ಇನ್ಫೋಸಿಸ್-ನ ನಾರಾಯಣಮೂರ್ತಿ ಭಾರತದ ಮುಂದಿನ ರಾಷ್ಟ್ರಪತಿ ಆಗುತ್ತಾರಾ??

0
712

ಇನ್ನು ನಾಲ್ಕು ತಿಂಗಳಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರ ಪೂರ್ಣಗೊಳ್ಳಲಿದ್ದು, ಮುಂದಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಒಂದು ಅಂದಾಜಿನ ಪ್ರಕಾರ ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಈ ಹುದ್ದೆಗೆ ಹೆಸರು ಕೇಳಿಬಂದಿತ್ತು. ಅಲ್ಲದೆ ಬಿಜೆಪಿಯ ಹಿರಿಯ ಮುಖಂಡರ ಹೆಸರುಗಳು ಕೇಳಿಬರುತ್ತಿವೆ. ಈ ಸಾಲಿನಲ್ಲಿ ಮತ್ತೊಂದು ಹೆಸರು ತೇಲಿ ಬಂದಿದೆ.

Image result for pranab mukharjee and advani
Credits: ProKerala

ದೇಶದ ಪ್ರಥಮ ಪ್ರಜೆ ರೇಸ್ ನಲ್ಲಿ ಕನ್ನಡಿಗ ನಾರಾಯಣ್ ಮೂರ್ತಿ?

ಇವರು ಯಾವ ಪಕ್ಷದಲ್ಲೂ ಗುರುತಿಸಿಕೊಂಡವರು ಅಲ್ಲ. ತಾವೇನು ತಮ್ಮ ಕೆಲಸವೇನು ಎಂದು ಕಾರ್ಯವನ್ನು ಮಾಡಿದವರು. ಭಾರತದ ಅದೆಷ್ಟೋ ಯುವ ಐ.ಟಿ ಕೆಲಸಗಾರರು ಹಾಗೂ ಉದ್ಯಮಿಗಳಿಗೆ ಇವರು ರೋಲ್ಡ್ ಮಾಡಲ್‍. ಹಾಗಿದ್ದರೆ ಅವರು ಯಾರು ಎಂಬುದು ನಿಮಗೆ ತಿಳಿದಿರಬೇಕಲ್ಲ.

ಎಸ್… ನಿಮ್ಮ ಊಹೆ ಸರಿಯಾಗಿದೆ. ಅವರೇ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ. ಇವರ ಬೆಂಬಲಕ್ಕೆ ಬಿಜೆಪಿಯಲ್ಲಿ ತೆರೆಯ ಹಿಂದೆ ಪ್ರಯತ್ನಗಳು ನಡೆದಿದ್ದಾಗಿ ನ್ಯಾಷನಲ್ ನ್ಯೂಸ್ ಚಾನೆಲ್ ವರದಿ ಮಾಡಿದೆ.

Image result for narayana murthy

2012ರಲ್ಲಿ ಕಾಂಗ್ರೆಸ್ ನಾಯಕ ಪ್ರಣಬ್ ಮುರ್ಖಜಿ ಅವರ ಅಧಿಕಾರ ಮುಂಬರು ಜುಲೈನಲ್ಲಿ ಕೊನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಭಾರತದ ಪ್ರಥಮ ಪ್ರಜೆಯ ಸ್ಥಾನಕ್ಕೆ ಮುಖಗಳನ್ನು ಹುಡುಕುತ್ತಿದ್ದು, ಇನ್ಫಿ ನಾರಾಯಣ್ ಮೂರ್ತಿ ಅವರ ಹೆಸರು ಸಹ ಕೇಳಿಬರುತ್ತಿದೆ.

Image result for narayana murthy and his wife
Credits; NDTV

ಈ ಹುದ್ದೆಗೆ ಕಮಲ ಪಾಳಯದ ಹಿರಿಯ ತಲೆಗಳಾದ ಮುರಳಿ ಮನೋಹರ್ ಜೋಶಿ, ಹಾಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ರಾಮ್ ನಾಯ್ಕ ಹೆಸರುಗಳು ಬಹುವಾಗಿ ಕೇಳಿ ಬರುತ್ತಿವೆ.

ಹಾಗಿದ್ದರೆ ದೇಶದ ಪ್ರಥಮ ಪ್ರಜೆ ಯಾರೂ, ಈ ಸ್ಥಾನದಲ್ಲಿ ಯಾರು ಕೂಡಲಿದ್ದಾರೆ ಎಂಬ ಪ್ರಶ್ನೆಗಳಿಗೆ ಜುಲೈನಲ್ಲಿ ಉತ್ತರ ಲಭಿಸಲಿದೆ.