ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ, ಹಾಕಿ ಅವಮಾನ ಮಾಡಿದ ದುಷ್ಕರ್ಮಿಗಳು; ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ಕೃತ್ಯಗಳಿಗೆ ಯಾವಾಗ ಅಂತ್ಯ??

0
338

ಹಿಂದೂ ದೇವಾಲಯಗಳನ್ನು ದ್ವಂಸ ಮಾಡುವ ಮತ್ತು ವಿಗ್ರಹಗಳಿಗೆ ದಕ್ಕೆ ಮಾಡುವ ಕೆಲಸ ನಡೆಯುತ್ತಾನೆ ಇದೆ. ಊರಿನಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ ನೂರಾರು ವರ್ಷಗಳಿಂದ ನಂಬಿಕೆ ಇಟ್ಟುಕೊಂಡು ಬರುತ್ತಿರುವ ವಿಗ್ರಹಗಳಿಗೆ ಕಿಡಿಗೇಡಿಗಳು ಅವಮಾನ ಮಾಡುತ್ತಾ ಬರುತ್ತಿದ್ದಾರೆ. ಇದನ್ನು ಮಾಡುವುದು ಹಿಂದೂ ವಿರೋಧಿಗಳು ಎಂದು ಹಲವು ಮುಸ್ಲಿಮರ ಮಸೀದಿಯ ಮೇಲೆ ವಿರೋಧ ವ್ಯಕ್ತಪಡಿಸಿದ ಘಟನೆಗಳು ಕಂಡು ಬರುತ್ತಿವೆ. ಇಂತಹ ಬುದ್ದಿಗೇಡಿ ಕೆಲಸಕ್ಕೆ ಇಡಿ ರಾಜ್ಯದಲ್ಲೇ ಅಲೆ ಏಳುವುದರ ಬಗ್ಗೆ ಅನುಮಾನ ವಿಲ್ಲದಂತ ಮತ್ತೊಂದು ಘಟನೆ ನಡೆದಿದ್ದು ಶಿವನ ವಾಹನ ನಂದಿ ವಿಗ್ರಹಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನವೆಸಗಿದ್ದು ಬಾರಿ ಚರ್ಚೆಗೆ ಗ್ರಾಸವಾಗಿದೆ.


Also read: ನಿಖಿಲ್ ಗೆ ವೋಟ್ ಹಾಕದ ಮಂಡ್ಯದ ಜನರ ಮೇಲೆ ದರ್ಪ ತೋರಿಸಿದ ಸಚಿವ ಡಿ.ಸಿ ತಮ್ಮಣ್ಣ..

ಹೌದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ಮೂರ್ತಿಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಶನಿವಾರ ಬೆಳಗಿನ ಜಾವ ಎಂದಿನಂತೆ ದೇವಾಲಯದ ಅರ್ಚಕರು ಪೂಜೆಗಾಗಿ ದೇವಾಲಯಕ್ಕೆ ಆಗಮಿಸಿದ್ದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಪೂಜೆ ಬಳಿಕ ದೇವಾಲಯದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ ಹಾಕಿ ಅವಮಾನಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಶ್ವಾನ ದಳ ಕರೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ. ಕೂಡಗಿ ಎನ್ ಟಿಪಿಸಿ ಪೊಲೀಸ್ ಠಾಣೆ ಪಿಎಸ್‍ಐ ಬಸವರಾಜ್ ಅವಟಿ ದೇವಸ್ಥಾನಕ್ಕೆ ಭೇಟಿ, ಪರಿಶೀಲನೆ ನಡೆಸಿ ಆರೋಪಿಗಳು ಯಾರೇ ಆಗಲಿ ಬಂದಿಸಲಾಗುತ್ತೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.


Also read: ಸಿಲಿಕಾನ್ ಸಿಟಿಯಲ್ಲಿ ಕಾವೇರಿ ನೀರು ಕಳ್ಳತನ; ರಾತ್ರೋರಾತ್ರಿ ನಡೆಯುತ್ತಿದೆ ದೊಡ್ಡಮಟ್ಟದ ನೀರು ಮಾಫಿಯಾ..

ಇಂತಹ ಕೃತ್ಯಗಳಿಂದ ಹಿಂದೂ ಧರ್ಮವನ್ನು ಅವಮಾನ ಮಾಡಿದಂತೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಹಿರಿಯರೊಬ್ಬರು ಮಾತನಾಡಿ. ಬಹುದಿನಗಳಿಂದ ಮಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ನಮಗೆ ಬಸವಣ್ಣನ ಕೃಪೆಯಿಂದ ಮಳೆಯಾಗಿದೆ ಆದರೆ ಪಾಪಿಗಳು ಮಾಡಿದ ಈ ಕೆಟ್ಟಕೆಲಸಕ್ಕೆ ಇಡಿ ಗ್ರಾಮದಲ್ಲಿ ಶಾಂತಿ ಕದಡಿದೆ ದೇವರಿಗೆ ಮಾಡಿದ ಅವಮಾನ ನಮಗೆಲ್ಲರಿಗೂ ಮಾಡಿದ ಹಾಗೆ ಎಂದು ಹಿರಿಯರು ತಮ್ಮ ಅಳುವನ್ನು ತೋಡಿಕೊಂಡಿದ್ದಾರೆ. ಇದೆ ವರ್ಷದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಎರಡನೇ ಬಾರಿಯಾಗಿದ್ದು. ಶಿರಸಿ-ಕೊರ್ಲಕಟ್ಟಾ ರಸ್ತೆಯ ಕಸ್ತೂರಿ ಬಾ ನಗರದಲ್ಲಿನ ಬಸವೇಶ್ವರ ದೇವಾಲಯವನ್ನು ಕಿಡಿಗೇಡಿಗಳು ಒಡೆದು ಹಾಕಿದ್ದರು.


Also read: ಮೈಸೂರು- ಬೆಂಗಳೂರು ಪ್ರಯಾಣಿಕರಿಗೆ ಸಿಹಿಸುದ್ದಿ; ಇಂದಿನಿಂದ ವಾರಕ್ಕೆ 5 ಬಾರಿ ಮೈಸೂರು-ಬೆಂಗಳೂರು ನಡುವೆ ಕಡಿಮೆ ದರದಲ್ಲಿ ವಿಮಾನ ಸೇವೆ ಆರಂಭ..

ನಿರ್ಜನ ಪ್ರದೇಶದಲ್ಲಿ ಕಳೆದ ಹನ್ನೆರಡು ವರ್ಷದ ಹಿಂದೆ ನಿರ್ಮಿಸಲಾಗಿದ್ದ ಬಸವೇಶ್ವರ ದೇವಾಸ್ಥನವನ್ನ ಕಿಡಿಗೇಡಿಗಳು ದ್ವಂಸ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಇದೇ ಮಾರ್ಗದಲ್ಲಿದ್ದ ದರ್ಗಾ ಒಂದರಲ್ಲಿ ಕೆಲ ಕಿಡಿಗೇಡಿಗಳು ಓಂ ಎಂದು ಬರೆದು ಬಿಗುವಿನ ವಾತಾವರಣ ಸೃಷ್ಟಿಸಿದ್ರು. ಆದ್ರೆ ಈ ಲೋಕಸಭಾ ಚುನಾವಣೆ ವೇಳೆ ಈ ಕೃತ್ಯ ನಡೆಸಿದರು ಈ ದೇವಾಲಯದಲ್ಲಿ ಸತತ ಹನ್ನೆರಡು ವರ್ಷಗಳ ಹಿಂದಿನಿಂದಲೂ ಪೂಜೆ ನಡೆಸಿಕೊಂಡು ಬಂದಿರುವ ಕುಟುಂಬ ಊರಿನಲ್ಲಿ ಇಲ್ಲದ ವೇಳೆ ಈ ಘಟನೆ ಸಂಭವಿಸಿತ್ತು. ದೇವಾಲಯದ ಗೋಡೆ, ಕಳಶವನ್ನ ಕಿತ್ತು ಹಾಕಿದ್ದ ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಕಾರದಪುಡಿ ಚೆಲ್ಲಿ ಹೋಗಿದ್ದರು. ಈಗ ಮತ್ತೆ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ನಂದಿ ವಿಗ್ರಹಕ್ಕೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ.