ಮತ್ತೆ ಪ್ರಧಾನಿ ಮೊದಿಯವರಿಂದ ದೇಶದ ಜನರಿಗೆ ವಿಡಿಯೋ ಸಂದೇಶ; ಮೂರು ತಿಂಗಳು ಮುಂದುವರೆಯುತ್ತಾ ಲಾಕ್‍ಡೌನ್.?

0
232

ಕೊರೊನಾ ವೈರಸ್ ಕುರಿತು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಹಲವು ಮಾಹಿತಿಗಳನ್ನ ಜನರಿಗೆ ತಿಳಿಸಿದ್ದು, ಮತ್ತೆ ಮೂರನೇ ಭಾರಿಗೆ ಅಂದರೆ ನಾಳೆಯಂದು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಲಿದ್ದು, ಕಳೆದ ಭಾರಿ ಎಪ್ರಿಲ್ 14 ವರೆಗೆ ಲಾಕ್ಡೌನ್ ಬಗ್ಗೆ ಹೇಳಿ ಜನರಿಗೆ ಆಘಾತಕಾರಿ ಸುದ್ದಿ ತಿಳಿಸಿದ್ದರು, ಈ ಭಾರಿ ಯಾವ ಸುದ್ದಿಯನ್ನು ತಿಳಿಸಲಿದ್ದಾರೆ. ಎನ್ನುವ ಕುತೂಹಲ ಮೂಡಿದೆ. ಇಂದು ಈಗಾಗಲೇ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮಾಡಿ ಮಾತನಾಡಿದ್ದು, ನಾಳೆ ಯಾವ ವಿಚಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನುವುದು ಭಾರಿ ಕುತೂಹಲವೇ ಆಗಿದೆ. ಈ ಬಗ್ಗೆ ಮೋದಿಯವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ನಾಳೆ ದೇಶದ ಜನರಿಗೆ ಮೋದಿಯಿಂದ ಮತ್ತೊಂದು ಸುದ್ದಿ:

ಹೌದು ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಮೋದಿ ಅವರು, ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಇಂದು ಕೂಡ ದೇಶದ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್ ಮಾಡಿದ್ದರು. ಇದಾದ ನಂತರ ಅವರು ಟ್ವೀಟ್ ಮಾಡಿದ್ದು, ವಿಡಿಯೋ ಸಂದೇಶ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಮೋದಿ ಅವರು, ನಾಳೆ ಬೆಳಗ್ಗೆ 9 ಗಂಟೆಗೆ ಸರಿಯಾಗಿ, ಒಂದು ಚಿಕ್ಕ ವಿಡಿಯೋವನ್ನು ದೇಶದ ಜನರ ಜೊತೆ ಹಂಚಿಕೊಳ್ಳುತ್ತೇನೆ ಎಂದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆಯೂ ಕೊರೊನಾ ವಿಚಾರವಾಗಿ ದೇಶವನ್ನು ಉದ್ದೇಶಿಸಿ ಮೊದಲ ಬಾರಿ ಮಾತನಾಡಿದಾಗ ಒಂದು ದಿನದ ಜನತಾ ಕರ್ಫ್ಯೂ ಹಾಕಿದ್ದರು. ಇದಾದ ನಂತರ ಎರಡನೇ ಬಾರಿ ಮಾತನಾಡಿದ್ದ ಮೋದಿ 21 ದಿನ ದೇಶವವನ್ನು ಲಾಕ್‍ಡೌನ್ ಮಾಡುವುದಾಗಿ ಘೋಷಣೆ ಮಾಡಿದ್ದರು. ಈಗ ಯಾವ ವಿಷಯವನ್ನು ಹೇಳಲಿದ್ದಾರೆ ಎನ್ನುವುದು ಕಾದು ನೋಡಬೇಕು.

ಅದರಂತೆ ಈಗ ಮೋದಿ ಅವರು ವಿಡಿಯೋವನ್ನು ಶೇರ್ ಮಾಡುತ್ತೇನೆ ಎಂದು ಹೇಳಿರುವುದು ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಜೊತೆಗೆ ಈಗ ದೇಶದ ಜನರು ಏಪ್ರಿಲ್ 14ಕ್ಕೆ ಲಾಕ್‍ಡೌನ್ ಅಂತ್ಯವಾಗುತ್ತಾ ಇಲ್ಲ ಮುಂದುವರಿಯುತ್ತಾ ಎಂಬ ಗೊಂದಲದಲ್ಲಿ ಇದ್ದಾರೆ. ಮೋದಿ ನಾಳೆಯ ಈ ವಿಡಿಯೋದಲ್ಲಿ ಜನರ ಈ ಗೊಂದಲಕ್ಕೆ ತೆರೆ ಎಳೆಯುತ್ತಾರಾ? ಇಲ್ಲ ಲಾಕ್‍ಡೌನ್‍ಅನ್ನು ಮುಂದುವರಿಸುವುದರ ಬಗ್ಗೆ ಸುಳಿವು ನೀಡುತ್ತಾರಾ ಎನ್ನುವುದನ್ನು ತಿಳಿದಿಲ್ಲ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ ಮೋದಿಯವರು ಮುಂದಿನ ಕೆಲವು ವಾರಗಳು ಟೆಸ್ಟಿಂಗ್, ಟ್ರೇಸಿಂಗ್, ಐಸೊಲೇಷನ್ ಹಾಗೂ ಕ್ವಾರಂಟೈನ್ ಹೆಚ್ಚಿನ ಗಮನ ಹರಿಸಬೇಕಾದ ಅಂಶಗಳು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಅಗತ್ಯ ವೈದ್ಯಕೀಯ ಉತ್ಪನ್ನಗಳ ಪೂರೈಕೆ ವೈದ್ಯಕೀಯ ಉಪಕರಣಗಳ ತಯಾರಿಕೆ ಹಾಗೂ ಔಷಧಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಪೂರೈಕೆಯ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಕೋವಿಡ್-19 ರೋಗಿಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಆಯುಷ್ ವೈದ್ಯರ ಸಹಾಯ ಪಡೆದುಕೊಳ್ಳುವುದು ಆನ್ ಲೈನ್ ತರಬೇತಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳ ಬಳಕೆ ಎನ್ ಸಿಸಿ ಎನ್ಎಸ್ಎಸ್ ಸಿಬ್ಬಂದಿಗಳ ಬಳಕೆ ಮಾಡಿಕೊಳ್ಳುವಂತೆಯೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದು ಕೊರೋನಾ ವೈರಸ್ ಗೆ ಜೀವ ಹಾನಿಯನ್ನು ಅತ್ಯಂತ ಕಡಿಮೆ ಇರುವಂತೆ ನೋಡಿಕೊಳ್ಳಲು ಹೇಳಿದ್ದಾರೆ. ಅದರಂತೆ ನಾಳೆಯ ವೀಡಿಯೋದಲ್ಲಿ ಯಾವುದರ ಬಗ್ಗೆ ಹೇಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ.