ತಮಿಳರಿಗೆ ಸೆಡ್ಡು ಹೊಡೆದು ಬನ್ನಿ ಗೆಲ್ಲಿಸೋಣ ರಾಮಾಚಾರಿಯ ಚಿತ್ರವನ್ನ

0
1530

ತನ್ನ ಶತ್ರುಗಳನ್ನು ಸಹ ಹಿತೈಷಿಗಳಂತೆ ಕಾಣುವ ವೆಕ್ತಿತ್ವ ನಮ್ಮ ‘ಹೃದಯವಂತ’ನದು. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ನಮ್ಮ ಕೋಟಿಗೊಬ್ಬ. ಭಾರತದಲ್ಲಿಯೇ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿದ್ದ ಏಕೈಕ ನಟ ನಮ್ಮ ವಿಷ್ಣು ಅಪ್ಪಾಜಿ ಎಂದರೆ ತಪ್ಪಾಗಲಾರದು. ಅವರು ಕಾಲವಾಗಿ ಬಹಳ ವರ್ಷ ಕಳೆದರು ನಾವು ಇಂದು ಅವರನ್ನು ನೆನೆಯಲು ಕಾರಣ ಅವರ ಬಹು ನಿರೀಕ್ಷಿತ 201 ನೇ ಚಿತ್ರ ಇದೇ ಶುಕ್ರವಾರ ತಮಿಳುನಾಡು ಹೊರತುಪಡಿಸಿ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳುತ್ತಿದ್ದೆ.

ಅದೇಕೆ ತಮಿಳುನಾಡಿನಲ್ಲಿ ಬಿಡುಗಡೆಗೊಳ್ಳುತ್ತಿಲ್ಲ ಎನ್ನುವ ಕಾರಣ ನಿಮಗೂ ತಿಳಿಯದ ವಿಚಾರವೇನಲ್ಲ. ವಿಷ್ಣುವರ್ಧನ್ ಅವರು ಕನ್ನಡ ನಟ ಎನ್ನುವ ಒಂದೇ ಒಂದು ಕಾರಣಕ್ಕೆ ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ. ಎಷ್ಟೇ ಆಗಲಿ ದಿನ ಬೆಳಗಾದರೆ ಕ್ಯಾತೆ ತಗೆಯುವುದು ತಾನೇ ಅವರ ಕೆಲಸ!! ನಿಮಗೆ ಗೊತ್ತಿದೆಯೋ ಇಲ್ಲವೋ, ಇತ್ತೀಚೆಗೆ ಕಾವೇರಿ ಕದನದಲ್ಲಿ ರಜಿನಿಕಾಂತ್ ತಮಿಳುನಾಡಿನ ಪರ ಕಹಳೆ ಮೊಳಗಿಸಿದ್ದರು, ಅಂತವರ ಚಿತ್ರ ಕರ್ನಾಟಕದಲ್ಲಿ ಕೋಟಿ ಕೋಟಿ ಬಾಚುತ್ತದ್ದೆ.

ಬರೋಬ್ಬರಿ 45 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಗರಹಾವು ಸಿನಿಮಾದ ನಿರ್ಮಾಪಕರಿಗೆ ಸರಿ ಸುಮಾರು 15 ಕೋಟಿ ನಷ್ಟವುಂಟಾಗುತ್ತಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಿ, ಬಿಟ್ಟುಬಿಡಿ ಪರಬಾಷೆಯ ಶೋಕಿಯನ್ನ.ಬರೋಬ್ಬರಿ 45 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಗರಹಾವು ಸಿನಿಮಾದ ನಿರ್ಮಾಪಕರಿಗೆ ಸರಿ ಸುಮಾರು 15 ಕೋಟಿ ನಷ್ಟವುಂಟಾಗುತ್ತಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಿ, ಬಿಟ್ಟುಬಿಡಿ ಪರಬಾಷೆಯ ಶೋಕಿಯನ್ನ.

ನಾವೀಗ ಮಾಡಬೇಕಾಗಿರುವುದೊಂದೇ, ಈ ಸಿನೆಮಾವನ್ನು ಗೆಲ್ಲಿಸಿ ತಮಿಳಿಗರಿಗೆ ಕನ್ನಡಿಗರ ಕನ್ನಡಾಭಿಮಾನ ಎಷ್ಟು ಎಂಬುದನ್ನು ಸಾರಿ ಹೇಳೋಣ.

–ಗಿರೀಶ್ ಗೌಡ L