ಮೈಸೂರಿನ ಮಹಾರಾಜರಿಗೆ ಗಂಡು ಮಗು ಜನನ.. ರಾಜಮನೆತನಕ್ಕೆ ವಾರಸ್ದಾರನ ಆಗಮನ

0
698

ಮೈಸೂರಿನ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಶಿಕಾ ಕುಮಾರಿ ದಂಪತಿಗಳಿಗೆ ಗಂಡು ಮಗು ಜನನವಾಗಿದೆ.. ಕೆಲವು ದಿನಗಳ ಹಿಂದೆ ಸೀಮಂತ ಶಾಸ್ತ್ರದಿಂದ ಸಂತಸ ತುಂಬಿದ ಅರಮನೆ ಇಂದು ಮತ್ತೆ ರಾಜ ಮನೆತನದ ವಾರಸ್ದಾರನ ಆಗಮನದಿಂದ ಸಂತೋಷ ತುಂಬಿ ತುಳುಕುತಿದೆ..

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಸಂಜೆ 7 ಘಂಟೆ ಸುಮಾರಿಗೆ ತ್ರಿಶಿಕಾ ದೇವಿಯವರಿಗೆ ಗಂಡು ಮಗುವಿನ ಸಂತಾನವಾಗಿದೆ.. ವಾರಸ್ದಾರನ ಆಗಮನದಿಂದ ಎರಡು ಮನೆತನಗಳಿಗೆ ಸಂತೋಷವಾಗಿದೆ..

ಕೆಲವು ತಿಂಗಳ ಹಿಂದೆ ಮಹಾರಾಣಿ ತ್ರಿಶಿಕಾ ಕುಮಾರಿಯವರು ಗರ್ಭಿಣಿಯಾಗಿದ್ದರಿಂದ ಬೆಂಗಳೂರಿನಿಂದ ಮೈಸೂರಿಗೆ ಜನಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣ ಮಾಡಿದ್ದನ್ನು ಇಲ್ಲಿ ನೆನೆಯಬಹುದು..

ಇತ್ತೀಚೆಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಸರ್ಕಾರಿ ಶಾಲೆಯ ಮಕ್ಕಳನ್ನು ಅರಮನೆಗೆ ಕರೆಸಿ ಅತಿಥಿ ಸತ್ಕಾರ ಮಾಡಿದ ಬೆನ್ನಲ್ಲೇ ತಮಗೆ ಸಂತಾನ ಪ್ರಾಪ್ತಿಯಾಗಿರುವುದು ಖುಷಿಯ ವಿಚಾರವಾಗಿದೆ..

ಮೈಸೂರು ಮನೆತನಕ್ಕೆ ಅಲಮೇಲಮ್ಮನ ಶಾಪವಿದ್ದುದ್ದರಿಂದ ಪ್ರಮೋದದೇವಿಯವರಿಗೆ ಸಂತಾನವಾಗಲಿಲ್ಲ ಎಂಬುದು ಜನರ ನಂಬಿಕೆ.. ಒಂದು ತಲೆಮಾರಿಗೆ ಮಗುವಾದರೆ ಇನ್ನೊಂದು ತಲೆಮಾರು ದತ್ತು ಸ್ವೀಕಾರ ಮಾಡುತ್ತಾ ಬಂದಿದ್ದರು..

ಅದೇ ರೀತಿಯಾಗಿ ಪ್ರಮೋದ ದೇವಿಯವರು ಯಧುವೀರ್ ರವರನ್ನು ದತ್ತು ಪಡೆದು ರಾಜಮನೆತನದ ವಾರಸ್ದಾರನನ್ನಾಗಿ ಮಾಡಿದ್ದರು.. ಈಗ ಮಹಾರಾಜರಿಗೆ ಮಗುವಾಗಿರುವುದು ಕೇವಲ ಮೈಸೂರಷ್ಟೇ ಅಲ್ಲದೇ ಇಡೀ ನಾಡೆ ಸಂತೋಷ ಪಡುತ್ತಿದೆ..

ಏನೇ ಆಗಲಿ ನಮ್ಮ ನಾಡಿಗೆ ಅಪಾರ ಕೊಡುಗೆ ನೀಡಿದ ಮನೆತನವದು.. ಎಂದಿಗೂ ಸಂತೋಷದಿಂದಿರಲಿ ಎಂಬುದೆ ನಮ್ಮ ಆಸೆ..

ಹೊಸ ಪುಟ್ಟ ರಾಜಕುಮಾರನಿಗೆ ಶುಭವಾಗಲೆಂದು ಹಾರೈಸಿ.. ಶೇರ್ ಮಾಡಿ ಸಂತೋಷವನ್ನು ಹಂಚಿ..