ದೇಶ ವಿದೇಶದಲ್ಲಿ ಕಂಪನ ಚೆಲ್ಲಿರುವ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್ ಹೇಗೆ ತಯಾರಾಗುತ್ತೆ ನೋಡಿ.

0
1238

ಮೈಸೂರು ಸ್ಯಾಂಡಲ್ ಸೋಪ್…ದೇಶ, ವಿದೇಶಗಳಲ್ಲಿ ಕಂಪು ಸೂಸಿ ಕರ್ನಾಟಕದ ಹೆಮ್ಮೆಯೆನಿಸಿಕೊಂಡ ನಮ್ಮದೇ ಸಾಬೂನು. ಮೈಸೂರು ಸ್ಯಾಂಡಲ್ ಸೋಪಿನ ಈ ಸುಗಂಧಕ್ಕೆ 102 ವಷಗಳ ಇತಿಹಾಸ ಇದೆ. ಶತಮಾನಗಳಿಂದ ಮನೆ ಮನೆಗಳಲ್ಲಿ ಕಂಪು ತುಂಬಿರುವ ಮೈಸೂರು ಸ್ಯಾಂಡಲ್ ಎಂಬ ಈ ‘ನಮ್ಮ ಸೋಪ್‌’ನ ಪರಿಮಳದ ಕತೆ ಇಲ್ಲಿದೆ. ನೋಡಿ

1918ರಲ್ಲಿ ಫ್ರಾನ್ಸ್‌ನಿಂದ ಬಂದ ಅತಿಥಿಗಳು, ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅಪರೂಪದ ಕಾಣಿಕೆ ನೀಡಿದರು. ಅದು ಯಾವುದು ಆ ಅಪರೂಪದ ಕಾಣಿಕೆ ಎಂದರೆ; ಅಮೋಘವಾದ ಸುವಾಸನೆಯ ಸಾಬೂನು ಬಿಲ್ಲೆಗಳಾಗಿದ್ದವು. ಅಚ್ಚರಿಯ ಸಂಗತಿ ಏನೆಂದರೆ, ಭಾರತದಲ್ಲಿ ಸಿದ್ಧಪಡಿಸಿದ ಶ್ರೀಗಂಧ ಎಣ್ಣೆಯನ್ನು ಬಳಸಿಯೇ ಪರಿಮಳದ ಆ ಸಾಬೂನು ಬಿಲ್ಲೆಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗಿತ್ತು! ಆಗ ಮಹಾರಾಜರು, ‘ನಾವೂ ಏಕೆ ಸಾಬೂನು ತಯಾರಿಸಬಾರದು?’ ಎಂದು ಆಲೋಚಿಸಿದರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಅವರು, ರಸಾಯನಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದ ಎಸ್‌.ಜಿ.ಶಾಸ್ತ್ರಿ ಅವರನ್ನು ತರಬೇತಿಗಾಗಿ ಲಂಡನ್‌ಗೆ ಕಳುಹಿಸಿದರು. ವಿದೇಶದಿಂದ ಮೈಸೂರಿಗೆ ಮರಳಿದ ಎಸ್‌.ಜಿ.ಶಾಸ್ತ್ರಿ ಅವರು, ಸ್ಥಳೀಯವಾಗಿ ಕೆಲವು ಪ್ರಯೋಗಗಳನ್ನು ನಡೆಸಿದರು. ಕೆಲವು ದಿನಗಳ ನಂತರ ಮೈಸೂರು ಸ್ಯಾಂಡಲ್‌ ಸಾಬೂನು ಜನ್ಮತಳೆಯಿತು.

ಶ್ರೀ ಗಂಧದ ಸಸಿಗಗಳು 3 ವರ್ಷದ ವರೆಗೆ ಬೆಳೆಸಿ ನಂತಹ ಹಚ್ಚಲಾದ ಸಸಿಗಳನ್ನು 15-20 ವರ್ಷದ ನಂತರ ಕತ್ತರಿಸಿದ ಶ್ರೀಗಂಧದ ಮರವನ್ನು ಕಟಾವು ಮಾಡುತ್ತಾರೆ, ಯಂತ್ರ ಸಹಾಯದಿಂದ ಚಿಕ್ಕ ಚಿಕ್ಕ ತುಂಡುಗಳಾಗಿ ಕಟ್ಟುಮಾಡಿ ಪೌಡರ್ ಮಾಡಲಾಗುತ್ತೆ ನಂತರ ಅದನ್ನು ಸರಿಯಾದ ಪ್ರಮಾಣದಲ್ಲಿ ಬೇಯಿಸುವ ಮೂಲಕ ನೀರಿನಲ್ಲಿ ಮಿಶ್ರಣವಾದ ಶ್ರೀಗಂಧದ ಎಣ್ಣೆಯನ್ನು ತಗೆದು ಸ್ಯಾಂಡಲ್ವುಡ್ ಆಯಿಲ್ ಮತ್ತು ವಾಟರ್ ಮಿಕ್ಸರ್ ಪ್ರಮಾಣವನ್ನು ಮಾಪನದ ಮೂಲಕ ಬೇರ್ಪಡಿಸಿ ಪ್ಯೂರ್ ಶ್ರೀಗಂಧದ ಆಯಿಲ್ ತೆಗೆದು ವಾಕಿಂಗ್ಡ್ರಯರ್ ಮೂಲಕ aluminium container ತೆಗೆಯುತ್ತಾರೆ. ನಂತರ ಸಾಬೂನೀಕರಣದ ಮೊದಲ ಹಂತದಲ್ಲಿ ಮೂರು ಕಚ್ಚಾವಸ್ತುಗಳಾದ Coustic soda, forum oil, salt water ಮಿಕ್ಸ್ ಮಾಡಿ 110 degree celsius ಪ್ರಮಾಣದಲ್ಲಿ ಕುದಿಸಿ 28 ರಿಂದ 48 ಗಂಟೆ ಕೂಲ್ಮಾಡಿ ವಾಕಿಂಗ್ ಸಿಸ್ಟಮ್ ಮೂಲಕ ಎರಡನೇ ಹಂತದ ತರಯಾರಿಕೆಗೆ ಕಳುಹಿಸಲಾಗಿತ್ತೆ.

ಎರಡನೇ ಹಂತದಲ್ಲಿ ಸೋಪ್ ನೂಡಲ್ ಗೆ ಗ್ಲುಜರಿನ್ ADTI ಸೇರಿಸಿ ಕೊನೆಯ ಹಂತದಲ್ಲಿ ಮಿಕ್ಸರ್ ಗೆ ಹಾಕಿ ಕಲರ್ ಮತ್ತು ಶ್ರಿಗಂಧದ ಆಯಿಲ್ ಸೇರಿಸಿ ರೂಲಿಂಗ್ ಮಾಡಿ ಒಂದೇಸಾರಿ ಹಿಟ್, ಕೋಲ್ಡ್ ಮಾಡಿ ತಯಾರಿಸಿದ ಸೋಪ್ ಕಟಿಂಗ್ ರೂಲ್ ಗೆ ಹೋಗುತ್ತೆ ಅಲ್ಲಿ ಕಟ್ಟಾದ ಸೋಪ್ ನೇಮ್ ಮತ್ತು ನಂಬರ್ ಪ್ರಿಂಟ್ ಗೆ ಹೋಗುತ್ತೆ ನಂತರ ಕಂಟ್ರೋಲ್ ರೂಂ ನಲ್ಲಿ ಸೋಪಿನ ಗುಣಮಟ್ಟ ಪರೀಕ್ಷಿಸಿದ ನಂತರ ಪ್ಯಾಕಿಂಗ್ ಹೋಗುತ್ತೆ. ಹೀಗೆ POWDER, HANDWASH ಬೇರೆ ಬೇರೆ ತರದ ಸ್ಯಾಂಡಲ್ ಉತ್ಪನ್ನಗಳನ್ನು ತಯಾರಿಕೆಯಾಗಿ ದೇಶ ವಿದೇಶದಲ್ಲಿ ಮಾರಾಟವಾಗುತ್ತ 103 ವರ್ಷಗಳ ಇತಿಹಾಸ ಬರೆದಿದೆ.