ವಿಶ್ವದ ಅತೀ ಚಿಕ್ಕ ‘ನ್ಯಾನೋ ಫೋನ್‌-ಸಿ’

0
638

ಹೊಸದಿಲ್ಲಿ : ವಿಶ್ವದ ಅತ್ಯಂತ ಕಡಿಮೆ ತೂಕದ ಮೊಬೈಲ್‌ ಫೋನ್‌ ಮೊಡೊ ನೋಡಿದ್ದಾಯಿತು ಇದೀಗ ವಿಶ್ವದ ಅತೀ ಚಿಕ್ಕ ಫೋನ್‌ನ ಸರದಿ. ರಶ್ಯದ ಎಲಾರಿ ಕಂಪೆನಿಯು ವಿಶ್ವದ ಅತೀ ಚಿಕ್ಕ ‘ನ್ಯಾನೋ ಫೋನ್‌-ಸಿ’ ಎಂಬ ಜಿಎಸ್‌ಎಂ ಪೋನ್‌ ಬಿಡುಗಡೆ ಮಾಡಿದೆ. ಈ ನ್ಯಾನೋ ಫೋನ್‌-ಸಿ ಮೊಬೈಲ್‌ ಫೋನ್‌ 94.4 x 35.85 x 7.6mm ಸುತ್ತಳತೆಯೊಂದಿಗೆ ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಮೊಬೈಲ್‌ ಫೋನ್‌ ಎಂದೆನಿಸಿಕೊಂಡಿದೆ. ಭಾರತದಲ್ಲಿ ಇದರ ಬೆಲೆ ಕೇವಲ 3,490 ರೂ.

source: yerha.com

ಇ ಕಾಮರ್ಸ್‌ ವೆಬ್‌ ತಾಣವಾಗಿರುವ yerha.com ಈ ನ್ಯಾನೋ ಫೋನ್‌-ಸಿ ಬಿಡುಗಡೆ ಆಗಿರುವುದನ್ನು ಪ್ರಕಟಿಸಿದೆ.

ಈ ನ್ಯಾನೋ ಫೋನನ್ನು ಅಲ್ಟ್ರಾ ಕಾಂಪ್ಯಾಕ್ಟ್ ಸ್ಟೈಲಿಶ್‌ ಮತ್ತು ಆ್ಯಂಟಿ ಸ್ಮಾರ್ಟ್‌ ಮೊಬೈಲ್‌ ಫೋನ್‌ ಎಂದು ವರ್ಣಿಸಲಾಗಿದೆ. ಸಾಮಾನ್ಯ ಸ್ಮಾರ್ಟ್‌ ಫೋನಿನ ಕೆಲವೊಂದ ಮುಖ್ಯ ಗುಣಲಕ್ಷಣಗಳನ್ನು ಈ ನ್ಯಾನೋ ಫೋನ್‌ ತನ್ನಲ್ಲಿ ಹೊಂದಿದೆ. ಇದರಲ್ಲಿರುವ ಮುಖ್ಯ ಸೌಕರ್ಯವೆಂದರೆ ಇದರ ಬಳಕೆದಾರನು ತನ್ನ ದೇಹಾರೋಗ್ಯ ಮತ್ತು ಕ್ರಿಯಾಶೀಲ ಜೀವನ ಶೈಲಿಯಿಂದ ಇದನ್ನು ಸಂಪೂರ್ಣವಾಗಿ ನಿಸ್ಸಂಪರ್ಕಗೊಳಿಸಿಡಬಹುದು.

source: yerha.com

ಈ ನ್ಯಾನೋ ಫೋನಿನ ವಿವರಗಳು ಸಂಕ್ಷಿಪ್ತವಾಗಿ ಇಂತಿವೆ :

Key Features of Nanophone C:

  • Bluetooth sync with smartphones (iOS, Android)
  • GSM 850/900/1800/1900 with microSIM for own calls, SMS and Magic Voice function
  • Copy up to 1000 contacts from smartphone; slot for microSD up to 32 GB
  • MP3 player, FM radio, voice recorder with phone calls recording function
  • Battery life – up to 4 days in standby mode, up to 4 hours of talk timе