1968ರಲ್ಲಿ ದಸರಾ ಹಬ್ಬದ ವಿಡಿಯೋ ನೋಡಿ

0
3638

1968ರಲ್ಲಿ ದಸರಾ ಹಬ್ಬ ಮಾಡಿದ್ದು ಜಯಚಾಮರಾಜೇಂದ್ರ ಒಡೆಯರು. ಈಗಿನಂತೆ ಮೈಸೂರು ದಸರಾದಲ್ಲಿ ಆನೆ ಅಂಬಾರಿಯಲ್ಲಿ ದೇವರ ವಿಗ್ರಹ ಕೂತುಕೋತಿರಲಿಲ್ಲ. ಆಗ ಮೈಸೂರ ಒಡೆಯರು ಕೂತ್ಕೋತಿದ್ರು. ಸ್ವಾತಂತ್ರ್ಯ ಸಿಕ್ಕಿ 21 ವರ್ಷವಾಗಿತ್ತು ಮತ್ತು ಜಯಚಾಮರಾಜೇಂದ್ರ ಒಡೆಯರಿಗೆ ಸರ್ಕಾರದಿಂದ ಗೌರವ ದಾನ ಸಹಾಯ ಸಿಗುತಿತ್ತು. ಆದರೂ ಸಾಂಪ್ರದಾಯಿಕ ದಸರಾ ಹಬ್ಬವನ್ನು ಅವರು ತಮ್ಮ ಪೂರ್ವಜರಂತೆಯೇ ನಡೆಸಿದ್ದರು.

ಸಿಂಹಾಸನದ ಮೇಲೆ ಕುಳಿತು ಎಂದಿನಂತೆ ಜಯಚಾಮರಾಜೇಂದ್ರ ಒಡೆಯರು ದರ್ಬಾರ್ ನಡೆಸಿದ್ದರು. ಆಯುಧಪೂಜೆಯ ದಿನ ಎಲ್ಲಾ ಕಾರುಗಳು,ಪಲ್ಲಕ್ಕಿ, ರಾಜಾನೆಗಳು, ರಾಜಕುದುರೆಗಳಿಗೂ,ಪೂಜೆ ಮಾಡಿದ್ದರು.

ಗಾರ್ಡ್ ಆಫ್ ಆನರ್ ಗೆ ಸೆಲ್ಯೂಟ್ ಹೊಡೆದು ಮೆರವಣಿಗೆ ಚಾಲನೆ ಕೊಟ್ಟರು. ಪಲ್ಲಕ್ಕಿಯಲ್ಲಿ ಅಂಬಾರಿ ಆನೆಯ ಹತ್ತಿರ ಹೋಗಿ ಅಂಬಾರಿಯಲ್ಲಿ ಕುಳಿತು, ಮೈಸೂರಿನ ಮುಖ್ಯ ಬೀದಿಗಳಲ್ಲಿ ಒಡೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದರ ಸಾಕ್ಷಚಿತ್ರ ಇದೆ , ನೋಡಿ ಆನಂದಿಸಿ