ಅಂತೂ ಇಂತೂ ಮೊದಲ ಹಂತದ ಮೆಟ್ರೋ ಇನ್ನೇನು ಶುರು ಆಗುತ್ತೆ!! ಅದರ ಸಂಪೂರ್ಣ ಮಾಹಿತಿ ಇಲ್ಲಿದೆ, ತಪ್ಪದೆ ಓದಿ!!

0
824

ಬೆಂಗಳೂರು ನಗರದ ನಾಲ್ಕು ದಿಕ್ಕುಗಳನ್ನು ಹೃದಯಭಾಗಕ್ಕೆ ಸಂಪರ್ಕಿಸುವ “ನಮ್ಮ ಮೆಟ್ರೋ’ ರೈಲು ಯೋಜನೆ ಮುಂದಿನ ದಿನಗಳಲ್ಲಿ ರಾಜಧಾನಿಯ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಪ್ರಮುಖ ಕಾರಣವಾಗಲಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೂನ್‌ 17 ರಂದು ಗ್ರೀನ್ ಲೈನ್ ಉದ್ಘಾಟಿಸಲಿದ್ದಾರೆ. ಜೂನ್ 18 ರಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು ಉತ್ತರದಲ್ಲಿ ನಾಗಾಸಂದ್ರ ಮತ್ತು ದಕ್ಷಿಣದಲ್ಲಿ ಯೆಲಚೇನಹಳ್ಳಿಯನ್ನು ಸಂಪರ್ಕಿಸುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Image result for pranab mukherjee metro inauguration

ನಮ್ಮ ಮೆಟ್ರೋದ ಮೊದಲ ಹಂತ ಒಟ್ಟು 42.3 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದ್ದು, ಒಟ್ಟು 40 ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗ ಎಂದು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ.

ಹಸಿರು ಮಾರ್ಗ (ಗ್ರೀನ್ ಲೈನ್) – ಇದು ಏನನ್ನು ಒಳಗೊಂಡಿದೆ?

ಉತ್ತರದಲ್ಲಿ ನಾಗಸಾಂದ್ರ ಮತ್ತು ದಕ್ಷಿಣದಲ್ಲಿ ಯಲಚೇನಹಳ್ಳಿಯನ್ನು ಸಂಪರ್ಕಿಸುವ ಹಸಿರು ಮಾರ್ಗವು 24.22 ಕಿಮೀ ವಿಸ್ತಾರವನ್ನು ಹೊಂದಿದೆ.  Terminal ಗಳನ್ನೂ ಒಳಗೊಂಡಂತೆ 24 ಸ್ಟೇಷನ್ಗಳೊಂದಿಗೆ, ಗ್ರೀನ್ ಲೈನ್ ಸಂಪೂರ್ಣ ಪ್ರಯಾಣ 45 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. .

ಈ ಮಾರ್ಗದಲ್ಲಿ ಒಟ್ಟು 18 ರೈಲುಗಳು ಬೆಳಗ್ಗೆ, ಸಂಜೆ ವೇಳೆ 6 ನಿಮಿಷ ಮತ್ತು ಉಳಿದ ಸಮಯದಲ್ಲಿ 10:15 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆಗೊಳ್ಳಲಿವೆ. ಪ್ರಮುಖ ನಿಲ್ದಾಣಗಳಲ್ಲಿ ಕೆ.ಆರ್ ಮಾರುಕಟ್ಟೆ, ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್ ಮತ್ತು ಬನಶಂಕರಿ –  ದಕ್ಷಿಣ ಬೆಂಗಳೂರಿನ ಪ್ರಮುಖ ಬಸ್ ಡಿಪೋ.

ಮಾರ್ಗ ಬದಲಾವಣೆಗೆ ಒಂದೇ ಟೋಕನ್‌

ಇನ್ನು ಮುಂದೆ ಒಂದು ಮೆಟ್ರೋ ಬಳಕೆದಾರರು ಸಂಪೂರ್ಣ ಪ್ರಯಾಣಕ್ಕಾಗಿ ಒಂದೇ ಟಿಕೆಟ್ ಖರೀದಿಸಬಹುದು. ಅಂದರೆ, ಪ್ರಯಾಣಿಕರಿಗೆ ಗ್ರೀನ್ ಲೈನ್ನಿಂದ ಪರ್ಪಲ್ ಲೈನ್ಗೆ ಅಥವಾ ಮ್ಯಾಜೆಸ್ಟಿಕ್ನಲ್ಲಿರುವ ಇನ್ನೊಂದು ಮಾರ್ಗ, ಪಾವತಿಸದೆ ಪ್ರದೇಶದಿಂದ ಹೊರಬರದೆ ಎರಡು-ಹಂತದಲ್ಲಿ ಒಂದೇ ಟೋಕನ್‌ ಬಡಿಯುವ ಅವಕಾಶ ನೀಡಲಾಗಿದೆ.

ಉದಾಹರಣೆಗೆ ಬೈಯಪ್ಪನಹಳ್ಳಿ ಅಥವಾ ನಾಯಂಡಹಳ್ಳಿಯಿಂದ ಪೀಣ್ಯಕ್ಕೆ ಪ್ರಯಾಣಿಸುವವರು ಮೆಜೆಸ್ಟಿಕ್‌ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಇಳಿದು ಮತ್ತೊಮ್ಮೆ ಟಿಕೆಟ್‌ ಪಡೆಯಬೇಕಿಲ್ಲ. ಪೂರ್ವ-ಪಶ್ಚಿಮ ಅಥವಾ ಉತ್ತರ-ದಕ್ಷಿಣ ಕಾರಿಡಾರ್‌ನ ನಿಲ್ದಾಣಗಳಲ್ಲೇ ನಿಗದಿತ ಸ್ಥಳಕ್ಕೆ ಟೋಕನ್‌ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ. ಟೋಕನ್‌ ಪಡೆದ ಎರಡು ತಾಸಿನೊಳಗೆ ಬೇರೆ ಮಾರ್ಗದಲ್ಲಿ ಸಂಚರಿಸಬಹುದು.Image result for metro token machine

ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ಚಿಕ್ಕಪೇಟೆ, ಕೆಆರ್ ಮಾರುಕಟ್ಟೆ, ನ್ಯಾಷನಲ್ ಕಾಲೇಜ್, ಲಾಲ್ಬಾಗ್, ಸೌತ್ ಎಂಡ್ ಸರ್ಕಲ್, ಜೆಪಿ ನಗರ ಮತ್ತು ಯೆಲಚೇನಹಳ್ಳಿಗಳಲ್ಲಿ ಪಾರ್ಕಿಂಗ್ ಸೌಲಭ್ಯಗಳು ಲಭ್ಯವಿರುತ್ತವೆ.

ಟಿಕೆಟ್ ದರ ಎಷ್ಟು?

ಬೆಂಗಳೂರು ಮೆಟ್ರೋ ರೈಲು ಕಾರಿಡಾರ್ ಲಿಮಿಟೆಡ್ (ಬಿಎಂಆರ್ಸಿಎಲ್) ಮೂಲಗಳ ಪ್ರಕಾರ ಗ್ರೀನ್ ಲೈನ್ನ ಶುಲ್ಕ ಚಾರ್ಟ್ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು, ಇಡೀ ಉತ್ತರ ಮತ್ತು ದಕ್ಷಿಣ ಕಾರಿಡಾರ್ಗೆ ಗರಿಷ್ಠ 55 ರೂಪಾಯಿ ನಿಗದಿಸಲಾಗಿದೆ. ಪೂರ್ವದಲ್ಲಿ ಬಯ್ಯಪ್ಪನಹಳ್ಳಿಯಿಂದ ಉತ್ತರಕ್ಕೆ ನಾಗೇಸೆಂದ್ರಕ್ಕೆ ಪ್ರಯಾಣಿಸಲು ಇದೇ ಬೆಲೆ ಕೂಡ ಅನ್ವಯವಾಗುತ್ತದೆ. ಪರ್ಪಲ್ ಲೈನ್ನ ಗರಿಷ್ಟ ಶುಲ್ಕವು ಪ್ರಸ್ತುತ ರೂ 40  ನಿಗದಿ ಪಡಿಸಲಾಗಿದೆ.

ಒಂದನೇ ಹಂತದ 42.30 ಕಿ.ಮೀ ಮಾರ್ಗದಲ್ಲಿ ನಿತ್ಯ 4 ಲಕ್ಷ ಮಂದಿ ಮೆಟ್ರೊ ಸೇವೆ ಬಳಸುವ ನಿರೀಕ್ಷೆ ಇದೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ 2 ಲಕ್ಷ ಮಂದಿ ಪ್ರಯಾಣಿಸುವ ಸಾಧ್ಯತೆ ಇದೆ. ಮುಂದಿನ 3-4 ತಿಂಗಳಿನಲ್ಲಿ 5 ಲಕ್ಷಕ್ಕೆ ಏರಬಹುದೆಂದು ನಿರೀಕ್ಷಿಸಿದ್ದರೆ. ಏರಡೂ ಮಾರ್ಗಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನಗರದಲ್ಲಿನ ವಾಹನ ದಟ್ಟಣೆಯನ್ನುತಗ್ಗುವ ಸಾಧ್ಯತೆಗಳಿವೆ.

ನಿರ್ಮಾಣದ ವೆಚ್ಚ

ನಮ್ಮ ಮೆಟ್ರೋ ಮೊದಲ ಹಂತದ ನಿರ್ಮಾಣಕ್ಕೆ ಈ ವರೆಗೂ ಒಟ್ಟು 14, 291 ಕೋಟಿ ರು.ಗಳು ವೆಚ್ಚವಾಗಿದೆ. ನಮ್ಮ ಮೆಟ್ರೋ ಮೊದಲ ಹಂತ 2007 ರಲ್ಲಿ ಪ್ರಾರಂಭವಾಗಿತ್ತು. ಆದರೆ ಮಾರ್ಚ್ 2010 ರಿಂದ ಕಾರ್ಯರೂಪಕ್ಕೆ
ಬರಲು ತುಂಬಾ ಅಡೆತಡೆಗಳನ್ನು ಎದುರಿಸಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ನಮ್ಮ ಮೆಟ್ರೋ ಮೊದಲ ಹಂತದಲ್ಲಿ 1 ಕಿಲೋಮೀಟರ್ ಗೆ 145 ಕೋಟಿ ಮತ್ತು 340 ಕೋಟಿ ಆರಂಭಿಕ ಅಂದಾಜು ರಿಂದ 70% ಏರಿಕೆ ಕಂಡ ವರದಿ ಇದೆ.
Image result for bangalore metro map

ಒಟ್ಟು ಗ್ರೀನ್ ಮತ್ತು ಪರ್ಪಲ್ ಲೈನ್ ಮಾರ್ಗವನ್ನು 2013 ರಲ್ಲೇ ಸಂಪೂರ್ಣ ಮುಗಿಸುವ ಯೋಚನೆಯಿತ್ತು. ಆದರೆ ಕಾಮಗಾರಿ ವಿಳಂಬವಾಗಿ ಇದೀಗ ಅಂದರೆ ಡೇಡ್ ಲೈನ್ ಮುಗಿದ ಬರೋಬ್ಬರಿ ನಾಲ್ಕು ವರ್ಷದ ನಂತರ ಮೆಟ್ರೋ ಲೋಕಾರ್ಪಣೆಗೊಳ್ಳುತ್ತಿದೆ.

ಬೆಂಗಳೂರಿನ ಮೈಸೂರು ರಸ್ತೆ ಇಂದ ಬೈಯಪ್ಪನಹಳ್ಳಿ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು, 18 ಕಿ.ಮೀ.ಹಾದಿ ಕ್ರಮಿಸುವುದಕ್ಕೂ 2 ಗಂಟೆ ರಸ್ತೆಯಲ್ಲಿ ಪರದಾಡಬೇಕಾದ ಪರಿಸ್ಥಿತಿಯನ್ನು ನಮ್ಮ ಮೆಟ್ರೋ ಇಲ್ಲವಾಗಿಸಿದೆ. 18 ಕಿ.ಮೀ.ದೂರವನ್ನೂಈಗ ಕೇವಲ 35 ನಿಮಿಷದಲ್ಲಿ ತಲುಪಿಸಬಲ್ಲ ನಮ್ಮ ಮೆಟ್ರೋ ಬೆಂಗಳೂರಿಗರಿಗೆ ನಿಜಕ್ಕೂ ವರದಾನವಾಗಲಿದೆ.