ನಾಗರ ಪಂಚಮಿ ಹಬ್ಬದ ವಿಶಿಷ್ಟತೆ ಮತ್ತು ಆಚರಣೆಯ ಬಗ್ಗೆ ತಿಳಿದುಕೊಳ್ಳಿ..!

0
877

ನಗರ ಪಂಚಮಿ:
ಈ ಹಬ್ಬವನ್ನು ಬೆನ್ನು ಹಬ್ಬ ಎಂದು ಕರೆಯುತ್ತಾರೆ. ಅಣ್ಣ ತಮ್ಮಂದಿರಿಗೆ ಬೆನ್ನು ತೊಳೆದು ಬಾಗಿನ ಕೊಡುವುದು ಇದರ ಮುಖ್ಯ ಉದ್ದೇಶ. ಬೆನ್ನು ಎಂದರೆ ಒಡಹುಟ್ಟಿದವರು ಎಂದರ್ಥ. ಒಡಹುಟ್ಟಿದವರು ಚೆನ್ನಾಗಿರಲೀ ಎಂದು ಅವರ ಶ್ರೇಯಸ್ಸಿಗೋಸ್ಕರ ಮಾಡುವುದು.

source: religious.jagranjunction.com

ನಗರ ಪಂಚಮಿಯಂದು ಮೆನೆಯಲ್ಲಿ ಎಲ್ಲರೂ ತೆಲೆಗೆ ಒಂದು ಬಟ್ಟು ಹಾಲನ್ನು ಇಟ್ಟುಕೊಂಡು ತೆಲೆಗೆ ಸ್ನಾನ ಮಾಡಿ ದೇವರ ತೀರ್ಥ ತೆಗೆದುಕೊಂಡು ನಂತರ ಕಾಫಿ ಕುಡಿಯುವ ವಾಡಿಕೆ ಇದೆ.

ನಾಗರಪಂಚಮಿ ಹೊಂದಿನ ದಿನ ಸಂಜೆ ಬಾಗಿಲ ಎರಡು ಪಕ್ಕಗಳಲ್ಲಿ ಬಾಗಿಲು ಎದುರಿನಲ್ಲಿ ಹಾವನ್ನು ಬರೆಯಬೇಕು.

source: kshamabade.com

ನಾಗರ ಚೌತಿ

ನಗರ ಚೌತಿಯಂದು ತೆಲೆಗೆ ಒಂದು ಬಟ್ಟು ಹಾಲಿಟ್ಟುಕೊಂಡು ತೆಲೆಗೆ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲಿ ನಾಗಪ್ಪನಿಗೆ ತನಿ ಎರೆದು ಪೂಜೆ ಮಾಡುತ್ತಾರೆ. ರಾತ್ರಿ ಊಟ ಮಾಡುವುದಿಲ್ಲ ಕೆಲವರು ಹುತ್ತಕ್ಕೆ ಹೋಗಿ ತನಿ ಎರೆದು ಬರುತ್ತಾರೆ. ಎಲ್ಲ ಜನಾಂಗದವರೂ ಪರಿಶುದ್ಧರಾಗಿ ನಗರ ಚೌತಿ ತನಿ ಎರೆದು ಪೂಜಿಸುತ್ತಾರೆ. ಹುತ್ತಕ್ಕೆ ಹೋಗಲು ಅನುಕೂಲವಿದ್ದಲ್ಲಿ ಮನೆಯಲ್ಲಿ ನಗರ ಫಣಿಗೆ ತನಿ ಎರೆದು ಪೂಜಿಸಿ ಹಣ್ಣು ಕಾಯಿ ನೈವೇದ್ಯೆ ಮಾಡುತ್ತಾರೆ.

ನಾಗರ ಪಂಚಮಿ ದಿನ ವ್ರತ ಪೂಜೆಯಾದ ನಂತರ ಹಾವಿಗೂ ಪೂಜೆಮಾಡಿ ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಹಾಲನ್ನು ಹಾಕಿ ಬರೆದ ಹಾವಿನ ಮುಂದೆ ಇಡುವ ವಾಡಿಕೆ ಇದೆ ದೇವರ ಮುಂದೆ ಗೋಮಯದಿಂದ ಸಾರಿಸಿ ರಂಗವಲ್ಲಿ ಇಕ್ಕಿ ಹಾವಿಕ್ಕಬೇಕು.

source: kemmannu.com

ಪೂಜೆಗೆ ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಪತ್ರೆ, ಪುಷ್ಪ ದೂರ್ವೆ, ಕೇದಿಗೆ ಹೂವು ಹುತ್ತದ ಮಣ್ಣು ಹುಲಿಕಡ್ಡಿ ಎಳೆ ಹುಣಸೆಕಾಯಿ, ಹುರಿದ ಅರಳು ಕಡಲೆ ತೊಟ್ಟಿಲು, ಒಂದು ಬಟ್ಟಲು ತೊಳೆದ ಅಕ್ಕಿ ಹಿಟ್ಟು ಇವುಗಳನ್ನು ಪೂಜೆಗೆ ಇಟ್ಟುಕೊಳ್ಳಬೇಕು. ಅಭಿಷೇಕಕ್ಕೆ ಪಂಚಾಮೃತ ಗೆಜ್ಜೆವಸ್ತ್ರ ಕೋಲುಬತ್ತಿ ಹೂಬತ್ತಿ, ಎಳೆನೀರು, ನೀರು ಅರ್ಘ್ಯ ಪಾತ್ರೆ ಪಂಚಪಾತ್ರೆ ಉದ್ಧರಣೆ ಹಲಗಾರತಿ ಒಂದು ಹಿತ್ತಾಳೆ ತಟ್ಟೆಯಲ್ಲಿ ಹಾವನ್ನು ಆರತಿ ಬರೆದು ಇಟ್ಟುಕೊಳ್ಳಬೇಕು. ತುಪ್ಪದ ದೀಪ ಎಣ್ಣೆ ದೀಪ 2+2 ಆರತಿ ಸೊಡರು ಕಾದಲಾರತಿ ತಟ್ಟೆ ಇವಿಷ್ಟನ್ನು ಅಣಿಮಾಡಿಕೊಳ್ಳಬೇಕು.

ಒಂದು ಮಣೆಯ ಮೇಲೆ ಹುತ್ತದ ಮಣ್ಣಿನಿಂದ ಮಣ್ಣನ್ನು ಕಲಿಸಿ ಚೌಕಾಕಾರಕ್ಕೆ ಕತ್ತೆ ಕಟ್ಟಿ ಎರಡು ಪಕ್ಕಗಳಿಗೆ ಮಣ್ಣಿನಿಂದ ಗೋಪುರ ಮಾಡಿ ಅದಕ್ಕೆ ಹುಲಿಕಡ್ಡಿ ಸಿಕ್ಕಿಸಿ ಇಡಬೇಕು. (ಅರಿಶಿನದ ಗೌರಿ ತರಹ)

source: wordpress.com

ಕೆಲವರ ಮನೆಯಲ್ಲಿ ಮಣ್ಣಿನ ನಾಗಪ್ಪನನ್ನು ಮಾಡಿ ಮಣೆಯ ಮೇಲೆಟ್ಟು ಪೂಜಿಸುವರು. ಈ ಕ್ರಮ ಇಲ್ಲದಿದ್ದವರು ಬೆಳ್ಳಿ ನಾಗಪ್ಪನ್ನನ್ನು ಚೌಕಾಕಾರವಾಗಿ ಕಟ್ಟಿದ ಕಟ್ಟೆಯೊಳಗೆ ಇಡಬೇಕು. ಮುಂದೆ ಪೂಜೆಗೆ ಕುಳಿತುಕೊಳ್ಳಲು ಮಣಿ ಹಾಕಬೇಕು. ವ್ರತವಿದ್ದರೆ ಪುರೋಹಿತರು ಅಥವಾ ಮನೆಯ ಗಂಡಸರು ವ್ರತ ಮಾಡುತ್ತಾರೆ. ವ್ರತವಿಲ್ಲದವರು ಹಿಂದೆ ಹೇಳಿದ ವಸ್ತುಗಳಿಂದ ಪೂಜಿಸಬೇಕು.

source: prajavani.net

ಪೂಜೆ ಆದನಂತರ ಅಣ್ಣ ತಮ್ಮಂದಿರಿಗೆ ದೇವರ ಪೂಜೆ ತೀರ್ಥವನ್ನು ಕೇದಿಗೆ ಹೂವಿನಲ್ಲಿ ಹಾಕಿ ಬಲ ಬುಜದ ಹಿಂದೆ ಬಿಡಬೇಕು. ತನಿ ಎರೆದು ಬಾಗಿನ ಕೋಡಬೇಕು. ಚಿಗುಳಿ ತಂಬಿಟ್ಟು ನೆನೆಸಿದ ಕಡಲೆಕಾಳು ನೈವೇದ್ಯಕ್ಕೆ ಇಟ್ಟುಕೊಳ್ಳಬೇಕು. ನೈವೇದ್ಯಕ್ಕೆ ರವೆಪಾಯಸ ಹೂರಣದ ಕಡಬು ಉದ್ದಿನ ಕಡಬು ಮಾಡಿಟ್ಟುಕೊಳ್ಳಬೇಕು. ಒಂದು ತಟ್ಟೆಯಲ್ಲಿ ಯುಎಲ್ ಅಡಿಕೆ ಬಾಳೆಹಣ್ಣು ಚಿಗುಳಿ ತಂಬಿಟ್ಟು ನೆನೆದ ಕಡಲೆ ದಕ್ಷಿಣೆ ಇಟ್ಟು ಕೋಡಬೇಕು. ಪುರೋಹಿತರನ್ನು ಕರೆದರೆ ಉಪಾಯನದ ದಾನ ಅವರಿಗೆ ಕೋಡಬೇಕು. ಇಲ್ಲದಿದ್ದರೆ ಅಣ್ಣ ತಮ್ಮಂದಿರಿಗೆ ಕೊಡಬಹುದು. ಅಂದು ಮನೆಯಲ್ಲಿ ಹಬ್ಬದ ಅಡಿಗೆ ಮಾಡಬೇಕು.