ಶ್ರೀ ರಾಮ ಎಂದರೇ ಒಂದು ಶಕ್ತಿ.. ರಾಮಸೇತುವೆ ಮಾನವ ನಿರ್ಮಿತ ಎಂದು ಸಾಬೀತು ಮಾಡಿದ ಅಮೇರಿಕಾ ಸಂಶೋಧಕರುಗಳು…

0
2228

ಕೆಲವು ವರ್ಷಗಳ ಹಿಂದೆ ಶ್ರೀ ರಾಮ ಸೇತುವನ್ನು ಪ್ರಾಕೃತಿಕವಾಗಿ ನಿರ್ಮಾಣವಾದದ್ದೂ.. ಇದು ಶ್ರೀ ರಾಮ ನಿರ್ಮಾಣ ಮಾಡಿದ್ದಲ್ಲ ಎಂದು ಕೆಲವರು ಹೇಳಿದ್ದರು.. ಆದರೇ ಇದೀಗ ಅಮೇರಿಕಾ ಸಂಶೋಧಕರು ಇದು ಮಾನವ ನಿರ್ಮಿತ ಸೇತುವೆ ಎಂದು ನಿರೂಪಿಸಿದ್ದಾರೆ..

ಹೌದು ರಾಮಾಯಣದ ಪ್ರಕಾರ ಸೀತೆಯನ್ನು ಕರೆತರಲು.. ರಾವಣನ ಸಂಹಾರ ಮಾಡಲು ಲಂಕೆ ಗೆ ಹೋಗುವಾಗ ಸಮುದ್ರವನ್ನು ದಾಟಲು ಶ್ರೀರಾಮ ನ ಸೇನೆ ನಿರ್ಮಾಣ ಮಾಡಿದ ಸೇತುವೆಯೇ ಈ ರಾಮ ಸೇತು.. ಆದರೆ ಪುರಾಣ ಅರಿಯದ ಮೂಢರು ಇದನ್ನು ಪ್ರಕೃತಿದತ್ತವಾದದ್ದು ಎಂದಿದ್ದರು.. ಆದರೆ ಸ್ಯಾಟಲೈಟ್ ಮೂಲಕ ತೆಗೆದಂತಹ ಚಿತ್ರಗಳನ್ನು ಇಟ್ಟುಕೊಂಡು ಆಳವಾಗಿ ಅಧ್ಯಯನ ಮಾಡಿದ ಅಮೇರಿಕಾ ವಿಜ್ನಾನಿಗಳು.

ರಾಮ ಸೇತುವೆ ಒಂದು ಮಾನವ ನಿರ್ಮಿತವಾದದ್ದು ಎಂದು ನಿರೂಪಿಸಿದ್ದಾರೆ. ಸೇತುವೆಗೆ ಬಳಸಿರುವ ಕಲ್ಲುಗಳು ಸುಮಾರು 4000 ವರ್ಷಗಳ ಹಳೆಯದ್ದು ಎಂದಿದ್ದಾರೆ.. ಜೊತೆಗೆ ಇದು ಪ್ರಾಕೃತಿಕವಾಗಿ ನಿರ್ಮಾಣ ಹೊಂದಿದ್ದಲ್ಲ ಎಂದಿದ್ದಾರೆ. ಶ್ರೀರಾಮನ ಶಕ್ತಿಗೆ ಉದಾಹರಣೆಯಾಗಿರುವ ಈ ಸೇತುವೆ ಬರೊಬ್ಬರಿ 36 ಕಿ.ಮೀ ಗಳಷ್ಟು ಉದ್ದವಿದೆ.. ಈ ರಾಮ ಸೇತುವಿನ ಒಂದು ರೋಚಕ ಕಥೆ ಏನೆಂದರೆ.

ಶ್ರೀ ರಾಮನ ಸೈನ್ಯ, ಸೇತುವೆ ಕಟ್ಟಿ, ಸಮುದ್ರವನ್ನು ದಾಟಿ ಲಂಕೆಯನ್ನು ಸೇರಿ ಅಲ್ಲಿ ರಾವಣನ ಸಂಹಾರ ಮಾಡುತ್ತಾರೆ.. ನಂತರ ಸೀತೆಯೊಂದಿಗೆ ಅಯೋದ್ಯೆಗೆ ಮರಳುವಾಗ ಪುಷ್ಪಕ ವಿಮಾನ ವನ್ನು ಬಳಸುತ್ತಾರೆ.. ಪುಷ್ಪಕ ವಿಮಾನದಲ್ಲಿ ಹೋಗುವಾಗ ಈ ಅತ್ಯಧ್ಬುತ ಸೇತುವೆಯನ್ನು ಮೇಲಿನಿಂದ ನೋಡಿದ ಶ್ರೀರಾಮ ಆಶ್ಚರ್ಯಗೊಂಡು ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ತಂತ್ರಜ್ಞಾನಿಯಾದ “ನಳ” ನಿಗೆ ಇದರ ಪ್ರಶಂಸೆ ಸಿಗಬೇಕೆಂದು ಈ ಸೇತುವೆಯನ್ನು “ನಳ ಸೇತು” ಎಂದು ನಾಮಕರಣ ಮಾಡುತ್ತಾರೆ.. ಆದರೆ ಹೆಚ್ಚಿನ ಮಂದಿ ಇದನ್ನು ರಾಮಸೇತು ವೆಂದೇ ಕರೆಯುವರು. ಏನೇ ಆಗಲಿ ಶ್ರೀ ರಾಮನ ಶಕ್ತಿಯ ಮುಂದೆ ಬೇರೆ ಏನೇನು ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಜೈ ಶ್ರೀ ರಾಮ್ ಎನ್ನುತ್ತಾ ಶೇರ್ ಮಾಡಿ.. ಇತರರಿಗೂ ಈ ವಿಷಯ ಮುಟ್ಟಲಿ..