ಆರ್ ಸಿ ಬಿ ಮ್ಯಾಚ್ ವೇಳೆ ಈ ಹಿಂದೆ ವಿವಾದಕ್ಕೀಡಾಗಿದ್ದ ನಲ್ಪಾಡ್ ಮತ್ತೊಮ್ಮೆ ಎಂಥ ಪುಂಡಾಟಿಗೆ ಮಾಡಿದ್ದಾನೆ ಗೊತ್ತಾ?

0
387

ಉದ್ಯಮಿಯೊಬ್ಬರ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಸ್ ಅವರ ಪುತ್ರ ಮೊಹಮದ್ ನಲಪಾಡ್’ ಜೈಲುವಾಸ ಪಡೆದು ಬುದ್ದಿ ಬಂದಿದೆ ಅಂದು ಕೊಂಡಿದ ಜನರಿಗೆ ಮತ್ತೆ ನಲಪಾಡ್ ತಮ್ಮ ಕರಾಮತ್ತು ತೋರಿಸಿದ್ದಾರೆ ಎನ್ನುವ ಸುದ್ದಿ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಆರ್‌ಸಿಬಿ ಮ್ಯಾಚ್ ವೇಳೆ ಚೌಕಿದಾರ್ ಚೋರ್ ಎಂದು ಘೋಷಣೆ ಕೂಗಿದ್ದಾರೆ.

ಹೌದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪದ್ಯದ ವೇಳೆ ತಮ್ಮ ಬೆಂಬಲಗರ ಜೊತೆ ಸ್ಟೇಡಿಯಂನಲ್ಲಿ ಕೂಗಾಡಿರುವ ಶಾಸಕರ ಪುತ್ರನ ಪುಂಡಾಟದ ವಿಡಿಯೋ ಈಗ ವೈರಲ್​ ಆಗಿದೆ. ಗ್ಯಾಲರಿಯಲ್ಲಿ ಕುಳಿತಿರುವ ಅವರು, ತಮ್ಮ ಬೆಂಬಲಿಗರೊಂದಿಗೆ ‘ಚೌಕೀದಾರ್ ಚೋರ್​ ಹೈ’ ಎಂದು ಘೋಷಣೆ ಕೂಗಿದ್ದಾರೆ. ಇವರು ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ನಲಪಾಡ್​ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ನಿನ್ನೆ ನಡೆದ ಆರ್​ಸಿಬಿ ಮ್ಯಾಚ್​ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರತ್ಯಕ್ಷರಾಗಿರುವ ಅವರು ಮಾಡಿರುವ ಕೆಲಸ ಈಗ ಮತ್ತೊಮ್ಮೆ ವೈರಲ್​ ಆಗಿದ್ದು, ಎಲ್ಲರ ಗಮನಸೆಳೆದಿದೆ.

ಸೆರೆವಾಸ ಅನುಭವಿಸಿ ಹೊರ ಬಂದಿರುವ ನಲಪಾಡ್​ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಅಬ್ಬರಿಸಿದ್ದಾರೆ. ಅದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ನಡೆದ ಐಪಿಎಲ್​ ಮ್ಯಾಚ್​ ವೇಳೆ ತಂಡವನ್ನು ಹುರಿದುಂಬಿಸುವ ಬದಲು, ಚೌಕೀದಾರ್​ ಚೋರ್​ ಹೈ ಎಂದು ಪ್ರಧಾನಿ ವಿರುದ್ಧ ಘೋಷಣೆ ಕೂಗಿದ್ದಾರೆ. ಈಗ ಚುನಾವಣೆ ಕೂಡ ಹತ್ತಿರ ಬರುತ್ತಿದಂತೆ ಮೋದಿಯವರ ಹೆಸರು ಕೆಡಸಲು ಈ ರೀತಿಯ ಪುಂಡಾಟಿಕೆ ಮಾಡಿದ್ದಾರೆ ಎಂದು ಹಲವರು ದೂರಿ ಐಪಿಎಲ್​ ಪಂದ್ಯದ ವೇಳೆ ನಲಪಾಡ್​​ ಕ್ರೀಡಾಭಿಮಾನ ಪ್ರದರ್ಶಿಸಲು ಬಂದಿದ್ದರಾ ಅಥವಾ ರಾಜಕಾರಣ ಮಾಡಲು ಬಂದಿದ್ದಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಸದ್ಯ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋ ಗಮನಿಸಿದರೆ, ನಲಪಾಡ್​ ಅಬ್ಬರ ಕಡಿಮೆಯಾಗಿಲ್ಲ ಎಂಬುದು ಸಾಬೀತಾಗಿದೆ. ಎನ್ನುವ ಮಾತುಗಳು ಕೇಳಿಬರುತ್ತಿವೆ.

ಈ ಹಿಂದೆವೂ ಕೂಡ ಇವರ ಪುಂಡಾಟಿಕೆಯಿಂದ ಉದ್ಯಮಿ ವಿದ್ವತ್ ಮೇಲೆ ಫೆ.17ರಂದು ನಲಪಾಡ್ ಹಾಗೂ ಆತನ ಗ್ಯಾಂಗ್ ವಿದ್ವತ್ ಮೇಲೆ ಯುಬಿ ಸಿಟಿಯ ಫರ್ಜಿ ಕಫೆಯಲ್ಲಿ ಹಲ್ಲೆ ನಡೆಸಿದ್ದರು. ಈ ಕೇಸ್- ಗೆ ಸಂಬಂಧಪಟ್ಟಂತೆ ಕೋರ್ಟ್ ಸಿಸಿ ದೃಶ್ಯಾವಳಿ ಮೇಲೆ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಸೆಷನ್ಸ್ ಕೋರ್ಟ್’ನಲ್ಲೂ ಜಾಮೀನು ಅರ್ಜಿ ವಜಾಗೊಳಿಸಲಾಗಿತ್ತು. ನಂತರ ಜೈಲುವಾಸ ಅನುಭವಿಸಿದ ನಲಪಾಡ್ ಮತ್ತೊಂದು ಪುಂಡಾಟಿಕೆಯಲ್ಲಿ ವೈರಲ್ ಆಗಿದ್ದಾರೆ.