ಮೈಸೂರಿನ ಮಹಾರಾಜರಿಂದ ಹೆಸರು ಪಡೆದ ಮೈಸೂರು ಪಾಕ್ ತಯಾರಿಸುವ ವಿಧಾನ..

0
732

ವಿಶಿಷ್ಟ ಬಗೆಯ ಮೈಸೂರ್ ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಅದು ಹೇಗೆ ಜನ್ಮ ತಾಳಿತು ಎಂಬುವುದು ಕೂಡ ಕುತೂಹಲಕಾರಿಯೇ. ಇಷ್ಟಕ್ಕೂ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರು ಪಡೆಯಿತು.

Also read: ಡ್ರೈ ಫ್ರೂಟ್ಸ್-ನಿಂದ ಮಾಡಿದ ಪೌಷ್ಟಿಕಾಂಶಯುಕ್ತ, ಗೋಕಾಕ್ ಕರದಂಟು ಮಾಡುವ ವಿಧಾನ..!!

ನಂತರ ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ.ಮೈಸೂರು ಪಾಕ್ ಒಂದು ಕರ್ನಾಟಕದ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ, ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಮೈಸೂರಿನಲ್ಲಿ ಹುಟ್ಟಿಕೊಂಡಿತು. ಇದು ಹೇರಳ ಪ್ರಮಾಣದಲ್ಲಿ ತುಪ್ಪವನ್ನು ಬಳಸಿ ಮತ್ತು, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಿ ಮಾಡಲಾಗುತ್ತದೆ. ಈ ಸಿಹಿಯ ರಚನೆ ಮಿಠಾಯಿಗಳಿಗೆ ಹೋಲುತ್ತದೆ. ಹಾಗಾದ್ರೆ ಇಷ್ಟೊಂದು ಇತಿಹಾಸ ಹೊಂದಿರುವ ಮೈಸೂರು ಪಾಕ್ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಬೇಕಾದ ಪದಾರ್ಥಗಳು:

Also read: ದೇಶಾದ್ಯಂತ ಹೆಸರು ಮಾಡಿದ ಬೆಳಗಾಂ ಕುಂದಾ ತಯಾರಿಸುವ ವಿಧಾನ..!!

 • ಒಂದು ಲೋಟ ಜರಡಿ ಹಿಡಿದ ಕಡಲೇಹಿಟ್ಟು
 • ಎರಡು ಲೋಟ ಸಕ್ಕರೆ
 • ಮೂರು ಲೋಟ ಶುದ್ಧ ತುಪ್ಪ
 • ಒಂದೂವರೆ ಲೋಟ ನೀರು

ತಯಾರಿಸುವ ವಿಧಾನ:

Also read: ವಿಶ್ವದ ನಾಲ್ಕನೇ ಅತಿದೊಡ್ಡ ಆಹಾರ ಬೆಳೆಯಾಗಿರುವ ಸ್ಪೆಷಲ್ ಬೇಬಿ ಆಲೂ ಫ್ರೈ ಮಾಡುವ ವಿಧಾನ..!!

 • ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಸೇರಿಸಿ ಕರಗಿಸಿ. ಸಕ್ಕರೆ ದ್ರಾವಣದ ಪಾತ್ರೆಯನ್ನು ಒಲೆ ಮೇಲಿಟ್ಟು ಕಾಯಿಸಿ
 • ಪಾತ್ರೆಯಲ್ಲಿನ ದ್ರಾವಣವನ್ನು ಸಣ್ಣ ಚಮಚೆಯಿಂದ ಹದನಾಗಿ ಕಲಕುತ್ತಾ ಹೋಗಿ. ದ್ರಾವಣ ಅಂಟು ಆಗುವ ವರಗೆ ಬಿಸಿಮಾಡಿ
 • ನಂತರ ಸಿದ್ಧವಾದ ಪಾಕವನ್ನು ಒಲೆ ಮೇಲಿಂದ ಕೆಳಗಿಳಿಸಿ
 • ಮತ್ತೊಂದು ನಾನ್‌ಸ್ಟಿಕ್‌ ಪ್ಯಾನ್‌ ಅಥವಾ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ 3-4 ಚಮಚ ತುಪ್ಪ ಹಾಕಿ ಕಾಯಿಸಿ, ಕರಗಿಸಿ. ಕಾದ ತುಪ್ಪಕ್ಕೆ 3-4 ಚಮಚ ಕಡಲೇ ಹಿಟ್ಟು ಸೇರಿಸಿ
 • ಅದೇ ಅಳತೆ 3-4 ಚಮಚ ಪಾಕ ಹಾಕಿ ಹದವಾಗಿ ಕಾಯಿಸಿ.ಮಿಶ್ರಣವನ್ನು ಚಮಚದಿಂದ ಕಲಕುವುದನ್ನು ಮರೆಯಬೇಡಿ
 • ಮೂರ್ನಾಲ್ಕು ನಿಮಿಷದ ನಂತರ ಮತ್ತೆ ಅದೇ ಕ್ರಿಯೆಯನ್ನು ಮುಂದುವರೆಸಿ. ತುಪ್ಪ ಹಾಗೂ ಪಾಕ ಪೂರ್ತಿ ಖಾಲಿಯಾಗುವವರೆಗೆ ಸೇರಿಸಿ
 • ಮಿಶ್ರಣ ಲಘು ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಾಣಲೆಯ ಅಂಚಿನಲ್ಲಿ ಮಿಶ್ರಣ ಗಟ್ಟಿಯಾಗಿಗುತ್ತೆ, ಈಗ ಗ್ಯಾಸ್ ಬಂದ್ ಮಾಡಿ
 • ನಂತರ ಅಗಲವಾದ ತಟ್ಟೆಯಲ್ಲಿ ತುಪ್ಪ ಸವರಿ, ಮಿಶ್ರಣವನ್ನು ಅದಕ್ಕೆ ಸುರಿಯಿರಿ. 15 ನಿಮಿಷ ಬಿಟ್ಟು, ಚಾಕುವಿನಿಂದ ನಿಮ್ಮ ಇಚ್ಛಾನುಸಾರ ಗಾತ್ರಕ್ಕೆ ಕತ್ತರಿಸಿ. ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತೆ.
 • ಈಗ ದೇಶಿಯ ಪ್ರಶಿದ್ದ ಮೈಸೂರು ಪಾಕ್ ರೆಡಿ ನಿಮ್ಮ ದಸರಾ ಹಬ್ಬಕೆದಲ್ಲಿ ಮಾಡಿ ಸವಿದು ನೋಡಿ.