ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ನಂತರ 56 ವಿದೇಶ ಪ್ರವಾಸ ಮಾಡಿದ್ದಾರಂತೆ

0
396

ನವದೆಹಲಿ, ಏಪ್ರಿಲ್ 6: ಮೇ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ, ಆ ನಂತರ 56 ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಬುಧವಾರ ಸಂಸತ್ತಿನಲ್ಲಿ ತಿಳಿಸಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪ್ರಧಾನಿ ಯಾವ ದೇಶಗಳಿಗೆ ಭೇಟಿ ನೀಡಿದ್ದಾರೆ ಎಂಬ ಪಟ್ಟಿ ಒದಗಿಸಿದ್ದಾರೆ. ಮೋದಿ ಅವರ ಮೊದಲ ವಿದೇಶ ಪ್ರವಾಸ ಜೂನ್ 2014ರಲ್ಲಿ ಆರಂಭವಾಗಿದ್ದು, ಅದು ಭೂತಾನ್ ಗೆ ಭೇಟಿ ನೀಡುವ ಮೂಲಕ.

 

ಆ ನಂತರ ಅಮೆರಿಕಕ್ಕೆ 4 ಬಾರಿ, ನೇಪಾಳ, ರಷ್ಯಾ, ಆಫ್ಘಾನಿಸ್ತಾನ, ಚೀನಾಗೆ ಎರಡು ಬಾರಿ ಪ್ರವಾಸ ಕೈಗೊಂಡಿದ್ದಾರೆ. ಸೆಪ್ಟೆಂಬರ್ 2014ರಲ್ಲಿ ವಾಷಿಂಗ್ಟನ್, ಜತೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‍ಗೆ ತೆರಳಿದ್ದರು. ಸೆಪ್ಟೆಂಬರ್ 2015ರಲ್ಲಿ ಮತ್ತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಲುವಾಗಿ ನ್ಯೂಯಾರ್ಕ್, ಆ ನಂತರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ಮತ್ತು ಸ್ಯಾನ್ ಹ್ಯೂಸೆ, ಕ್ಯಾಲಿಫೋರ್ನಿಯಾದಲ್ಲಿ ಫಾರ್ಚೂನ್ 500ನ ಸಿಇಒಗಳ ಜತೆಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು

ಆ ನಂತರ ಮೂರನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದು ಅಣು ರಕ್ಷಣಾ ಸಮಾವೇಶದ ಸಲುವಾಗಿ.

ನಾಲ್ಕನೇ ಬಾರಿಗೆ ಒಬಾಮ ಆಹ್ವಾನದ ಮೇರೆಗೆ ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಲು ತೆರಳಿದ್ದರು ನರೇಂದ್ರ ಮೋದಿ. ಸಾರ್ಕ್ ಸಮ್ಮೇಳನಕ್ಕಾಗಿ ನೇಪಾಳಕ್ಕೆ, ಎರಡು ಬಾರಿ ಜಪಾನ್, ರಷ್ಯಾಗೆ, ಹೊಸ ಸಂಸತ್ ಭವನದ ಉದ್ಘಾಟನೆಗೆ ಆಫ್ಘಾನಿಸತನಕ್ಕೆ ಪ್ರವಾಸ ಕೈಗೊಂಡಿದ್ದರು. ಚೀನಾ, ಮಂಗೋಲಿಯಾ, ಸೆಚೆಲ್ಲಾಸ್, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ…ಇವು ಪ್ರಧಾನಿ ಪ್ರವಾಸ ಕೈಗೊಂಡ ದೇಶಗಳ ಪಟ್ಟಿಯಲ್ಲಿವೆ.