ಮಲ್ಟಿಫ್ಲೆಕ್ಸ್ ಮತ್ತು ಚಿತ್ರ ಮಂದಿರಗಳಲ್ಲಿ ಕೂಲ್​ಡ್ರಿಂಕ್ಸ್​ ಬದಲು ಎಳೆನೀರು ಮಾರಾಟ ಮಾಡಿ ಎಂದು ಆದೇಶ ನೀಡಿ ರೈತರ ಕಷ್ಟಕ್ಕೆ ನೇರವಾದ ಡಿಸಿ..!

0
568

ಹೌದು ನಮ್ಮ ರಾಜ್ಯದಲ್ಲಿ ಸಾಕಷ್ಟು ಬರಗಾಲ ತಂಡವಾಡುತಿದ್ದು ಇದರ ಬೆನ್ನಲೇ ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಮತ್ತು ಯಾವುದೇ ಬೆಲೆ ಬೆಳೆಯಲು ಸಾಧ್ಯವಾಗುತಿಲ್ಲ ಇಂತಹ ಸಮಯದಲ್ಲಿ ಮೈಸೂರು ಜಿಲ್ಲಾಧಿಕಾರಿ ಒಂದು ಖಡಕ್ ಆದೇಶವನ್ನು ಹೊರಡಿಸಿದ್ದಾರೆ.

source:Star of Mysore

ಸತತ ಬರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗುವ ಸಲುವಾಗಿ ಮೈಸೂರಿನ ಎಲ್ಲಾ ಮಲ್ಟಿಫ್ಲೆಕ್ಸ್ ಮತ್ತು ಚಿತ್ರ ಮಂದಿಗಳಲ್ಲಿ ಕೂಲ್​ಡ್ರಿಂಕ್ಸ್​ ಬದಲು ಎಳೆನೀರು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ರಂದೀಪ್​ ಆದೇಶಿಸಿದ್ದಾರೆ.

source:onewebid.blogspot.com

ಚಿತ್ರ ಮಂದಿರಗಳಲ್ಲಿ ಎಳೆನೀರು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ವಿಧಾನಪರಿಷತ್​ ಸದಸ್ಯ ಎಂ.ಕೆ. ಪ್ರಾಣೇಶ್​ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಎಳೆನೀರು ಮಾರಾಟ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

source:thai.alibaba.com

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರಂದೀಪ್​ ಅವರು ಎಳೆನೀರು ಮಾರಾಟಕ್ಕೆ ಆದೇಶ ನೀಡಿದ್ದಾರೆ. ಈ ಸಂಬಂಧ ಮೈಸೂರು ಚಲನಚಿತ್ರ ಮಂದಿರಗಳ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ.ಖಂಡಿತ ಇದೆ ರೀತಿ ಸಂಪೂರ್ಣವಾಗಿ ನಮ್ಮ ಕರ್ನಾಟಕದಲ್ಲಿ ಆದರೆ ಎಷ್ಟೋ ರೈತರು ಒಂದಿಷ್ಟು ಖುಷಿ ಪಡಬಹುವು ಅನಿಸುತ್ತದೆ.

source:indiatimes.com