ಶ್ರೀ ವೆಂಕಟೇಶ್ವರ ಲೀಲೆಗಳಲ್ಲಿ ಒಂದಾದ ಕಪಿಲ ತೀರ್ಥದ ಮಹಿಮೆ

0
963

ಹಿಂದೆ ಪುರಂದರನೆಂಬ ರಾಜನಿದ್ದನು. ಆ ರಾಜ ಬಹಳ ಧರ್ಮಾತ್ಮನು. ಪ್ರಜೆಗಳನ್ನು ಹೆತ್ತ ಮಕ್ಕಳಂತೆ ಪಾಲಿಸುತ್ತಾ ಎಷ್ಟೋ ವರುಷಗಳು ರಾಜ್ಯವಾಳಿದನು.

ಆ ಮಹಾ ರಾಜನಿಗೆ ವೃದ್ಧಾಪ್ಯವು ಬಂದಿತು, ಆದರೂ ಸಂತಾನವಾಗಲಿಲ್ಲ. ಆದ್ದರಿಂದ ಬಹಳ ದಿನಗಳು ಚಿಂತಿಸಿ ಭಗವಂತನನ್ನು ಕುರಿತು ಪ್ರಾರ್ಥಿಸಿದನು. ತರುವಾಯ ಒಬ್ಬ ಮಗನು ಹುಟ್ಟಿದನು. ಅವನಿಗೆ “ಮಾಧವ” ಎಂದು ಹೆಸರಿಟ್ಟು ಮುದ್ದಿನಿಂದ ಬೆಳೆಸಿದನು.

ಮಾಧವನು ಬೆಳೆದು ದೊಡ್ಡವನಾದನು. ತಂದೆ ಮಾಧವನಿಗೆ ಪಾಂಡ್ಯ ದೇಶದ ರಾಜಕುಮಾರಿಯಾದ “ಸುಶೀಲ”ಳನ್ನು ಮಾಡುವೆ ಮಾಡಿದನು. ಸುಶೀಲೆಯು ಪರಮ ಸಾಧ್ವಿ. ಅತ್ಯಂತ ಬುದ್ದಿವಂತಳು. ವೇದ ಧರ್ಮಗಳನ್ನು ಚೆನ್ನಾಗಿ ಬಲ್ಲವಳು. ಹೀಗಿರಲು ಒಂದು ದಿನ ಮಾಧವನು ಸತಿಯನ್ನು ನೋಡಿ ಹೀಗೆಂದನು: “ಪ್ರಿಯೆ! ನನಗೆ ನಿನಲ್ಲಿ ಭ್ರಾಂತಿ ಉಂಟಾಗಿದೆ. ತಕ್ಷಣವೇ ನನ್ನ ಇಷ್ಟವನ್ನು ಪೂರ್ಣಗೊಳಿಸು” ಎಂದು ಕೇಳಿದನು.

ಆ ಮಾತುಗಳನ್ನು ಕೇಳಿ ಸುಶೀಲೆಯು, “ನಾಥ! ಇದು ಧರ್ಮವಲ್ಲ. ಹಗಲಿನಲ್ಲಿ ಪಶು ಪಕ್ಷಿಗಳು ಸಂಗಮಿಸಬಹುದು ಆದರೆ ಮಾನವರು ಸಂಗಮಿಸಬಾರದು. ಅದು ಮಹಾ ಪಾಪವೆಂದು” ಅನೇಕ ವಿಧದಲ್ಲಿ ಪ್ರಾಥಿಸಿದಳು ಮಾಧವನು ಹೆಂಡತಿಯ ಮಾತಿಗೆ ಎದುರು ಹೇಳಲಾಗದೆ ಹಾಗೆಯೇ ಅರಣ್ಯಮಾರ್ಗವಾಗಿ ಹೋದನು. ಅಲ್ಲಿ ಒಂದು ಮರದಡಿ ಅತ್ಯಂತ ರೂಪಾವತಿಯಾದ ಯುವತಿಯನ್ನು ನೋಡಿದನು. ಮಾಧವನಿಗೆ ಆಕೆಯ ಮೇಲೆ ಪ್ರೇಮಉಂಟಾಗಿ ಹತ್ತಿರ ಹೋಗಿ, ಹೀಗೆಂದನು: “ತರುಣೀಮಣಿ! ನೀನ್ಯಾರು? ನಿನ್ನ ಹೆಸರೇನು?” ಎಂದನು.

ಮಾಧವನ ಮಾತು ಕೇಳಿ ಆ ಸುಂದರಾಂಗಿ, “ಅಯ್ಯಾ! ನನ್ನ ಹೆಸರು ಕುಂತಲೆ. ನನ್ನದು ವಿಶಾಲನಗರ. ನನ್ನ ತಾಯಿ ಚಂದ್ರರೇಖಾ. ನಾನು ವೇಶ್ಯೆ. ಕಾರಣಾಂತರದಿಂದ ಇಲ್ಲಿಗೆ ಬಂದೆನು” ಎಂದಳು.

ಅದನ್ನು ಕೇಳಿ ಮಾಧವನು, “ಕಲ್ಯಾಣಿ! ನಿನ್ನನ್ನು ನೋಡದಾಗಿನಿಂದ ನನಗೆ ನಿನ್ನಲ್ಲಿ ಮೋಹಉಂಟಾಗಿದೆ. ನಾನು ನಿನ್ನನ್ನು ಹೇಣತಿಯಾಗಿ ಮಾಡಿಕೊಳ್ಳುವೆನು” ಎಂದನು. ಕುಂತಳೆಯು ಆ ಮಾತುಗಳನ್ನು ಕೇಳಿ, “ಅಯ್ಯಾ! ನಾನೊಬ್ಬ ನೀಚ ಕುಲದವಳು. ನೀನು ಒಳ್ಳೆಯ ಕುಲದಲ್ಲಿ ಹುಟ್ಟಿದವನಂತೆ ಕಾಣುತ್ತಿರುವೆ. ನನ್ನೊಡನೆ ಸ್ನೇಹವು ಮಹಾ ಪಾಪ. ನಿನ್ನ ದಾರಿ ಹಿಡಿದು ಹೋಗು” ಎಂದಳು.

source: kidsgen.com

ಕುಂತಲೆಯ ಮಾತುಗಳನ್ನು ಕೇಳಿ ಮಾಧವನು, “ತರುಣೀಮಣಿ! ನಿನಷ್ಟು ಹೇಳಿದರು ನನಗೆ ನಿನ್ನ ಮೇಲಿನ ಪ್ರೇಮ ಹೋಗದು. ಪರಾಶರನು ಮತ್ಸ್ಯಗಂಧಿನಿಯನ್ನು ವರಿಸಿದ್ದರಿಂದ ಆತನಿಗೆ ಪಾಪ ಬಂದಿತೇ? ನನ್ನ ಮಾತು ಕೇಳು. ಅನವಶ್ಯಕವಾದ ವೇದಾಂತಗಳನ್ನು ಹೇಳಿ ನನ್ನನ್ನು ಭಾದಿಸಬೇಡ.” ಎಂದು ಅನೇಕ ವಿಧವಾಗಿ ಪ್ರಾಥಿಸಿ ಆಕೆಯೊಡನೆ ಸ್ನೇಹ ಮಾಡಿಕೊಂಡು ಆ ಅರನಿದಲ್ಲಿಯೇ ನಿವಾಸಿಸುತ್ತಾ ಮೃಗಗಳನ್ನು ಸಂಹರಿಸುತ್ತಾ ಹಣ್ಣು ಹಂಪಲಗಳೂ, ಕಂದಮೂಲಾಧಿಗಳನ್ನು ತಿನ್ನುತ್ತಾ ಅವರಿಬ್ಬರೂ ಕೆಲವು ಕಾಲ ಕಳೆದರು.

ಇಷ್ಟರಲ್ಲಿ ಕುಂತಲೆಗೆ ಅವಸಾನ ಕಾಲ ಸಮೀಪಿಸಿ ಮರಣಿಸಿದಳು. ಮಾಧವನು, ಆಕೆಯ ಮೇಲಿನ ವ್ಯಾಮೋಹದಿಂದ ಹುಚ್ಚನಾಗಿ ತಿರುತ್ತಿದ್ದನು. ಒಂದು ಬರಿ ಕೆಲವು ಮಂದಿ ಭಕ್ತರು ವೆಂಕಟಾಚಲಕ್ಕೆ ಹೋಗುತ್ತಿದ್ದರು. ಮಾಧವನು ಹುಚ್ಚನಂತೆ ಆ ಗುಂಪಿನಲ್ಲಿ ಸೇರಿ ನಡೆಯುತ್ತಾ ಅವರು ತಿಂದು ಬಿಸಾಡಿದ ಎಂಜಲವನ್ನು ತಿನ್ನುತ್ತಾ ಅವರ ಹಿಂದೆ ತಿರುಪತಿ ಸೇರಿದನು.

ಆ ಯಾತ್ರಿಗಳು ಕಪಿಲ ತೀರ್ಥಕ್ಕೆ ಹೋದರು. ಮಾಧವನೂ ಕೂಡ ಅವರ ಹಿಂದೆ ಹೋದನು. ಅವರು ತೀರ್ಥದಲ್ಲಿ ಮುಳುಗಿ ಪಿಂಡ ಪ್ರಧಾನ ಮಾಡಿದರು. ಮಾಧವನೂ ಸಹ ಅವರ ಹಾಗೆ ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಪಿತೃ ದೇವತೆಗಳಿಗೆ ಪಿಂಡವಿಟ್ಟನು. ಆ ಪಿಂಡಗಳ ಫಲದಿಂದ ಪಿತೃ ದೇವತೆಗಳು ಮುಕ್ತಿ ಪಡೆದರು. ಮಾಧವನು ಆ ಯಾತ್ರಿಕರೊಡನೆ ಬೆಟ್ಟ ಹತ್ತಿ ಶ್ರೀ ವೆಂಕಟೇಶ್ವರನನ್ನು ದರ್ಶಿಸಿದನು. ದೇವರು ಮಾಧವನಿಗೆ ದರ್ಶನ ಕೊಟ್ಟು ನೀನು ನನ್ನ ಭಕ್ತರಲ್ಲಿ ಮುಖ್ಯನು ಎಂದು ಆತನಿಗೆ ಪಾಪ ವಿಮೋಚನೆಯನ್ನು ಮಾಡಿದನು.

source: wikimedia

ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಈ ಜನನ ಮರಣದ ಚಕ್ರದಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಇದೆ. ಇದಲ್ಲದೆ, ಯಾರು ತಮ್ಮ ಪಿತೃಗಳಿಗೆ ಪಿಂಡ ಅರ್ಪಣೆ ಮಾಡಿಲ್ಲವೋ ಅಂಥವರು ಈ ದಿನ ಪಿಂಡ ಪ್ರದಾನ ಮಾಡ ಬಹುದು ಹಾಗು ಈ ಕಾರ್ಯನ್ನು ಮಾಡದೆ ಇದ್ದ ಪಾಪವನ್ನೂ ತೊಳೆದುಕೊಳ್ಳ ಬಹುದು.