ಬಾಲ್ಯ ವಿವಾಹದಿಂದ ಈ ಬಾಲಕಿ ಪಾರಾದ ರೀತಿ ಕಂಡರೆ ಅವಳ ಧೈರ್ಯ ಹಾಗೂ ಚಾತುರ್ಯತೆಯನ್ನು ಖಂಡಿತ ಮೆಚ್ಚುತ್ತೀರಿ!!

0
287

ರಾಜ್ಯದಲ್ಲಿ ಇನ್ನೂ ಬಾಲ್ಯ ವಿವಾಹಗಳು ಕಂಡು ಬರುತ್ತಿದ್ದು, ಸರ್ಕಾರ ಎಷ್ಟೇ ಕ್ರಮ ಕೈಗೊಂಡರು ಕದ್ದು ಮುಚ್ಚು ಮದುವೆಗಳು ನಡೆಯುತ್ತಾನೆ ಇವೆ. ಇಂತಹ ವಿವಾಹ ಮಾಡಿಕೊಂಡ ಅಪ್ರಾಪ್ತ ಬಾಲಕಿಯರು ಜೀವನ ಪೂರ್ತಿ ನರಕ ಯಾತನೆ ಅನುಭವಿಸಬೇಕಾಗುತ್ತೆ, ಏಕೆಂದರೆ ತಮ್ಮ ಜೀವನದಲ್ಲಿ ಏನೆಲ್ಲಾ ಕನಸು ಕಂಡು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಚಿಕ್ಕ ವಯಸ್ಸಿನಲ್ಲಿ ತಮಗಿತ್ತ ಹತ್ತಾರು ವರ್ಷ ಅಂತರವಿರುವ ವ್ಯಕ್ತಿಯನ್ನು ಮದುವೆಯಾಗಿ ನೆಮ್ಮದಿಯಿಂದ ಇರುವುದು ಕಷ್ಟದ ಜಿವನವಾಗುತ್ತೆ, ಇಂತಹ ಪ್ರಕರಣಕ್ಕೆ ಬಲಿಯಾಗುತ್ತಿದ್ದ ಬಾಲಕಿಯೊಬ್ಬಳು ಫೇಸ್ ಬುಕ್ ಸಹಾಯದಿಂದ ಪಾರಾಗಿದ್ದಾಳೆ.

ಹೌದು ತನಗೆ ಈ ಮದುವೆ ಇಷ್ಟ ಇಲ್ಲ, ಅಪ್ಪ ಅಮ್ಮ ಬಲವಂತವಾಗಿ ಮದುವೆ ಮಾಡಿಸುತ್ತಿದ್ದಾರೆ ಎಂದು ಫೇಸ್ ಬುಕ್ ನ ಬೆಂಗಳೂರು ಸಿಟಿ ಪೊಲೀಸ್ (BCP) ಪೇಜ್ ನಲ್ಲಿ ಪೋಸ್ಟ್ ಮಾಡಿ ಕಷ್ಟ ಹೇಳಿಕೊಂಡಿದ್ದ ಬಾಲಕಿಗೆ ತಕ್ಷಣ ಸ್ಪಂದಿಸಿ ಬಾಲ್ಯ ವಿವಾಹ ನಡೆಯದಂತೆ ತಡೆದಿದ್ದಾರೆ ಪೊಲೀಸರು. ಮೈಸೂರು ಜಿಲ್ಲೆಯ ಜಯಪುರದಲ್ಲಿನ ಅಪ್ರಾಪ್ತೆಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದ್ದರು. ಇದೇ ಜನವರಿ 30ರಂದು ಮದುವೆ ಮಾಡಿಬಿಡಲು ನಿರ್ಧರಿಸಿ ತಯಾರಿ ಮಾಡುತ್ತಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಬಾಲಕಿ ಫೇಸ್ ಬುಕ್ ನಲ್ಲಿ ವಿಚಾರವನ್ನು ಪೊಲೀಸರಿಗೆ ಮುಟ್ಟುವಂತೆ ಮಾಡಿದ್ದಾಳೆ. ಅಪ್ರಾಪ್ತೆ ಸಲ್ಲಿಸಿದ ಮನವಿಗೆ ಬೆಂಗಳೂರು ಪೊಲೀಸರು ಸ್ಪಂದಿಸಿರುವ ಪ್ರಕರಣ ವರದಿಯಾಗಿದೆ.

ಇದೇ ತಿಂಗಳ 30ಕ್ಕೆ ನನ್ನ ವಿವಾಹ‌ ಮಾಡಲು ಪೋಷಕರು ತೀರ್ಮಾನಿಸಿದ್ದಾರೆ. ನಾನಿನ್ನು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವೆ. ಹೀಗಾಗಿ ನನ್ನ ವಿವಾಹ ಮಾಡದಂತೆ ಪೋಷಕರಿಗೆ ಬುದ್ಧಿವಾದ ಹೇಳಿ ಎಂದು ಬಾಲಕಿ ತಮ್ಮ ತಂದೆಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪೋಸ್ಟ್ ಮಾಡಿದ್ದಳು. ತಕ್ಷಣವೇ ಬೆಂಗಳೂರು‌ ನಗರ ಪೊಲೀಸರು ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು‌. ನಂತರ ಬೆಂಗಳೂರು ಪೊಲೀಸರು, ಮೈಸೂರು ಪೊಲೀಸರಿಗೆ ಮಾಹಿತಿ ನೀಡಿ, ಬಾಲಕಿಯ ಪೋಸ್ಟ್ ಕುರಿತು ಮಾಹಿತಿ ನೀಡಿದ್ದರು. ಶೀಘ್ರವೇ ಮೈಸೂರು ಜಿಲ್ಲೆಯ ಜಯಪುರ ಗ್ರಾಮದ ಪೊಲೀಸರು ಬಾಲಕಿಯ ಮನೆಗೆ ತೆರಳಿ, ಬಾಲ್ಯವಿವಾಹ ಅಪರಾಧ ಎಂದು ತಿಳಿ ಹೇಳಿ ಜನವರಿ 30ರಂದು ನಡೆಯಬೇಕಿದ್ದ ಮದುವೆಯನ್ನು ರದ್ದು ಪಡಿಸಿದ್ದಾರೆ.

ಅದರಂತೆ 9ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿಗೆ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದರು. ಕುಟುಂಬಸ್ಥರ ಸಂಬಂಧದಲ್ಲೇ ಮದುವೆ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಜ.30 ರಂದು ಮದುವೆ ನಿಶ್ಚಯ ಮಾಡಲು ಮಾತುಕತೆಗೆ ಎರಡು ಕುಟುಂಬಗಳು ಸಜ್ಜಾಗಿದ್ದವು. ಇದಕ್ಕೆ ವಿರೋಧ ವ್ಯಕ್ತಪಡಿಸಿದರು ಮನೆಯವರು ಬಾಲಕಿಯ ಮಾತು ಕೇಳದೆ ಮದುವೆ ಕಾರ್ಯ ಮುಂದುವರೆಸಿದ್ದರು, ಆದರೆ ಆ ಬಾಲಕಿ, ತನಗೆ ಮದುವೆ ಇಷ್ಟವಿಲ್ಲವೆಂದು ಬೆಂಗಳೂರು ಸಿಟಿ ಪೊಲೀಸರಿಗೆ ಸ್ನೇಹಿತೆಯ ಫೇಸ್ ಬುಕ್ ಪೋಸ್ಟ್ ಮೂಲಕ ತನ್ನ ಕಷ್ಟ ತೋಡಿಕೊಂಡಿದ್ದಳು. ಜೊತೆಗೆ ವಿವರವನ್ನು ನೀಡಿ ತಂದೆಯ ಫೋನ್ ನಂಬರ್ ಕೂಡ ಹಾಕಿದ್ದಳು. ಅದರಂತೆ ನಿನ್ನೆ ಅಪ್ರಾಪ್ತೆ ಮನೆಗೆ ತೆರಳಿದ ಇನ್ಸ್ ಪೆಕ್ಟರ್, ಆಕೆಯ ತಂದೆಗೆ ಹಾಗೂ ಕುಟುಂಬಸ್ಥರಿಗೆ ತಿಳಿ ಹೇಳಿ ಮದುವೆ ಮಾಡದಂತೆ, 18 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದು ಕೊಡಬೇಕಾಗಿಯೂ ಇನ್ಸ್ ಪೆಕ್ಟರ್ ಸೂಚನೆ ನೀಡಿದ್ದಾರೆ.

Also read: ಹುಡುಗನ ಜೊತೆಗೆ ಹುಡುಗೀಯರು ಡೇಟಿಂಗ್ ಹೋಗೋದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಡೇಟಿಂಗ್ ಸಿಕ್ರೆಟ್..