ಉಗುರು ಕಚ್ಚೋದ್ರಿಂದ ಯಾವ ಖಾಯಿಲೆ ಬರುತ್ತೆ..? ಉಗುರು ಕಚ್ಚು ವವರ ವ್ಯಕ್ತಿತ್ವ ಹೇಗಿರುತ್ತೆ ನೋಡಿ…

0
1759

ಉಗುರು ಕಚ್ಚು ವ ಅಭ್ಯಾಸ ನಿಮಗಿದಯಾ ಹಾಗಾದ್ರೆ ಇದ್ದಕೆ ಕಾರಣವೇನು ..? ಎಂಬ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿರುತ್ತೆ ಇದ್ದಕೆ ಸಾಮಾನ್ಯವಾಗಿ ಮಾನಸಿಕ ಒತ್ತಡವೆ ಕಾರಣ ಎಂದು ಎಲ್ಲರು ಹೇಳುತ್ತಾರೆ ಆದರೆ ಅದು ಸರಿಯಾದ ಕಾರಣವಲ್ಲ. ವಿಷಯದ ಬಗ್ಗೆ ಸಂಶೋಧನೆ ಒಂದು ಹೊರ ಬಿದ್ದಿದೆ ಅದರಲ್ಲಿ ಬರಿ ಉಗುರು ಕಚ್ಚುವ ಬಗ್ಗೆ ಅಷ್ಟೇ ಅಲ್ಲ ಸ್ವಾಭಾವಿಕವಾದ ಹಲವಾರು ಗುಣಗಳಿಗೆ ಕಾರಣವೇನು ಎಂಬುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ನೀವು ಉಗುರು ಕಚ್ಚುತ್ತಿರ ಇಲ್ಲ ನಿಮ್ಮ ಅಕ್ಕಪಕ್ಕದಲ್ಲಿ ಯಾರಾದ್ರೂ ಉಗುರು ಕಚ್ಚುವರು ಇದ್ದರೆ. ಅಂತಹ ಅಭ್ಯಾಸಕ್ಕೆ ಆಘಾತಕಾರಿ ವಿಷಯಗಳು ಸಂಶೋಧನೆಯಿಂದ ಹೊರ ಬಂದಿವೆ. ಉಗುರು ಕಚ್ಚುವ ಅಭ್ಯಾಸ ಒಂದು ಹಂತಕ್ಕೆ ಎಲ್ಲರಲು ಇರುತ್ತೆ ಇದನ್ನೆ ಮುಂದುವರಿಸಿಕೊಂಡು ಬಂದರೆ ಮುಂದೆ ಒಂದು ದಿನ ನಿಮ್ಮ ಆರೋಗ್ಯ ಖಾಯಿಲೆಯಿಂದ ಬಳಲುವಲ್ಲಿ ಯಾವುದೇ ಸಂಶಯವಿಲ್ಲ.

Also read: ಬಿಜೆಪಿ ರೈತ ವಿರೋಧಿಯೇ? ದೆಹಲಿಯ ರೈತರ ಮೇಲಿನ ಪೋಲಿಸ್ ದೌರ್ಜನ್ಯ ಯಡಿಯೂರಪ್ಪ ಸರ್ಕಾರದ ಶೂಟ್-ಔಟ್-ಅನ್ನು ಜ್ಞಾಪಿಸಿದೆ!!

ಏನು ಈ ಸಂಶೋಧನೆ:

ಈ ಸಂಶೋಧನೆಯ ಪ್ರಕಾರ ಮೂವರಲ್ಲಿ ಒಬ್ಬರು ಉಗುರು ಕಚ್ಚುವರು ಇದ್ದಾರಂತೆ ಇವರೆಲ್ಲ ಯಾಕೆ ಉಗುರು ಕಚ್ಚುವುದು ಟೆನ್ಷನ್ ಕಾರಣ..? ನಿಜಕ್ಕೂ ಉಗುರು ಕಚ್ಚೋಕೆ ಟೆನ್ಷನ್ ಕಾರಣ ಎಂಬುದು ಮೇಲ್ನೋಟಕ್ಕೆ ಹಾಗೆ ಕಂಡ್ರು ಅದ್ದಕೆ ಅದರದೇ ಆದ ಕಾರಣಗಳಿವೆ ಒಂದು ಅಧ್ಯಯನದ ಪ್ರಕಾರ ಟೆನ್ಷನ್ ಇರುವರು ಎಲ್ಲರು ಉಗುರು ಕಚ್ಚುವರೆ ಗೊತ್ತಿಲ್ಲ. ಆದರೆ ಉಗುರು ಕಚ್ಚುವರೆಲ್ಲ ತಾವು ಎಲ್ಲದರಲ್ಲಿ ಪರ್ಫೆಕ್ಟ್ ಇರಬೇಕು ಎಂಬ ಹುಚ್ಚು ಇರುತ್ತೆ ಅಂತೆ. ಆ ಹುಚ್ಚುನಲ್ಲೆ ಉಗುರು ಕಡಿಯೋ ರೂಡಿಯನ್ನು ಹಚ್ಚಿಕೊಳ್ಳುತ್ತಾರೆ.

Also read: ಗೂಗಲ್-ನ ಮುಖ್ಯಸ್ಥ ಸುಂದರ್ ಪಿಚೈ ರವರ ಬಗ್ಗೆ ಅವರ ಐ.ಐ.ಟಿ. ಪ್ರೊಫೆಸರ್ ಏನು ಹೇಳಿದ್ದಾರೆ ಅಂತ ಕೇಳಿ, ನಿಮಗೂ ಜೀವನಕ್ಕೆ ಪ್ರೇರಣೆಯಾಗಬಹುದು!!

ಸಂಶೋಧನೆ ಪ್ರಕಾರ ಉಗುರು ಕಚ್ಚುವರ ವ್ಯಕ್ತಿತ್ವ ಹೇಗಿರುತ್ತೆ..?

ಪ್ರತಿದಿನವೂ ಉಗುರು ಕಚ್ಚುವರ ವ್ಯಕ್ತಿತ್ವ ಹೇಗಿರುತ್ತೆ ಅಂದ್ರೆ ಅದು ಒಂದೇ ಹುಚ್ಚು ಅಲ್ಲದೆ ಮೈಪರಚಿಕೊಳ್ಳುವುದು, ಕೂದಲು ಎಳೆದುಕೊಳ್ಳುವುದು ಹೀಗೆ ಕೆಲಸಕ್ಕೆ ಬಾರದ ವರ್ತನೆಯನ್ನು ಮಾಡುತ್ತಾರೆ. ಇಂತಹ ಅಭ್ಯಾಸವಿರುವರು ಈ ರೂಡಿಯಿಂದ ಹೊರಬರಲು ಪ್ರಯತ್ನ ಮಾಡಿದರು ಸಾಧ್ಯವಾಗುವುದಿಲ್ಲ ಕಚ್ಚಿ ಉಗುರು ಮಡ್ದಾಗಿ ನೋವುವಾದ್ದರು ಈ ಚಾಳಿಯನ್ನು ಮಾತ್ರ ಬಿಡುವುದಿಲ್ಲ. ಸಂಶೋಧನೆಯ ಪ್ರಕಾರ ತಾವೂ ಏನೋಮಾಡಲು ಹೋಗಿ ಅದೇ ದೊಡ್ಡ ವಿಷಯ ಎಂದು ಉಗುರು ಕಚ್ಚುತ್ತಾರೆ ಸ್ವಲ್ಪ ಹೊತ್ತಿನ ನಂತರ ತಮ್ಮ ತಪ್ಪಿನ ಅರಿವಾಗಿ ಮತ್ತೆ ಕಿರಿಕಿರಿಗೆ ಒಳಗಾಗುತ್ತಾರೆ. ಮತ್ತು ಮನಸ್ಸಿನಲ್ಲಿರುವ ಬೇಜಾರಿನಿಂದ ಮತ್ತು ಯಾವುದೇ ಚಿಕ್ಕ ವಿಚಾರಕ್ಕೆ ಒಳಗಾಗಿ ಪದೇ ಪದೇ ಉಗುರು ಕಚ್ಚಲು ಸಂದೇಶ ನಿಡುತ್ತೆ.

ಈ ಬಗ್ಗೆ ಮಾಡಿದ ಸಂಶೋಧನೆ ಹೇಳುವ ಪ್ರಕಾರ:

Also read: ಮಿನಿಸ್ಟ್ರಿ ಆಫ್ ಡಿಫೆನ್ಸ್ ಇಂಡಿಯನ್ ಕೋಸ್ಟ್ ಗಾರ್ಡ್ ನಾವಿಕ ಹುದ್ದೆಗೆ ನೇಮಕಾತಿ ಪ್ರಕಟಣೆ..!

ಉಗುರು ಕಚ್ಚುವ ಬಗ್ಗೆ ಅಮೇರಿಕಾದಲ್ಲಿ ಅಧ್ಯಾಯನ ನಡೆಸಿದ್ದು 24 ಮಂದಿ ಉಗುರು ಕಚ್ಚುವರು, ಮತ್ತು ಮೈ ಪರಚುವರನ್ನು, ಕೂದಲು ಎಳೆಯಿವ 48 ಮಂದಿಯನ್ನು ಇಟ್ಟುಕೊಂಡು ಸಂಶೋಧನೆ ನಡೆಸಲಾಯಿತು ಇದರಲ್ಲಿ ನಾಲ್ಕು ತರಹದ ದೃಶ್ಯವನ್ನು ತೋರಿಸಿ ಅವ್ರು ಮಾಡುವ ವರ್ತನೆಯನ್ನು ಕಲೆಹಾಕಲಾಯಿತು. ಅಂತಹ ದೃಶ್ಯಗಳು ಒತ್ತಡ ಹೆರುವ ನೆಲಕ್ಕೆ ಬಿಳ್ಳುವ ವಿಮಾನದ ದೃಶ್ಯ, ನಿರಾಳ ಸಮುದ್ರದ, ಕಷ್ಟದ ವಿಚಾರವನ್ನು ಸುಲಭ ಅಂತ ಅದ್ದನ್ನು ಬಿಡಿಸಲಾಯಿತ್ತು, ಮತ್ತು ಬೋರ್ ಆಗುವ ಹಾಗೆ ಅವರೋಬ್ಬರನ್ನೇ ಕೋಣೆಯಲ್ಲಿ ಇರಿಸಲಾಯಿತ್ತು, ಈ ಎಲ್ಲ ಪರೀಕ್ಷೆಯಲ್ಲಿ ಅವರ ವರ್ತನೆ ಮತ್ತು ಉಗುರು ಕಚ್ಚುವ ಚಾಳಿ ನಡಿತ್ತಾನೆ ಇತ್ತು.

ಸಂಶೋಧನೆ ಪ್ರಕಾರ ಉಗುರು ಕಚ್ಚುವುದು ಆರೋಗ್ಯಕೆ ಹೇಗೆ ಮಾರಕವಾಗಿದೆ..?

    • ಈ ಚಾಳಿ ಹೆಚ್ಚಾದರೆ ಒಬಿಸಿವ್ ಕಂಪಲ್ಸಿವ್ ಡಿಸೈರ್ ಎಂಬ ಮಾನಸಿಕ ಖಾಯಿಲೆ ಬರುವ ಸಾಧ್ಯತೆಯಿದೆ ಅಂತೆ
    • ಸತತ ಉಗುರು ಕಡಿಯೋದ್ರಿಂದ ಉಗುರು ಮತ್ತು ಬೆರಳಿನ ಸುತ್ತ ಕೆಪ್ಪಾಗಿ ಹುಣ್ಣಾಗುತ್ತೆ
    • ಉಗುರಿನ ಸುತ್ತ ಹುಣ್ಣಿನಿಂದ ಇನ್ಫೆಕ್ಷನ್ ಆಗಿ ಕೈಯಲ್ಲಿರುವ ವೈರಸ್ ಬಾಯಿಯ ಮೂಲಕ ಹೊಟ್ಟೆಯಲ್ಲಿ ಹೋಗಿ ಬೇರೆಯದೇ ರೋಗಗಳು ಬರಬಹುದು
    • ಉಗುರು ಕಚ್ಚುವುದರಿಂದ ಹಲ್ಲಿನ ಏನಾಮೆಲ್ ಕೂಡ ಹಾಳಾಗುತ್ತೆ, ಇದರಿಂದ ಉಗುರಿನ ಆಕೃತಿ ಕೂಡ ಹಾಳಾಗುತ್ತೆ
    • ಅಷ್ಟೇ ಅಲ್ಲದೆ ಉಗುರು ಕಚ್ಚುವರನ್ನು ಕಂಡರೆ ಯಾರಿಗೂ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿರುವುದಿಲ್ಲ