು ಸಾಂಪ್ರದಾಯಿಕ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು..!!

0
485

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಗಜಪಡೆಯ ಹೆಜ್ಜೆ ಗುರುತುಗಳೇ ಸಂಭ್ರಮಕ್ಕೆ ಗೆಜ್ಜೆ ಕಟ್ಟಿದಂತೆ.
ಇಂತದೊಂದು ಸಡಗರ ಇಂದಿನಿಂದ ಆರಂಭಗೊಳ್ಳಲಿದೆ. ಇದಕ್ಕೆ ಕಾರಣ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಅರ್ಜುನ ನೇತೃತ್ವದ ಗಜಪಡೆಯ ಮೊದಲ ಹಂತದ ಎಂಟು ಆನೆಗಳನ್ನು ಇಂದು ಮೈಸೂರು ಅರಮನೆಗೆ ಭವ್ಯ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು.

ಇಲವಾಲದ ಅಲೋಕದಲ್ಲಿದ್ದ ಈ ಎಂಟು ಆನೆಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ಅರಿಶಿಣ, ಕುಂಕುಮ, ಹೂಗಳಿಂದ ಅಲಂಕರಿಸಿ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಲಾರಿಗಳ ಮೂಲಕ ಕರೆತರಲಾಯಿತು. ಈ ವೇಳೆ ಆನೆಗಳಿಗೆ ಪೂಜೆ ನೆರವೇರಿಸಿದ ಪುರೋಹಿತರು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಪೂಜೆಗಳಿಗೂ ಮೊದಲು ಗಣಪತಿ ಪೂಜೆಯನ್ನು ನೆರವೇರಿಸಿ ನಂತರ ಬೇರೆ ದೇವರಿಗೆ ಪೂಜೆ ಮಾಡಲಾಗುತ್ತದೆ. ಆನೆಗಳು ಗಣಪತಿ ಸ್ವರೂಪವಾಗಿರುವುದರಿಂದ ಈ ಗಜಪಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಮಾತನಾಡಿ, ಮೊದಲ ತಂಡದ ಆನೆಗಳು ಇಂದಿನಿಂದ ಅರಮನೆಯಲ್ಲಿ ತಂಗಲಿವೆ. ಎಲ್ಲ ಆನೆಗಳು ಆರೋಗ್ಯದಿಂದವೆ ಎಂದು ತಿಳಿಸಿದರು.ನಂತರ ವಿಶೇಷವಾಗಿ ಶೃಂಗರಿಸಿದ ಈ ಗಜನಪಡೆಯನ್ನು ಅಶೋಕಪುರಂನಿಂದ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಮೂಲಕ ಅರಮನೆ ಬಳಿಗೆ ಕರೆತರಲಾಯಿತು. ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.