ನಿಮ್ಮ ಸುತ್ತಮುತ್ತಲಿರುವ ನಂದಿಬಟ್ಟಲು ಹೂವಿನ ಗಿಡ ಹಲವು ಔಷದಿಯ ಗುಣಗಳನ್ನು ಹೊಂದಿದೆ…!

0
1887
nandibattalu-flower-has-medicinal-properties

ನಿಮ್ಮ ಸುತ್ತಮುತ್ತ ಹಲುವು ರೀತಿಯಾ ಔಷಧಿಗಿಡಗಳು ಕಂಡುಬರುತ್ತವೆ. ನೀವು ಅಂತಹ ಗಿಡಗಳನ್ನು ಬಳಸಿಕೊಂಡರೆ ನಿಮ್ಮ ಅರೋಗ್ಯ ತುಂಬ ಉತ್ತಮಾಗಿರುತ್ತೆ. ಅದರಲ್ಲಿ ಈ ನದಿಬಟ್ಟಲು ಹೂವಿನ ಗಿಡ ಸಹ ಒಂದಾಗಿದೆ. ಹಾಗಾದರೆ ಈ ನದಿಬಟ್ಟಲಿನ ಹೂವಿನ ಗಿಡದ ಉಪಯೋಗಗಳು ಏನು ಅಂತ ನೋಡಣ ಬನ್ನಿ..

ನದಿಬಟ್ಟಲಿನ ಹೂವಿನ ಗಿಡದ ಉಪಯೋಗಗಳು:

ಮೂಗು ಬಾಯಿ ರಕ್ತ ಸುರಿಯುವುದು:

Related image
ಎರಡು ಟೀ ಚಮಚ ಸ್ವಚ್ಛ ಮಾಡಿದ ಜಿರಿಗೆ, ಎರಡು ಟೀ ಚಮಚ ಸಕ್ಕರೆ,ಎರಡು ನಂದಿ ಬಟ್ಲು ಹೂಗಳು ಎರಡು ಟೀ ಚಮಚ ಆಕಳ ಹಾಲು ಸೇರಿಸಿ ನುಣ್ಣಗೆ ಅರೆಯುವುದು. ಈ ಕಲ್ಕವನ್ನು ತೆಳು ಬಟ್ಟೆಯಿಂದ ಶೋಧಿಸಿ ವೇಳೆಗೆ ಒಂದೇ ಟೀ ಚಮಚ ಸೇವಿಸುವುದು. ಹೀಗೆ ಪ್ರತಿನಿತ್ಯ ಎರಡು ವೇಳೆ 7 ದಿನಗಳು ಕೊಡುವುದು.

ಕಣ್ಣಿನ ಪೊರೆ ಮತ್ತು ಕಣ್ಣಿ ಸಮಸ್ತ ವ್ಯಾಧಿಗಳಿಗೆ:

Related image
20 ಗ್ರಾಂ ತಾಜಾ ಅರಳಿದ ನಂದಿಬಟ್ಲು ಹೂವುಗಳು, 20 ಗ್ರಾಂ ಹಸುವಿನ ಬೆಣ್ಣೆ ಮತ್ತು ಎರಡು ಚಿಟಿಕಿ ಪಚ್ಚ ಕರ್ಪೂರವನ್ನು ಸೇರಿಸಿ ನುಣ್ಣಗೆ ಅರೆದು ಭರಣಿಯಲ್ಲಿ ಶೇಖರಿಸುವುದು. ಪ್ರತಿನಿತ್ಯ ನಾಲ್ಕೈದು ಸಾರಿ ಕಣ್ಣುಗಳಿಗೆ ಅಂಜನವಿಡುವುದು.

ಬಂಜೆತನದಲ್ಲಿ:

Image result for Infertility
ಮುಟ್ಟಿನ ಅವಧಿಯಲ್ಲಿ 4 ನೇ ದಿವಸದ ಸ್ನಾನ ಮಾಡಿದ ನಂತರ ನಾಲ್ಕೈದು ತಾಜಾ ನಂದಿ ಬಟ್ಲು ಎಲೆಗಳನ್ನು ತಂದು ತೊಳೆದು ಎರಡು ಟೀ ಚಮಚ ಪಾಲೀಶ್ ಮಾಡದ ಅಕ್ಕಿಯಲ್ಲಿ ನುಣ್ಣಗೆ ಅರೆದು ಕಾಲು ಟೀ ಚಮಚ ತುಪ್ಪ ಮತ್ತು ಒಮದು ಟೀ ಚಮಚ ಶುದ್ದ ಜೇನು ಸೇವಿಸುವುದು. ಹೀಗೆ 3-4 ಮುಟ್ಟಿನಲ್ಲಿ ಚಿಕಿತ್ಸೆ ಮುಂದುವರಿಸುವುದು ಮತ್ತು ದಾನ, ಧರ್ಮ ಮಾಡಿ ಇಷ್ಟಾನುದೇವತೆಗಳನ್ನು ಪ್ರಾರ್ಥಿಸುವುದು. ಇರುಳಲ್ಲಿ ಗಂಡ ಹೆಂಡತಿ ಸುಖವಾಗಿರುವುದು.

ಹಾವು ಕಚ್ಚಿದಾಗ:

Image result for Snake bites
ಹಾವು ಕಚ್ಚಿ ವಿಷವೇರಿ ಪ್ರಜ್ಞೆ ತಪ್ಪಿದರೆ ನಂದಿ ಬಟ್ಲು ಗಿಡದ ಬೇರನ್ನು ತಂದು ಚೆನ್ನಾಗಿ ತೊಳೆದು ನೀರಿನಲ್ಲಿ ತೇದು ಮೂಗಿನ ಎರಡು ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು ಮತ್ತು ಇದೇ ಗಂಧವನ್ನು ಸ್ವಲ್ಪ ಸ್ವಲ್ಪವಾಗಿ ನೆಕ್ಕಿಸುವುದು.

ಹಲ್ಲು ನೋವಿಗೆ:

Image result for Tooth pain
ನಂದಿ ಬಟ್ಲು ಗಿಡದ ಬಲಿತ ಬೇರನ್ನು ತಂದು ಜಜ್ಜಿ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುವುದು. ಬಾಯಿಯಲ್ಲಿ ಬರುವ ನೀರನ್ನು ಉಗುಳುವುದು.

ಜ್ವರಕ್ಕೆ:

Related image
ನಂದಿ ಬಟ್ಲು ಗಿಡದ ಬಲಿತ ಬೇರನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಅಷ್ಠಾಂಶ ಕಷಾಯ ಮಾಡಿ ಸ್ವಲ್ಪ ಕಟುಕರೋಹಿಣಿ ಚೂರ್ಣ ಸೇರಿಸಿ ದಿನಕ್ಕೆ ಎರಡು ವೇಳೆ ಎರಡೆರಡು ಟೀ ಚಮಚ ಸೇವಿಸುವುದು. ಹೀಗೆ ಐದು ದಿವಸ ಚಿಕಿತ್ಸೆ ಮುಂದುವರಿಸುವುದು.