ಮೂರು ಮಕ್ಕಳನ್ನು ಹೆತ್ತ ಪಾಲಿಕೆ ಸದಸ್ಯೆಯನ್ನು ಅನರ್ಹ ಗೊಳಿಸಿದ ಕೋರ್ಟ್; ಚುನಾವಣೆ ನಿಲ್ಲುವುದಕ್ಕೆ ಅರ್ಹತೆಗಿಂತ ಫ್ಯಾಮಿಲಿ ಪ್ಲಾನಿಂಗ್ ಮುಖ್ಯವೆಂದ ಸುಪ್ರಿಂ ಕೋರ್ಟ್!!

0
1679

ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಸಂಬಂಧ ಕಳೆದ ವರ್ಷವೇ ಮೂವರು ಮಕ್ಕಳ ಪೋಷಕರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ಅನರ್ಹ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಅದನ್ನು ಲೆಕ್ಕಿಸದೆ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳಾ ಕಾರ್ಪೋರೇಟರ್ ರೋಬ್ಬರನ್ನು ಅನರ್ಹ ಗೊಳಿಸಿ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ತಂದ ಕಾಯ್ದೆಯನ್ನು ಪಾಲಿಸಿದೆ.

Also read: ಸ್ನೇಹಿತರ ಜೊತೆಗೆ ಟ್ರಿಪ್ ಹೋಗುವ ಯುವಕ-ಯುವತಿಯರೇ ಹುಷಾರ್; ಪ್ರವಾಸಿ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮಾಡಿದರೆ ಏನಾಗುತ್ತೆ ಈ ವಿಡಿಯೋ ನೋಡಿ!!

ಹೌದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ನ್ಯಾಯಮೂರ್ತಿ ಎಸ್‍ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿತ್ತು. ಪಂಚಾಯತ್ ಕಾಯ್ದೆಯ ಪ್ರಕಾರ ಮೂರು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡುವ ಹಾಗಿಲ್ಲ ಅಥವಾ ಪಂಚಾಯತ್ ನಲ್ಲಿ ಯಾವುದೇ ಹುದ್ದೆ ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ಜನಿಸಿದ ಮಕ್ಕಳನ್ನು ದತ್ತು ನೀಡುವ ಮೂಲಕ ಸಂಖ್ಯೆ ನಿಯಂತ್ರಿಸಬಹುದು ಎಂದು ಹಿಂದೂ ದತ್ತು ಕಾನೂನು ಹೇಳುತ್ತದೆ. ಆದರೆ ಕಾಯ್ದೆಯ ಉದ್ದೇಶ ಜನಸಂಖ್ಯೆಯನ್ನು ಕಡಿಮೆ ಮಾಡುವುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಈಗ ಅದೇ ಪ್ರಕರಣ ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ ನಡೆದಿದ್ದು, ಜಿಎಚ್‍ಎಂಸಿ ಸದಸ್ಯರೊಬ್ಬರನ್ನು ನಾಂಪಲ್ಲಿ ನ್ಯಾಯಾಲಯವು ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಟಿಆರ್‍ಎಸ್‍ಗೆ ಸೇರಿದ ಕಚೆಗುಡ ಕಾರ್ಪೋರೇಟರ್ ಎಕ್ಕಲ ಚೈತನ್ಯ ಕಣ್ಣ ಅವರನ್ನು ಕೋರ್ಟ್ ಅನರ್ಹಗೊಳಿಸಿದೆ. ಜಿಎಚ್‍ಎಂಸಿ ಕಾಯ್ದೆ 2009 ರ ಸೆಕ್ಷನ್ 21 ಬಿ ಪ್ರಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಹಾನಗರ ಪಾಲಿಕೆ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.ಕಣ್ಣ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಅಫಿಡವಿಟ್‍ನಲ್ಲಿ ತಮಗೆ ಕೇವಲ ಇಬ್ಬರು ಮಕ್ಕಳಿದ್ದಾರೆ ಎಂದು ಉಲ್ಲೇಖಿಸಿದ್ದರು. ಮಾಜಿ ಕಾರ್ಪೋರೇಟರ್ ಮತ್ತು ಬಿಜೆಪಿ ಮುಖಂಡ ಕೆ.ರಮೇಶ್ ಯಾದವ್ ಅವರು ಕಣ್ಣ ಅವರಿಗೆ ಮೂವರು ಮಕ್ಕಳಿದ್ದಾರೆ ಎಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಜೊತೆಗೆ ಮೂವರು ಮಕ್ಕಳಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸಿದ್ದರು.

Also read: ವ್ಯಕ್ತಿ ಸತ್ತನೆಂದು ಅಂತ್ಯಸಂಸ್ಕಾರ ಮಾಡಿ ತಿಥಿ ನಡೆದು ಎರಡು ದಿನದ ನಂತರ ಮನೆಗೆ ಮರಳಿದ ವ್ಯಕ್ತಿ!!

ಟಿಆರ್‍ಎಸ್ ಕಾರ್ಪೊರೇಟರ್ ಅವರು ಅಫಿಡವಿಟ್‍ನಲ್ಲಿ ಇಬ್ಬರು ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ್ದರು. ಹೀಗಾಗಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಕಣ್ಣ ಅವರಿಗೆ ಮೂರು ಮಕ್ಕಳಿದ್ದಾರೆ. ಹೀಗಾಗಿ ಸುಮಾರು ಮೂರೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ ಕಾರ್ಪೊರೇಟರ್ ಅವರನ್ನು ಅನರ್ಹಗೊಳಿಸಿದೆ.
ಇಂತಹದೆ ಪ್ರಕರಣ ಒಡಿಶಾ ನಡೆದಿತ್ತು. ಬುಡಕಟ್ಟು ಜನಾಂಗದ ಅಧ್ಯಕ್ಷ ತನ್ನ ಮೂರನೇ ಮಗುವನ್ನು ಬೇರೆಯವರಿಗೆ ದತ್ತು ನೀಡುವ ಮೂಲಕ ಪಂಚಾಯತ್ ನಲ್ಲಿ ಅಧಿಕಾರ ಪಡೆಯಲು ಯತ್ನಿಸಿದ್ದರು. ಈ ಕುರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿ. ಅಲ್ಲದೇ ಒಂದೊಮ್ಮೆ ಅಧಿಕಾರದಲ್ಲಿದ್ದ ವೇಳೆ ಮೂರನೇ ಮಗು ಜನಿಸಿದರೂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದೆ. ಈಗ ಮತ್ತೆ ಹೈದರಾಬಾದ್ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಅವರನ್ನು ಅನರ್ಹಗೊಳಿಸಿದೆ.