ಶಾಂತಿ ಮಾತುಕತೆಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಪಾಕಿಸ್ತಾನದ 11 ವರ್ಷದ ಬಾಲೆ

0
526

ಶಾಂತಿ ಮಾತುಕತೆಗೆ ಮೋದಿಗೆ ಪತ್ರ ಬರೆದ ಪಾಕಿಸ್ತಾನದ ಬಾಲೆ

ನವದೆಹಲಿ:  ಪಾಕಿಸ್ತಾನದ 11 ವರ್ಷದ ಬಾಲೆ ಅಕಿದತ್ ನವೀದ್ ಎಂಬಾಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ.

11 ವರ್ಷದ ಅಖೀದತ್ ನವೀದ್ ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾಳೆ.  ಅಷ್ಟೇ ಅಲ್ಲ, ಉಭಯ ದೇಶಗಳ ನಡುವೆ ಸೇತುವೆಯಾಗಿದ್ದು, ಶಾಂತಿ ನೆಲೆಗೊಳ್ಳುವಂತೆ ಮಾಡಿ ಎಂದೂ ಮನವಿ ಮಾಡಿದ್ದಾಳೆ.

“ಬಹುಶಃ ನೀವು ಭಾರತೀಯರ ಹೃದಯ ಗೆದ್ದಿದ್ದೀರಿ. ಅದಕ್ಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ. ಅದೇ ರೀತಿ ಪಾಕಿಸ್ತಾನಿಯರ ಹೃದಯ ಗೆಲ್ಲಿ. ಎರಡೂ ದೇಶಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸಿ. ನಾವು ಬುಲೆಟ್ ಗಳಿಗಿಂತ, ಬುಕ್ ಖರೀದಿಸುವಂತಾಗಲಿ,  ನಾವು ಗನ್ ಖರೀದಿಸುವುದು ಬೇಡ. ಬಡವರಿಗೆ ಔಷಧಿ ಖರೀದಿಸೋಣ” ಎಂದು ಈ ಪುಟ್ಟ ಪೋರಿ ತನ್ನದೇ ರೀತಿಯಲ್ಲಿ ಪತ್ರ ಬರೆದಿದ್ದಾಳೆ. ಇದಕ್ಕೆ ಪ್ರಧಾನಿ ಮೋದಿ ಹೇಗೆ ಸ್ಪಂದಿಸುತ್ತಾರೆ ನೋಡಬೇಕು.

ಲಾಹೋರ್‌ ನಿವಾಸಿಯಾಗಿರುವ ಅಕಿದತ್‌ನ ಸಹೋದರ ಮೊರಿಕ್‌ ನವೀದ್‌ (14) ಕೂಡ ಕೈಬರಹದ ಪತ್ರವನ್ನು ಬರೆದಿದ್ದಾರೆ. ಅದು ಪಾಕ್‌ ಸೇನಾ ಮುಖ್ಯಸ್ಥ ಖಮರ್‌ ಜಾವಿದ್‌ ಬಾಜ್ವಾ ಅವರಿಗೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿ ಉಗ್ರರ ಹುಟ್ಟಡಗಿಸಿದ್ದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನೆರೆರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಬಾಂಧವ್ಯ ವೃದ್ಧಿಗೆ ಶಾಂತಿ ಮಾತುಕತೆ ನಡೆಸಿ ಸಹಬಾಳ್ವೆ ನಡೆಸಲು ಉಭಯ ದೇಶಗಳ ನಾಯಕರು ಮುಂದಾಗಬೇಕು ಎಂದು ಕೋರಿದ್ದಾರೆ.