ನರೇಂದ್ರ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್; ಮೇಲ್ಜಾತಿ ಬಡವರಿಗೆ ಉದ್ಯೋಗದಲ್ಲಿ ಬಾರಿ ಮೀಸಲಾತಿ..

0
496

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳ ಜನತೆಗೆ ಸರ್ಕಾರದಲ್ಲಿ ಶೇ. 10 ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಕೇಂದ್ರ ಸಂಪುಟ ಇಂದು ಸಮ್ಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ಜಾತಿಯ ವಿವಿಧ ವರ್ಗಗಳಿಗೆ ಈ ಮೀಸಲಾತಿಯು ವರದಾನವಾಗಲಿದೆ.

Also read: ಡ್ರೈವಿಂಗ್ ಲೈಸೆನ್ಸ್ಗೂ ತಟ್ಟಿದ ಆಧಾರ್ ಕಾರ್ಡ್ ಬಿಸಿ; ​ ಕೇಂದ್ರದಿಂದ ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ನಿಯಮ..

ಹೌದು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ರೈತರಿಗೆ ಭರ್ಜರಿ ಕೊಡುಗೆ ನೀಡಿ ಒಂದು ಎಕರೆ ಹೊಲಕ್ಕೆ 4 ಸಾವಿರ ಹಣ ಕೊಡುವ ಯೋಜನೆ ತಂದು ದೇಶದೆಲ್ಲೆಡೆ ಸುದ್ದಿಮಾಡಿ ರೈತರ ಮನಗೆದ್ದ ಮೋದಿ ಇಂದು ಮತ್ತೊಂದು ಕೊಡುಗೆಯನ್ನು ಇಂದು ನಡೆದ ಕೇಂದ್ರ ಕ್ಯಾಬಿನೆಟ್​ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ವರ್ಷಕ್ಕೆ 8 ಲಕ್ಷಕ್ಕೂ ಕಡಿಮೆ ಆದಾಯ ಇರುವ ಎಲ್ಲ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಲಭ್ಯವಾಗಲಿದೆ ಇದೆಲ್ಲದರ ಪರಿಣಾಮ ಲೋಕಸಭಾ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದ ಮಾದರಿಯಲ್ಲೇ ಮೇಲ್ವರ್ಗದವರಿಗೆ ಈ ಮೀಸಲಾತಿ ನೀಡಿ ಮೋದಿ ಹೊಸ ವರ್ಷದ ಆರಂಭದಲ್ಲೇ ಈ ಭರ್ಜರಿ ಗಿಫ್ಟ್ ಘೋಷಿಸಿ ಕೇಂದ್ರ ಸರ್ಕಾರ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಮೇಲ್ಜಾತಿ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ, ಈ ಸಂಬಂಧ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ನಾಳೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದೆ ಎಂದು ತಿಳಿದು ಬಂದಿದೆ.

Also read: ಮೋದಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಹೇಳಿರುವ ವೀಡಿಯೊ ವೈರಲ್, ಕಿಡಿಗೇಡಿಗಳು ಮಾಡಿರುವ ಈ ಸುಳ್ಳ ವೀಡಿಯೊವನ್ನು ನಂಬಬೇಡಿ!!

ಇದರಿಂದ ಪ್ರಸ್ತುತ ಇರುವ ಶೇ. 50 ಮೀಸಲಾತಿ ಪ್ರಮಾಣ ಶೇ. 60 ಕ್ಕೆ ಏರಿಕೆಯಾಗಲಿದೆ. ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಜನರಲ್​ ಕೆಟಗೆರಿಯ ಬಡ ಜನರಿಗೆ ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್​ ವಕ್ತಾರ ಅಭಿಷೇಕ್​ ಸಿಂಘ್ವಿ ತೀಕ್ಷಣವಾಗಿ ಟೀಕಿಸಿದ್ದು, ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ 8 ತಿಂಗಳ ನಂತರ ಮೀಸಲಾತಿಯಲ್ಲಿ ಬದಲಾವಣೆ ತಂದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಯಾರಿಗೆ ಸಿಗಲಿದೆ ಮೀಸಲಾತಿ?:

1. ಬ್ರಾಹ್ಮಣ, ಠಾಕೂರ್,​ ಜಾಟ್,​ ರಜಪೂತ್,​ ಬನಿಯಾ, ಪಟೇಲ್​
2. ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯ ಇರಬೇಕು.
3. 5 ಹೆಕ್ಟೇರ್​ಗಿಂತ ಕಡಿಮೆ ಕೃಷಿಭೂಮಿ ಹೊಂದಿರಬೇಕು.
4. 1,000 ಚದರ ಅಡಿಗಿಂತ ಹೆಚ್ಚು ವ್ಯಾಪ್ತಿಯ ಮನೆ ಇರಬಾರದು.
5. 109 ಯಾರ್ಡ್​ಗಿಂತ ದೊಡ್ಡ ವಸತಿ ಸ್ಥಳವನ್ನು ನಿಗದಿತ ಪಾಲಿಕೆ ವ್ಯಾಪ್ತಿಯಲ್ಲಿ ಹೊಂದಿರಬಾರದು.
6. ನಿಗದಿಯಾಗದ ಪಾಲಿಕೆಯ ವ್ಯಾಪ್ತಿಯಲ್ಲಿ 209 ಯಾರ್ಡ್​ಗಿಂತ ಹೆಚ್ಚು ವಸತಿ ಸ್ಥಳ ಹೊಂದಿರಬಾರದು.