ಈ ದಸರಾ ಮೈಸೂರು ಸಂಸ್ಥಾನಕ್ಕೆ ತುಂಬಾ ವಿಶೇಷವಾದದ್ದು, 5 ದಶಕಗಳ ನಂತರ ಮಹಾರಾಣಿ ಗರ್ಭಿಣಿಯಾಗಿದ್ದರೆ…

0
836

ದಸಾರ ಹಬ್ಬದ ಸಡಗರ ಮೈಸೂರಿನಲ್ಲಿ ನಿನ್ನೆ ಅಷ್ಟೆ ಕೊನೆಗೊಂಡಿದೆ. ಇನ್ನು ಅಲ್ಲಿನ ಜನರ ಬಾಯಲ್ಲಿ, ಹಬ್ಬದ ಸಿಹಿ ಊಟದ ಪರಿಮಳ ಹಾಗೆ ಇದೆ. ಆಗಲೇ ಮೈಸೂರು ಅರಮನೆಯಲ್ಲಿ ಮತ್ತೊಂದು ಸಿಹಿ ಊಟದ ತಯಾರಿ ಹಾಗೆ ಇದೆ. ಏನಪ್ಪ ಅದು ಅಂದುಕೊಂಡ್ರಾ..

ನಿಮ್ಮ ಊಹೆ ಖಂಡಿತವಾಗಿಯೂ ಸತ್ಯ ಮೈಸುರು ಅರಮನೆಯ ಮಹಾರಾಣಿ ತ್ರಿಷಿಕಾ ಶ್ರೀಮಂತ ಕಾರ್ಯ ನಡೆಯುತ್ತಿದೆ. ಹೌದು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗರ್ಭವತಿಯಾಗಿದ್ದು, ಶ್ರೀಮಂತ ಕಾರ್ಯಕ್ಕೆ ಅರಮನೆ ನಗರಿ ಶೃಂಗಾರಗೊಂಡಿದೆ. ಈ ಕಾರ್ಯಕ್ರಮ ವಿಶೇಷ ಏನಪ್ಪಾ ಅಂದ್ರೆ ಗರ್ಭಿಣಿ ದಸರಾ ಪೂಜೆಯಲ್ಲಿ ತೊಡಗಗಿದ್ದೇ ವಿಶೇಷ. ಸುಮಾರು 56ರು ವರ್ಷಗಳ ಬಳಿಕ ಇಂತಹ ಸನ್ನಿವೇಶ ನಡೆದಿದೆ. ಅಂದಹಾಗೆ 1961 ಮಹರಾಣಿ ತ್ರಿಪುರ ಸುಂದರಿ ಅಮ್ಮಣಿ ಅವರು ನವರಾತ್ರಿಯ ಪೂಜೆ ಸಂದರ್ಭದಲ್ಲಿ ಗರ್ಭಿಣಿ ಯಾಗಿದ್ದರು. ಈಗ ಅಂತಹದ್ದೇ ಒಂದು ಸನ್ನಿವೇಶಕ್ಕೆ ಅರಮನೆ ಸಾಕ್ಷಿಯಾಗಿದೆ.

ಐತಿಹಾಸಿಕ ಖಾಸಗಿ ದರ್ಬಾನಲ್ಲಿ ಭಾಗವಹಿಸಿದ ಈ ಜೋಡಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು. ಅಲ್ಲದೆ ಮಹರಾಜ ಪೂಜೆ ಮಾಡುವಾಗ, ಅವರ ಧರ್ಮಪತ್ನಿ ಸಹ ತನ್ನ ಕರ್ತವ್ಯವನ್ನು ಮಾಡಬೇಕಾಗಿದ್ದರಿಂದ ತ್ರಿಷಿಕಾ ಮೈಸೂರಿಗೆ ಬಂದಿದ್ದರು.

ಅಂದಹಾಗೆ ಕಳೆದ ಜೂನ್ನಲ್ಲಿ ಈ ಇಬ್ಬರ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆಯಲ್ಲಿ ಹೆಚ್ಚು ದಿನಗಳ ಕಾಲ ದಂಪತಿ ವಾಸ್ತವ್ಯ ಹೂಡಿದ್ದರು. ಆದ್ರೆ ದಸರಾ ಹಿನ್ನೆಲೆಯಲ್ಲಿ ಮಹರಾಜ ಹಾಗೂ ರಾಣಿ ಶತಾಬ್ದಿ ರೈಲಿನಲ್ಲಿ ಸಂಚರಿಸಿದ್ದರು. ಇನ್ನು ಅ.1ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ ವಂಶಸ್ಥರಿಗೆ ಆಹ್ವಾನ ನೀಡಲಾಗಿದೆ. ದಸರಾದಲ್ಲಿ ಭಾಗವಹಿಸಿದ ಬಳಿಕ ತ್ರಿಷಿಕಾ ತಮ್ಮ ತವರು ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪದೆ ಪದೆ ತಿರುಗಾಟ ಬೇಡವೆಂದು, ಭಾನುವಾರವೇ ಶ್ರೀಮಂತ ಕಾರ್ಯ ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಾಧ್ಯಮದವರು ಸೇರಿದಂತೆ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.