ಇದೇ ವಾರದಲ್ಲಿ ನಾಲ್ಕು ದಿನ ಮೆಟ್ರೋ ಸಂಚಾರ ಸ್ಥಗಿತ; ಮೆಟ್ರೋ ಪ್ರಯಾಣಿಕರೆ ಇಗಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.!

0
99

ಮೆಟ್ರೋ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ, ನಾಲ್ಕು ದಿನ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳ್ಳಲಿದ್ದು, ಈ ಗುರುವಾರದಿಂದ ಮುಂದಿನ ಭಾನುವಾರದವರೆಗೆ ಆರ್.ವಿ. ರಸ್ತೆ-ಯೆಲಚೇನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ರದ್ದಾಗಲಿದ್ದು ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ಬಳಸಬೇಕಿದೆ. ಅದರಂತೆ ನವೆಂಬರ್ 14 ರಿಂದ ನವೆಂಬರ್ 17 ರವರೆಗೆ ಆರ್.ವಿ. ರಸ್ತೆ-ಯೆಲಚೇನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ರದ್ದಾಗಲಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಭಾನುವಾರ ರಾತ್ರಿಯವರೆಗೆ ಪ್ರಯಾಣಿಕರು ತಮ್ಮ ಸ್ಥಳಗಳನ್ನು ತಲುಪಲು ಪರ್ಯಾಯ ಸಾರಿಗೆಯನ್ನು ಬಳಸುವುದು ಒಳ್ಳೆಯದು.

Also read: ಸರ್ಕಾರಿ ಖಜಾನೆಗೆ ಕನ್ನಾ; ರೈತರು ಪಡೆದ ಸಾಲ 50 ಸಾವಿರವಾದರೂ ರೈತರ ಹೆಸರಲ್ಲಿ ಸೊಸೈಟಿಗಳು ಮಾಹಿತಿ ನೀಡಿದ್ದು 1 ಲಕ್ಷ ರೂ. ವಂತೆ.!

ರೈಲು ಸಂಚಾರ ಸ್ಥಗಿತ ಕಾರಣ?

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (BMRCL) ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡ ಪರಿಣಾಮ ಈ ಪರಿಸ್ಥಿತಿ ಎದುರಾಗಿದೆ/“ಆರ್‌ವಿ ರೋಡ್ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದಲ್ಲಿ, ಕಾರ್ಯಾಚರಣೆಯ ಗ್ರೀನ್ ಲೈನ್‌ನಾದ್ಯಂತ ವಯಾಡಕ್ಟ್ ಸೂಪರ್‌ಸ್ಟ್ರಕ್ಚರ್‌ಗಳನ್ನು ಪ್ರಾರಂಭಿಸುವ ಕೆಲಸವನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಳ್ಳುತ್ತಿದೆ. ಈ ಕಾರ್ಯವು ಪ್ರಸ್ತುತ ಗ್ರೀನ್ ಲೈನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಕಾರಿಡಾರ್ ನಡುವಿನ ಸಂಪರ್ಕಕ್ಕಾಗಿ ಮಾಡಲಾಗುತ್ತಿದ್ದು ಇದು ಆರ್.ವಿ. ರಸ್ತೆಯ ಮೆಟ್ರೋ ನಿಲ್ದಾಣದ ಅಭಿವೃದ್ಧಿ ಭಾಗವಾಗಿದೆ.

ಎಂದಿನಿಂದ ಬಂದ್? ಎಂದಿನಿಂದ ಶುರು?

Also read: ಬೊಗಳುವ ನಾಯಿಗೆ ಗುಂಡು ಹಾರಿಸಿದ ವ್ಯಕ್ತಿ; ಜೀವ ಉಳಿಸಲು ಶಸ್ತ್ರಚಿಕಿತ್ಸೆ, ನಾಯಿ ನೋಡಲು ಆಸ್ಪತ್ರೆ ಬೇಟಿ ನೀಡಿದ ಶಾಸಕಿ ಸೌಮ್ಯ ರೆಡ್ಡಿ.!

“ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 5.30 ರಿಂದ ರಾತ್ರಿ 11.45 ರವರೆಗೆ ಮತ್ತು ನವೆಂಬರ್ 14, 15 ಮತ್ತು 16 ರಂದು ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 4.45 ರಿಂದ ರಾತ್ರಿ 10.30 ವರೆಗೆ ಮೆಟ್ರೋ ಫೀಡರ್ ಬಸ್ಸುಗಳು ಲಭ್ಯವಾಗಿರಲಿದೆ.ಆದಾಗ್ಯೂ, ನವೆಂಬರ್ 17 ರಂದು ಬಸ್ ಸೇವೆಗಳು ಯಲಚೇನಹಳ್ಳಿಯಿಂದ ಬೆಳಿಗ್ಗೆ 6.30 ಕ್ಕೆ ಮತ್ತು ಆರ್‌ವಿ ರಸ್ತೆಯಿಂದ ಬೆಳಿಗ್ಗೆ 7.15 ಕ್ಕೆ ಪ್ರಾರಂಭಿಸಿ. ಈ ಬಸ್ಸುಗಳು ಮಧ್ಯಂತರ ಮೆಟ್ರೋ ನಿಲ್ದಾಣಗಳಾದ ಬನಶಂಕರಿ ಮತ್ತು ಜೆಪಿ ನಗರಗಳಿಗೆ ಸಂಪರ್ಕಿಸುತ್ತದೆ”ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್.ಯಶವಂತ್ ಚವಾಣ್ ಅವರು ಬಿಡುಗಡೆ ಮಾಡಿದ ಹೇಳಿಕೆ ವಿವರಿಸಿದೆ. ನವೆಂಬರ್ 18 ಬೆಳಿಗ್ಗೆ 5 ಗಂಟೆಗೆ ನಾಗಸಂದ್ರದಿಂದ ಯೆಲಚೇನಹಳ್ಳಿಯ ನಡುವೆ ನಿಯಮಿತ ರೈಲು ಸೇವೆಗಳು ಪುನರಾರಂಭಗೊಳ್ಳಲಿವೆ.ನಾಯಂಡನಹಳ್ಳಿಯಿಂದ ಬೈಯಪ್ಪನಹಳ್ಳಿಗೆಸಾಗುವ ನೇರಳೆ ಮಾರ್ಗ (ಪರ್ಪಲ್ ಲೈನ್) ಸೇವೆಗಳಲ್ಲಿ ಯಾವ ವ್ಯತ್ಯಾಸಗಳಿಲ್ಲ.

ಪರ್ಯಾಯ ಬಸ್ಸುಗಳ ವ್ಯವಸ್ಥೆ?

Also read: ಅಯೋಧ್ಯೆ ತೀರ್ಪು ಮದ್ಯ ಮಾರಾಟ ನಿಷೇಧ; ಪಾರ್ಟಿ ಮಾಡಲು ಎಣ್ಣೆ ಬೇಕೆಂದು ಆನ್ಲೈನ್-ನಲ್ಲಿ ಬುಕ್ ಮಾಡಲು ಹೋಗಿ 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ.!

ಮೊದಲ ಮೂರು ದಿನ ಆರ್.ವಿ. ರಸ್ತೆ ನಿಲ್ದಾಣದಿಂದ ಬೆಳಿಗ್ಗೆ 5.30ರಿಂದ ರಾತ್ರಿ 11.45ರವರೆಗೆ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಬೆಳಿಗ್ಗೆ 4.45ರಿಂದ ರಾತ್ರಿ 10.30ರವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ನ.17ರಂದು ಯಲಚೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಮತ್ತು ಆರ್.ವಿ. ರಸ್ತೆಯಿಂದ ಬೆಳಿಗ್ಗೆ 7.15ಕ್ಕೆ ಬಸ್ ಸೇವೆ ಆರಂಭವಾಗಲಿದೆ. ಈ ಬಿಎಂಟಿಸಿ ಬಸ್ಸುಗಳು ಬನಶಂಕರಿ ಮತ್ತು ಜೆ.ಪಿ. ನಗರದ ಮೆಟ್ರೊ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ನಿಗಮ ಹೇಳಿದೆ.